ನಮ್ಮ ದೇಶ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಕೃಷಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಕೆಲವು ರೈತರು ಸರ್ಕಾರದ ಜಾಗದಲ್ಲಿ ಕೃಷಿ ಮಾಡುತ್ತಾ ಇದ್ದಾರೆ ಅದರಲ್ಲಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡರೆ ಸಕ್ರಮ ಮಾಡಿಕೊಳ್ಳಬಹುದಾ ಇಲ್ಲವಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ನಮ್ಮ ಭಾರತ ದೇಶ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಚೀನಾವನ್ನು ಕೂಡ ಮೀರಿಸಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತದಲ್ಲಿ ಭೂಮಿಯ ವಿಸ್ತೀರ್ಣ ಕಡಿಮೆ ಇದೆ ಕಡಿಮೆ ಎಂದರೆ ತೀರಾ ಕಡಿಮೆ ಅಲ್ಲ ಜನಸಂಖ್ಯೆಗೆ ಹೋಲಿಸಿದರೆ ಹಾಗೂ ಬೇರೆ ದೇಶಗಳ ಭೂಮಿಯ ವಿಸ್ತೀರ್ಣಕ್ಕೆ ಹೋಲಿಸಿದರೆ ಕಡಿಮೆ ಎನಿಸುತ್ತದೆ. ಇನ್ನು ನಮ್ಮ ದೇಶದಲ್ಲಿ ಪ್ರತಿಯೊಂದು ರೀತಿಯ ಭೂಮಿಗಳಿಗೂ ಅದರದೆ ಆದ ಕಾನೂನನ್ನು ಭಾರತ ಸಂವಿಧಾನದಲ್ಲಿ ಈಗಾಗಲೆ ಪ್ರಸ್ತುತಪಡಿಸಲಾಗಿದೆ. ಇವತ್ತಿಗೂ ಕೂಡ ಭೂಮಿ ವಿಚಾರದ ಬಗ್ಗೆ ಇರುವ ಕಾನೂನು ಮಾಹಿತಿ ಜ್ಞಾನ ಜನಸಾಮಾನ್ಯರಲ್ಲಿ ಇಲ್ಲ. ಗೋಮಾಳದ ಜಮೀನನ್ನು ಸಕ್ರಮ ಮಾಡಿಕೊಳ್ಳುವುದರ ಬಗ್ಗೆ ಇರುವ ಕಾನೂನು ನಿಯಮಗಳನ್ನು ತಿಳಿದುಕೊಳ್ಳಬೇಕು.

ಗೋಮಾಳದ ಜಮೀನು ಎಂದರೆ ಏನು ಎನ್ನುವುದನ್ನು ಸರಳ ಭಾಷೆಯಲ್ಲಿ ನೋಡುವುದಾದರೆ ಗೋಮಾಳದ ಜಮೀನು ಎಂದರೆ ಸರ್ಕಾರ ಪ್ರತಿಯೊಂದು ಗ್ರಾಮಗಳಲ್ಲಿ ದನಕರುಗಳಿಗೆ ಮೇವು ತಿನ್ನಲು ಮಿಸಲಾಗಿರಿಸುವಂತಹ ಒಂದು ಜಾಗವನ್ನು ಗೋಮಾಳ ಎನ್ನುವರು. ಗೋಮಾಳದ ಜಮೀನನ್ನು ಸಾಕಷ್ಟು ರೈತರು ಒತ್ತುವರಿ ಮಾಡಿಕೊಂಡು ಸಾಕಷ್ಟು ವರ್ಷಗಳಿಂದ ಕೃಷಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ ಇದು ಅಕ್ರಮ ಒತ್ತುವರಿಯಾಗಿರುತ್ತದೆ ಆದರೆ ಸಕ್ರಮಕ್ಕೆ ಅವಕಾಶವಿದೆ. ಗೋವುಗಳಿಗೆ ಮೀಸಲಾದ ಗೋಮಾಳ ಜಾಗದಲ್ಲಿ ಯಾವುದೆ ಕಾರಣಕ್ಕೂ ಅಕ್ರಮ ಗಣಿಗಾರಿಕೆ ನಡೆಸಲು ಅನುಮತಿ ಇರುವುದಿಲ್ಲ. ಕೃಷಿ ಸಂಬಂಧಿತ ಅದರಲ್ಲೂ ಪಶುಗಳ ಮೇವಿನ ಪ್ರದೇಶ ಇದಾಗಿರುತ್ತದೆ. ಒಂದು ವೇಳೆ ರೈತರು ಹಲವು ವರ್ಷಗಳಿಂದ ಗೋಮಾಳದ ಜಾಗದಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದರೆ ಅವರ ಹೆಸರಿನಲ್ಲಿ ಸಕ್ರಮ ಮಾಡಿಕೊಳ್ಳಬಹುದು.

ರೈತರು ಆಯಾ ಭಾಗಕ್ಕೆ ಸಂಬಂಧಿಸಿದ ತಹಶೀಲ್ದಾರರನ್ನು ಭೇಟಿಯಾಗಿ ಗೋಮಾಳದ ಅಕ್ರಮ ಒತ್ತುವರಿ ಭೂಮಿಯನ್ನು ತಮ್ಮ ಹೆಸರಿಗೆ ಸಕ್ರಮ ಮಾಡಿಕೊಡಲು ಕೋರಿಕೆಯನ್ನು ನೀಡಬೇಕು. ಸಂಬಂಧಿಸಿದ ದಾಖಲೆಗಳನ್ನು ಹಾಗೂ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದ ನಂತರ ಸರ್ಕಾರ ಗೋಮಾಳದ ಜಮೀನನ್ನು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿರುವ ರೈತನ ಹೆಸರಿಗೆ ಸಕ್ರಮ ಮಾಡಿಕೊಡುತ್ತದೆ. ಹೀಗೆ ಗೋಮಾಳ ಜಮೀನನ್ನು ರೈತರು ಸಕ್ರಮ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲ ರೈತರಿಗೂ ತಿಳಿಸಿ.

Leave a Reply

Your email address will not be published. Required fields are marked *