ಮಾಂಸಾಹಾರಕ್ಕಿಂತಲೂ ಹೆಚ್ಚಿನ ಪೋಷಕಾಂಶ ನೀಡುತ್ತೆ ಈ ಕಡ್ಲೆಬೀಜ, ಇದರ ಸೇವನೆ ಹೀಗಿರಲಿ

0 110

ಭೂಮಿಯ ಮೇಲೆ ಇರುವ ಪ್ರತಿಯೊಂದು ಆಹಾರ ಪದಾರ್ಥವು ತನ್ನದೇ ಆದ ಪೌಷ್ಟಿಕಾಂಶವನ್ನು ಒಳಗೊಂಡಿರುತ್ತದೆ. ಅದೇ ರೀತಿ ಮಾಂಸಾಹಾರವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಂದಲ್ಲ ಒಂದು ರೀತಿಯ ಪೋಷ್ಟಿಕಾಂಶ ದೊರೆಯುತ್ತದೆ ಆದರೆ ಎಲ್ಲರಿಗೂ ಕೂಡ ಮಾಂಸಾಹಾರವನ್ನು ಸೇವನೆ ಮಾಡುವುದಕ್ಕೆ ಆಗುವುದಿಲ್ಲ. ಕಾರಣ ಅದು ತುಂಬಾ ದುಬಾರಿಯಾಗುತ್ತದೆ ಮತ್ತು ಇನ್ನು ಕೆಲವರು ಅದನ್ನು ಸೇವಿಸುವುದಕ್ಕೆ ಇಷ್ಟಪಡುವುದಿಲ್ಲ. ಮನೆಯಲ್ಲಿಯೇ ಇರುವ ಸಸ್ಯಾಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದಲೂ ಕೂಡ ಮಾಂಸಾಹಾರದಲ್ಲಿ ಸಿಗುವ ಪೌಷ್ಟಿಕಾಂಶ ಸಿಗುತ್ತದೆ. ಸಸ್ಯಾಹಾರಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದಲೂ ಕೂಡ ನಮ್ಮ ದೇಹಕ್ಕೆ ಬೇಕಾಗುವಂತಹ ನ್ಯೂಟ್ರಿಷಿಯನ್ ಮುತ್ತು ಪೌಷ್ಠಿಕಾಂಶಗಳು ದೊರೆಯುತ್ತವೆ ಹಾಗಾದರೆ ಅಂತಹ ಆಹಾರ ಯಾವುದು ಎಂದರೆ ಅದು ಮನೆಯಲ್ಲಿ ಸಿಗುವಂತಹ ಶೇಂಗಾ.

ಶೇಂಗಾವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದಂತಹ ನ್ಯೂಟ್ರಿಷಿಯನ್ ಮತ್ತು ಪೋಷಕಾಂಶಗಳು ದೊರೆಯುತ್ತವೆ. ಸಾಮಾನ್ಯವಾಗಿ ಶೇಂಗಾ ಬೀಜದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ನಾವಿಂದು ಶೇಂಗಾವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಮತ್ತು ಇದನ್ನು ಹೇಗೆ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಬಗ್ಗೆ ನಾವಿಂದು ತೆಗೆದುಕೊಳ್ಳೋಣ. ನಾವು ಶೇಂಗಾವನ್ನು ಪ್ರತಿದಿನ ಅಡುಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತೇವೆ ಕೆಲವರು ಹಸಿ ಶೇಂಗಾವನ್ನು ತಿನ್ನುತ್ತಾರೆ ಇನ್ನು ಕೆಲವರು ಹುರಿದು ಸೇವನೆ ಮಾಡುತ್ತಾರೆ ಇನ್ನು ಕೆಲವರು ಚಟ್ನಿಪುಡಿಯನ್ನು ಮಾಡಿಕೊಂಡು ಆಹಾರದೊಂದಿಗೆ ಸೇವನೆ ಮಾಡುತ್ತಾರೆ. ಹೀಗೆ ನಾನಾ ರೀತಿಯಲ್ಲಿ ಶೇಂಗಾವನ್ನು ಸೇವನೆ ಮಾಡುತ್ತಾರೆ. ಶೇಂಗಾವನ್ನು ಯಾವ ರೀತಿಯಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಬರುತ್ತದೆ ಎನ್ನುವುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಕೆಲವರು ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವನೆ ಮಾಡುವುದಿಲ್ಲ ಹಾಗಾಗಿ ದೇಹದಲ್ಲಿ ನಿಶ್ಯಕ್ತಿ ಸುಸ್ತು ಯಾವುದೇ ಕೆಲಸ ಮಾಡುವುದಕ್ಕೆ ಶಕ್ತಿ ಇರುವುದಿಲ್ಲ. ಅಂಥವರು ಈ ಶೇಂಗಾ ಬೀಜವನ್ನು ಹುರಿದುಕೊಂಡು ಒಂದು ಮುಷ್ಟಿ ಆಗುವಷ್ಟು ಶೇಂಗಾ ಬೀಜವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಪ್ರತಿನಿತ್ಯ ನಿಯಮಿತವಾಗಿ ಸೇವಿಸುತ್ತಾ ಬಂದರೆ ದೇಹಕ್ಕೆ ಒಳ್ಳೆಯ ಶಕ್ತಿ ಮತ್ತು ಚೈತನ್ಯ ಸಿಗುತ್ತದೆ. ಶೇಂಗಾ ಬೀಜವನ್ನು ಸೇವಿಸುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ದೇಹದ ತೂಕವನ್ನು ಹೆಚ್ಚು ಕೂಡ ಮಾಡಿಕೊಳ್ಳಬಹುದು.

ನೀವು ನಿಮ್ಮ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂಬ ಆಸೆ ಇದ್ದರೆ ಪ್ರತಿದಿನ ಊಟವಾದ ನಂತರ ಒಂದಿಷ್ಟು ಶೇಂಗಾ ಬೀಜವನ್ನು ಸೇವಿಸಬೇಕು. ಇನ್ನು ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೀವು ಉಪಹಾರ ಮಾಡುವ ಮೊದಲು ಒಂದು ಹಿಡಿಯಷ್ಟು ನೆನೆಸಿದ ಶೇಂಗಾ ಸೇವಿಸುತ್ತಾ ಬಂದರೆ ಇದು ನಿಮಗೆ ಹೊಟ್ಟೆ ತುಂಬಿದ ಹಾಗೆ ಅನುಭವವನ್ನು ನೀಡುತ್ತದೆ. ಇದರಿಂದ ನಿಮಗೆ ಹೆಚ್ಚಾಗಿ ಹೊಟ್ಟೆ ಹಸುವಿನ ಕಡೆ ಒಲವು ಬರುವುದಿಲ್ಲ ಇದರಿಂದ ಆರಾಮವಾಗಿ ನೀವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಕೂಡ ಇದನ್ನು ಸೇವನೆ ಮಾಡಬಹುದು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಹಸಿವಾಗುತ್ತದೆ ಅಂತವರು ಹುರಿದ ಶೇಂಗಾವನ್ನು ಸೇವಿಸಿದರೆ ಹಸಿವು ನಿವಾರಣೆಯಾಗುತ್ತದೆ ಮತ್ತು ನಿಶಕ್ತಿ ಕೂಡಾ ಕಡಿಮೆಯಾಗುತ್ತದೆ ಮತ್ತು ನೆನೆಸಿದ ಶೇಂಗಾ ಬೀಜವನ್ನು ತಿನ್ನುವುದರಿಂದ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಸಹಾಯವಾಗುತ್ತದೆ. ಇದು ನಿಮ್ಮ ಕೂದಲಿನ ಬೆಳವಣಿಗೆಗೂ ಕೂಡ ಸಹಾಯ ಮಾಡುತ್ತದೆ. ಪ್ರತಿದಿನ ನಿಯಮಿತವಾಗಿ ಶೇಂಗಾವನ್ನು ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ.

ಇನ್ನು ಯಾರೂ ಶೇಂಗಾ ಬೀಜವನ್ನು ಸೇವನೆ ಮಾಡಬಾರದು ಅದರಿಂದ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಶೇಂಗಾ ಬೀಜವನ್ನು ತಿಂದ ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ನೀರನ್ನು ಕುಡಿಯಬಾರದು. ಶೇಂಗಾ ಬೀಜವನ್ನು ಚಿಕ್ಕಮಕ್ಕಳಿಗೆ ಕೊಡಬಾರದು ಏಕೆಂದರೆ ಚಿಕ್ಕ ಮಕ್ಕಳಿಗೆ ಗಂಟಲು ತುಂಬಾ ಚಿಕ್ಕದಾಗಿರುತ್ತದೆ ಇದು ಅವರ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ ಹಾಗಾಗಿ ಸಣ್ಣ ಮಕ್ಕಳಿಗೆ ಶೇಂಗಾವನ್ನು ನೀಡುವುದಿದ್ದರೆ ಅದನ್ನು ಪುಡಿಯ ರೂಪದಲ್ಲಿ ನೀಡುವುದು ಒಳ್ಳೆಯದು.

ಕೆಲವರಿಗೆ ಶೇಂಗಾ ಬೀಜವನ್ನು ತಿಂದರೆ ಆಗುವುದಿಲ್ಲ ಅಲರ್ಜಿ ಆಗುತ್ತದೆ ಅಂತವರು ಶೇಂಗಾ ಬೀಜವನ್ನು ಸೇವನೆ ಮಾಡದೇ ಇರುವುದು ಉತ್ತಮ. ಶೇಂಗಾ ಬೀಜ ರುಚಿಯಾಗಿದೆ ಎಂದು ಮನಸ್ಸಿಗೆ ಬಂದಂತೆ ತಿನ್ನಬಾರದು ಇದರಿಂದ ಹೊಟ್ಟೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಇದನ್ನು ಕಡಿಮೆ ಪ್ರಮಾಣದಲ್ಲಿ ಅಥವಾ ವಾರದಲ್ಲಿ ಮೂರು ನಾಲ್ಕು ಬಾರಿ ಉಪಯೋಗ ಮಾಡಿದರೆ ಸಾಕು ಮತ್ತು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಶೇಂಗಾ ಕಾಳುಗಳು ಸಿಗುತ್ತವೆ. ಗಾತ್ರದಲ್ಲಿ ಹಲವಾರು ಬಗೆ ಇರುತ್ತವೆ ಹೆಚ್ಚಾಗಿ ಜನರು ದೊಡ್ಡ ಗಾತ್ರದಲ್ಲಿರುವ ಶೇಂಗಾ ಬೀಜ ಖರೀದಿ ಮಾಡುತ್ತಾರೆ ಆದರೆ ದೊಡ್ಡದಾಗಿ ಇರುವಂತಹ ಶೇಂಗಾಬೀಜ ನೋಡುವುದಕ್ಕೆ ಚೆನ್ನಾಗಿ ಕಂಡರೂ ಕೂಡ ಅವುಗಳನ್ನು ದೊಡ್ಡದಾಗಿ ಬೆಳೆಸುವುದಕ್ಕೆ ರಾಸಾಯನಿಕಗಳನ್ನು ಬಳಕೆ ಮಾಡಿರುತ್ತಾರೆ.

ಹಾಗಾಗಿ ಸ್ಥಳೀಯವಾಗಿ ದೊರೆಯುವಂತಹ ಶೇಂಗಾ ಬೀಜವನ್ನು ಖರೀದಿ ಮಾಡುವುದು ಉತ್ತಮ ಒಂದು ಒಳ್ಳೆ ನಿಮಗೆ ರೈತರ ಬಗ್ಗೆ ನೇರವಾಗಿ ಸಿಪ್ಪೆ ಇರುವ ಶೇಂಗಾ ದೊರೆತರೆ ಅದನ್ನು ತೆಗೆದುಕೊಂಡು ಉಪಯೋಗಿಸುವುದು ಬಹಳ ಉತ್ತಮವಾಗಿದೆ. ಈ ರೀತಿಯಾಗಿ ಶೇಂಗಾದಲ್ಲಿ ಒಳ್ಳೆಯ ಪೌಷ್ಟಿಕ ಅಂಶಗಳು ಇವೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.