ಇತ್ತೀಚಿನ ದಿನಗಳಲ್ಲಿ ಕೃಷಿಯತ್ತ ಜನರು ಮುಖ ಮಾಡುತ್ತಿದ್ದಾರೆ, ತಮ್ಮ ಬಳಿ ಇರುವ ಸಣ್ಣ ಜಾಗವನ್ನು ಜೋಪಾನ ಮಾಡುತ್ತಿದ್ದಾರೆ. ಕೃಷಿ ಮಾಡುವ ಮೂಲಕ ಲಕ್ಷ ಸಂಪಾದನೆ ಮಾಡಬಹುದು ಆದರೆ ಬೆಳೆ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ತುಳಸಿ ಗಿಡದ ಕೃಷಿ ಮಾಡುವ ಮೂಲಕ ಲಕ್ಷ ಆದಾಯ ಗಳಿಸಬಹುದು. ಹಾಗಾದರೆ ತುಳಸಿ ಗಿಡದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ತುಳಸಿ ಗಿಡದ ಕೃಷಿಯನ್ನು ಮಾಡಿದರೆ ಲಾಭ ಹೆಚ್ಚು ಖರ್ಚು ಕಡಿಮೆ ಅಲ್ಲದೆ ಮೂರು ತಿಂಗಳಲ್ಲಿ ಇಳುವರಿ ಬರುತ್ತದೆ, ಐದು ಲಕ್ಷ ಲಾಭವಾಗುತ್ತದೆ. ತುಳಸಿಯನ್ನು ಚಹಾ ಕಾಫಿ ತಂಪು ಪಾನೀಯ, ಐಸ್ಕ್ರೀಮ್, ಜಾಮ್, ಜೆಲ್ಲಿ, ಉಪ್ಪಿನಕಾಯಿ, ಕೇಕ್, ಪೆಸ್ಟ್ರಿ, ಬಿಸ್ಕತ್, ಟೂತ್ ಪೇಸ್ಟ್, ಮೌತ್ ವಾಷ್ ಹೀಗೆ ಎಲ್ಲದಕ್ಕೂ ಕೂಡ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಬೆಂಗಳೂರು ಹೀಗೆ ದೊಡ್ಡ ದೊಡ್ಡ ಸಿಟಿಗಳಲ್ಲಿ ಉದ್ಯಮಗಳನ್ನು ಬಿಟ್ಟು ಹಳ್ಳಿಯಲ್ಲಿ ಕೃಷಿ ಮಾಡುವುದರ ಕಡೆ ಗಮನ ಹರಿಸುತ್ತಿದ್ದಾರೆ. ಕೃಷಿ ಆಧಾರಿತ ವ್ಯಾಪಾರ ಮಾಡಿ ಲಕ್ಷಗಟ್ಟಲೆ ಆದಾಯ ಪಡೆಯುತ್ತಿದ್ದಾರೆ. ಔಷಧೀಯ ಸಸ್ಯಗಳನ್ನು ಬೆಳೆಸಿ ಹೆಚ್ಚು ಲಾಭವನ್ನು ಗಳಿಸುತ್ತಿದ್ದಾರೆ ಈಗಾಗಲೆ ಅನೇಕ ಜನರು ಔಷಧೀಯ ಸಸ್ಯಗಳನ್ನು ಬೆಳೆಸಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ತಮ್ಮ ಜಮೀನಿನಲ್ಲಿ ಶತಾವರಿ ಸರ್ಪಗಂಧ ತುಳಸಿ ಗಿಡಗಳನ್ನು ಬೆಳೆಸಬಹುದು ಈ ಕೃಷಿ ಮಾಡಲು ಎಕರೆಗಟ್ಟಲೆ ಜಮೀನಿನ ಅವಶ್ಯಕತೆ ಇರುವುದಿಲ್ಲ. ಮನೆಯ ಹತ್ತಿರ ಕಡಿಮೆ ಜಾಗದಲ್ಲಿ ಅಂಗಳದ ಸುತ್ತ ಸಣ್ಣ ಜಾಗವಿದ್ದರೂ ಈ ಗಿಡಗಳನ್ನು ಬೆಳೆಸಬಹುದು. ಹಳ್ಳಿಗಳಲ್ಲಿ ಈಗೀಗ ಸಸ್ಯಗಳನ್ನು ಅದರಲ್ಲೂ ಔಷಧೀಯ ಸಸ್ಯಗಳನ್ನು ಬೆಳೆಸುತ್ತಾರೆ. ಔಷಧೀಯ ಸಸ್ಯಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ, ತುಳಸಿ ಗಿಡದ ಕಡಿಮೆ ಉತ್ಪಾದನೆ ಇದ್ದಾಗಿಯೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಔಷಧೀಯ ಸಸ್ಯಗಳನ್ನು ಬೆಳೆಸುವುದರಿಂದ ಹೆಚ್ಚಿನ ಲಾಭವನ್ನು ಗಳಿಸುವುದಲ್ಲದೆ ಈ ಕೃಷಿಗೆ ಸರ್ಕಾರ ಉತ್ತೇಜನ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ತುಳಸಿ, ಅಲೋವೆರಾ, ಅಶ್ವಗಂಧ ಗಿಡಗಳನ್ನು ಹೆಚ್ಚು ಬೆಳೆಸುತ್ತಿದ್ದಾರೆ.

ಧಾರ್ಮಿಕವಾಗಿಯೂ ತುಳಸಿಗೆ ಮಹತ್ವವನ್ನು ನೀಡಲಾಗುತ್ತದೆ, ಪ್ರತಿದಿನ ದೇವರ ಪೂಜೆಗೆ ತುಳಸಿ ಇರಲೇಬೇಕು ಅಲ್ಲದೆ ಹೆಚ್ಚಿನ ಸಾವಯವ ಅಂಶವು ಈ ತುಳಸಿಯಲ್ಲಿದೆ. ಮರಳು ಮಿಶ್ರಿತ ಮಣ್ಣಿನಲ್ಲಿ ತುಳಸಿ ಗಿಡವನ್ನು ಬೆಳೆಸಬಹುದು, ಆರರಿಂದ ಎಂಟರವರೆಗೆ ಪಿ ಎಚ್ಚ್ ಮಟ್ಟ ಇರಬೇಕು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ತುಳಸಿ ಬಿತ್ತನೆ ಮಾಡಲು ಸೂಕ್ತ ಸಮಯವಾಗಿದೆ. ತುಳಸಿ ಗಿಡಗಳನ್ನು 18 ಇಂಚು ದೂರದಲ್ಲಿ ನೆಡಬೇಕು. ತುಳಸಿಯನ್ನು ಒಣಗಿಸಿ ಬೇರೆ ಬೇರೆ ಉತ್ಪನ್ನಗಳ ತಯಾರಿಕೆ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ತುಳಸಿ ಗಿಡಗಳನ್ನು ಬೆಳೆಸಲು ಹದಿನೈದು ಸಾವಿರ ರೂಪಾಯಿ ಖರ್ಚಾಗುತ್ತದೆ ಆದರೆ ಮೂರು ಲಕ್ಷಕ್ಕೂ ಹೆಚ್ಚು ಲಾಭ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನೀವು ತುಳಸಿ ಗಿಡಗಳನ್ನು ನಿಮ್ಮ ಮನೆಯ ಸುತ್ತಲಿನ ಜಾಗದಲ್ಲಿ ಬೆಳೆಸಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

Leave a Reply

Your email address will not be published. Required fields are marked *