ಎಪಿಎಲ್ (BPL) ಪಡಿತರ ಕಾರ್ಡ್ ಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಜೂನ್ ನಿಂದ ಕಾರ್ಡ್ ವಿತರಣೆಗೆ ಮರು ಚಾಲನೆ ನೀಡಲಾಗುವುದು ಎಂದು ಆಹಾರ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಚುನಾವಣೆ ಮುಗಿದ ನಂತರ ಅರ್ಹರು ಅರ್ಜಿ ಸಲ್ಲಿಸಿ ಎಪಿಎಲ್ ಕಾರ್ಡ್ ಪಡೆಯಬಹುದು. ಹಾಗಾದರೆ ಹೊಸ ಎಪಿಎಲ್ ಪಡಿತರ ಕಾರ್ಡ್ ಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಎಪಿಎಲ್ ಕಾರ್ಡ್ ವಿತರಣೆಗೆ ಮರುಚಾಲನೆ ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ. ಜೂನ್ ತಿಂಗಳಲ್ಲಿ ಹೊಸ ಎಪಿಎಲ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನಿಸಲು ಇಲಾಖೆ ತೀರ್ಮಾನಿಸಿದೆ. ಅರ್ಹರು ಹೊಸ ಎಪಿಎಲ್ ಕಾರ್ಡ್ ಪಡೆಯಲು ಆನಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಈ ವೆಬ್ ಪೋರ್ಟಲ್ ಅನ್ನು ಸುಮಾರು ಒಂದೂವರೆ ವರ್ಷದಿಂದಲೂ ಸ್ಥಗಿತಗೊಳಿಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಜೂನ್ ಮೊದಲ ವಾರದಲ್ಲಿ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿತ್ತು ಅದಕ್ಕೂ ಮೊದಲು ಚುನಾವಣೆ ತಯಾರಿ ನಡೆಸಲಾಗುತ್ತಿತ್ತು ಜೊತೆಗೆ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯು ಮುಗಿದಿತ್ತು ಹೀಗಾಗಿ ಸುಮಾರು ಒಂದೂವರೆ ವರ್ಷದಿಂದ ಎಪಿಎಲ್ ಪಡಿತರ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆನಲೈನ್ ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಿರಲಿಲ್ಲ. ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ, ಗೃಹಲಕ್ಷ್ಮೀ ಮತ್ತಿತ್ತರ ಯೋಜನೆಗಳನ್ನು ಜಾರಿಗೆ ತಂದಿತು ಅವುಗಳ ಪ್ರಯೋಜನ ಪಡೆಯಲು ಲಕ್ಷಾಂತರ ಜನ ಅರ್ಜಿ ಸಲ್ಲಿಸಲು ಕಾಯುತ್ತಿದ್ದರು ಆದರೆ ಈ ಯೋಜನೆಗೆ ಹೆಚ್ಚಿನ ಅರ್ಜಿ ಬಂದೆ ಬರುತ್ತದೆ ಎಂದು ಅರಿತ ಸರ್ಕಾರ ಹೊಸ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪೋರ್ಟಲ್ ಅನ್ನು ಬಿಡಲೆಇಲ್ಲ ಹೀಗಾಗಿ ಅಂದಿನಿಂದ ಲಕ್ಷಾಂತರ ಜನರು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ನೇ ತಾರೀಖಿಗಿದೆ ಜೂನ್ 5 ನೇ ತಾರೀಖಿಗೆ ಚುನಾವಣಾ ಎಲ್ಲ ನಿರ್ಬಂಧಗಳು ತೆರವಾಗಲಿದೆ ನಂತರ ಕರ್ನಾಟಕದಲ್ಲಿ ಪಡಿತರ ಕಾರ್ಡ್ ಹಂಚಿಕೆ ಕಾರ್ಯ ನಡೆಯಲಿದೆ.

ಇನ್ನೊಂದು ಮುಖ್ಯ ವಿಚಾರವೆಂದರೆ ಕಳೆದ ವರ್ಷ ಮಧ್ಯಭಾಗದಲ್ಲಿ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಸಾಕಷ್ಟು ಬಾರಿ ಅವಕಾಶ ಕೊಟ್ಟಿತ್ತು ಆದರೆ ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳಿಗೆ ತಿದ್ದುಪಡಿ ಸಾಧ್ಯವಾಗಲಿಲ್ಲ ಇನ್ನು ಹೊಸ ಎಪಿಎಲ್ ಪಡಿತರ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಕಷ್ಟು ಜನರು ಕಾಯುತ್ತಿದ್ದರು ಸರ್ಕಾರ ಅವಕಾಶ ನೀಡಿರಲಿಲ್ಲ. ನಿಮ್ಮ ರೇಷನ್ ಕಾರ್ಡ್ ನ ಸ್ಟೇಟಸ್ ತಿಳಿಯಲು https://ahara.kar.nic.in/WebForms/Show_RationCard.aspx ಈ ವೆಬ್ಸೈಟ್ ಗೆ ಭೇಟಿ ನೀಡಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳಿಗೆ https://ahara.kar.nic.in/Home/EServices ಈವೆಬ್ಸೈಟ್ ಗೆ ಭೇಟಿ ನೀಡಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅರ್ಹರು ಹೊಸ ಎಪಿಎಲ್ ಪಡಿತರ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *