ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಲ್ಲರನ್ನೂ ಕಾಡುವ ಕಾಯಿಲೆಯಾಗಿದೆ ಎರಡು ಸಾವಿರದ ಹತ್ತೊಂಬತ್ತರ ಸರ್ವೇ ಪ್ರಕಾರ ವಿಶ್ವದಲ್ಲಿ ಸುಮಾರು ನಾಲ್ಕು ನೂರಾ ಅರವತ್ಮುರು ಮಿಲಿಯನ್ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಮ್ಮ ದೇಹದಲ್ಲಿನ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಮತ್ತು ಗ್ಲೂಕೋಸ್ ಅಧಿಕವಾದರೆ ಸಕ್ಕರೆ ಕಾಯಿಲೆ ರೋಗ ಕಾಣಿಸಿಕೊಳ್ಳುತ್ತದೆ. ಒಂದು ಸಾರಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡರೆ ನೀವು ಕೇವಲ ಮಾತ್ರೆಯನ್ನು ತೆಗೆದುಕೊಂಡರೆ ಅದು ಕಡಿಮೆಯಾಗುವಂತಹ ರೋಗವಲ್ಲ ಹಾಗಾಗಿ ನೀವು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಬೇಕು ಎಂದರೆ ಪ್ರತಿನಿತ್ಯ ವ್ಯಾಯಾಮ ಮಾಡಬೇಕು. ಹಾಗೂ ಕೆಲವೊಂದಿಷ್ಟು ಮನೆಮದ್ದುಗಳನ್ನು ಸೇವನೆ ಮಾಡುವುದರ ಮುಖಾಂತರ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಬಹುದು.

ನಾವಿಂದು ನಿಮಗೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಮಾಡಬಹುದಾದ ಉತ್ತಮವಾದ ಮನೆಮದ್ದನ್ನು ತಿಳಿಸಿ ಕೊಡುತ್ತೇವೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಉತ್ತಮವಾದ ಮನೆಮದ್ದು ಎಂದರೆ ಅದು ಮೆಂತೆಕಾಳು. ಮೆಂತೆಕಾಳಿನಲ್ಲಿ ಕ್ಯಾಲಿಟೋ ಮಿನನ್ ಎನ್ನುವ ನಾರಿನಂಶ ಇದೆ. ಇದು ರಕ್ತದಲ್ಲಿರುವ ಸಕ್ಕರೆ ಇರುವಕೆಯನ್ನು ತಗ್ಗಿಸುತ್ತದೆ ಮತ್ತು ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರಲು ಸಹಾಯ ಮಾಡುತ್ತದೆ. ಹಾಗಾದರೆ ಇಷ್ಟು ಉತ್ತಮ ಗುಣಗಳನ್ನು ಹೊಂದಿರುವ ಮೆಂತೆಯನ್ನು ಯಾವ ರೀತಿಯಾಗಿ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೊದಲು ಮೆಂತೆ ಕಾಳುಗಳನ್ನು ಪುಡಿ ಮಾಡಿಟ್ಟುಕೊಳ್ಳಬೇಕು ನಂತರ ಒಂದು ಲೋಟಕ್ಕೆ ಎರಡು ಚಮಚ ಮೊಸರನ್ನ ಹಾಕಿ ಅದಕ್ಕೆ ಒಂದು ಚಮಚ ಮೆಂತೆ ಕಾಳಿನ ಪುಡಿಯನ್ನು ಹಾಕಬೇಕು ನಿಮಗೆ ಮೊಸರು ಹೆಚ್ಚಿನ ಪ್ರಮಾಣದಲ್ಲಿ ಬೇಕು ಎಂದರೆ ಇನ್ನೂ ಸ್ವಲ್ಪ ಹಾಕಿಕೊಳ್ಳಬಹುದು. ನಂತರ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಎರಡರಿಂದ ಮೂರು ತಾಸು ಹಾಗೆಯೇ ಬಿಟ್ಟು ನಂತರ ಅದನ್ನು ಸೇವಿಸಬೇಕು. ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ ನೀವು ಇದನ್ನು ದಿನಬಿಟ್ಟು ದಿನ ಅಥವಾ ಪ್ರತಿದಿನ ಸೇವಿಸಬಹುದು. ಒಂದು ವೇಳೆ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಮಾನ್ಯವಾಗಿದ್ದರೆ ವಾರದಲ್ಲಿ ಒಂದು ಅಥವಾ ಎರಡು ದಿನ ಇದನ್ನು ಸೇವನೆ ಮಾಡಬಹುದು. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಬೇಗನೆ ನಿಯಂತ್ರಣಕ್ಕೆ ಬರುತ್ತದೆ.

ಮೊಸರು ಮತ್ತು ಮೆಂತೆ ಕಾಳಿನ ಮಿಶ್ರಣವನ್ನು ಯಾವುದೇ ಕಾರಣಕ್ಕೂ ರಾತ್ರಿ ನೆನೆಯಿಟ್ಟು ಬೆಳಿಗ್ಗೆ ಸೇವಿಸಬಾರದು ಮತ್ತು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿರುವವರು ಇದನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು. ಏಕೆಂದರೆ ಮೆಂತೆಯನ್ನು ಸೇವಿಸುವುದರಿಂದ ಹೊಟ್ಟೆ ಗಟ್ಟಿಯಾಗುತ್ತದೆ ಎಂದು ಹೇಳುವ ಮಾತಿದೆ. ಹಾಗಾಗಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿರುವವರು ಮೊಸರು ಮತ್ತು ಮೆಂತೆ ಮಿಶ್ರಣವನ್ನು ತಿನ್ನುದೇ ಇರುವುದು ಒಳ್ಳೆಯದು.

ನೀವು ಕೂಡ ಸಕ್ಕರೆ ಕಾಯಿಲೆಯ ಸಮಸ್ಯೆ ಎದುರಿಸುತ್ತಿದ್ದರೆ ನಾವು ತಿಳಿಸಿರುವ ಈ ಮನೆಮದ್ದನ್ನು ಹೆಚ್ಚು ಖರ್ಚಿಲ್ಲದೆ ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *