ಬೆಳಗ್ಗೆ ಟಿಫನ್ ಮುಂಚೆ ಒಂದು ಹಿಡಿ ಮೊಳಕೆಕಟ್ಟಿದ ಕಾಳು ತಿನ್ನೋದ್ರಿಂದ ನಿಮ್ಮ ಶರೀರದಲ್ಲಿ ಏನಾಗುತ್ತೆ ಗೊತ್ತಾ

0 216

ಮೊಳಕೆ ಭರಿಸಿದ ಕಾಳುಗಳಲ್ಲಿ ನಾರಿನಾಂಶ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿ ಇರುವುದರಿಂದ ಹೃದಯದ ಆರೋಗ್ಯವನ್ನು ಸುಲಭವಾಗಿ ಸುಧಾರಿಸುತ್ತದೆ ನಿಯಮಿತವಾದ ಸೇವನೆಯಿಂದ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಗರ್ಭಿಣಿಯರಿಗೆ ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದುಮೊಳಕೆ ಕಾಳು ತುಂಬಾ ಆರೋಗ್ಯದಾಯಕವಾಗಿದೆ ಹಲವಾರು ಸಂಶೋಧನೆಗಳು ಮೊಳಕೆ ತರಿಸಿದ ಧಾನ್ಯಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ ಎಂದು ತಿಳಿಸಿದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ ಮೊಳಕೆ ಭರಿತ ಕಾಳುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದು ಕಣ್ಣಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಹಾಗೂ ದೃಷ್ಟಿ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ನಾವು ಈ ಲೇಖನದ ಮೂಲಕ ಮೊಳಕೆ ಕಾಲುಗಳ ಪ್ರಯೋಜನವನ್ನು ತಿಳಿದುಕೊಳ್ಳೋಣ.

ಸಸ್ಯಾಹಾರಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಹಾರವನ್ನು ಸೇವಿಸಬೇಕು ಇಂದಿನ ದಿನಮಾನದಲ್ಲಿ ಆಹಾರದ ಕಲಬೆರಕೆ ಹೆಚ್ಚಾಗಿ ಇರುತ್ತದೆ ಯಾವ ತುತ್ತಿನಲ್ಲಿ ಪೌಷ್ಟಿಕಾಂಶ ಇದೆ ಎಂದು ಹೇಳುವುದು ಅಸಾಧ್ಯವಾಗಿದೆ ಧಾನ್ಯಗಳನ್ನು ನೆನೆಸಿ ಮೊಳೆಕೆ ತರಿಸಿ ತಿನ್ನುವುದು ತುಂಬಾ ಆರೋಗ್ಯದಾಯಕವಾಗಿದೆ ಹಲವಾರು ಸಂಶೋಧನೆಗಳು ಮೊಳಕೆ ತರಿಸಿದ ಧಾನ್ಯಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ ಎಂದು ತಿಳಿಸಿದೆ

ಹುರುಳಿಕಾಳು ಹೆಸರುಕಾಳು ಕಡಲೆಕಾಳು ಹೀಗೆ ಮುಂತಾದ ಕಾಳುಗಳನ್ನು ನೆನೆಸಿ ಮೊಳಕೆ ಒಡೆದ ಧಾನ್ಯವನ್ನು ತಿನ್ನುವುದು ಆರೋಗ್ಯಯುತವಾದ ಆಹಾರವಾಗಿದೆ.ಈ ಕಾಳನ್ನು ಮೊಳಕೆ ಕಟ್ಟಿ ಸೇವನೆ ಮಾಡುವುದು ಉತ್ತಮ ನಮ್ಮ ದೇಹಕ್ಕೆ ಅಗತ್ಯವಾಗಿರುವ ವಿಟಮಿನ್ ಗಳು ಹಾಗೂ ಪೋಷಕಾಂಶಗಳು ಪ್ರೊಟೀನ್ ಗಳು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತದೆ ಈ ರೀತಿ ಮೊಳಕೆ ಬಂದಿರುವ ಕಾಳುಗಳನ್ನು ಬೆಳಗಿನ ಉಪಹಾರದಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು ಹಾಗೂ ಉಪಕಾರಿಯಾಗಿದೆ.

ಮೊಳಕೆ ಬಂದಿರುವ ಕಾಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ಮಾಂಸ ಖಂಡಗಳು ಸಧೃಡ ಆಗುತ್ತದೆ ಅಲ್ಲದೆ ಮಾಂಸ ಖಂಡಗಳ ಬೆಳವಣಿಗೆಗೆ ಸಹಾಯಕಾರಿಯಾಗಿದೆ ಜೊತೆಗೆ ಬೊಜ್ಜನ್ನು ನಿವಾರಣೆ ಮಾಡುತ್ತದೆ ಇದು ಡಯೆಟ್ ಮಾಡುವರಿಗೆ ತುಂಬಾ ಪ್ರಯೋಜನಕಾರಿ ಕಾಳುಗಳುಸುಲಭವಾಗಿ ಜೀರ್ಣವಾಗುವ ಶಕ್ತಿಯನ್ನು ಹೊಂದಿರುತ್ತದೆ .ಹಾಗೆಯೇ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮಲಬದ್ದತೆ ಸಮಸ್ಯೆ ಕಾಡುವುದು ಇಲ್ಲ ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್ ದೊರಕುತ್ತದೆ ವಿಟಮಿನ್ ಎ ಸಿ ವಿಟಮಿನ್ ಗಳು ದೊರೆಯುತ್ತದೆ ಈ ವಿಟಮಿನ್ ಗಳು ನಮ್ಮ ದೇಹದ ಜೀರ್ಣ ತೆ ಯನ್ನು ಹಾಗೂ ಪಚನ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಶಕ್ತಿಯನ್ನು ಹೆಚ್ಚಿಸುತ್ತದೆಹಾಗೆಯೇ ನಿಶಕ್ತಿಯನ್ನು ಕಡಿಮೆ ಮಾಡುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ನಿಶಕ್ತಿ ಕಡಿಮೆ ಮಾಡುತ್ತದೆ .

ಚಿಕ್ಕ ಮಕ್ಕಳಿಗೆ ಪ್ರತಿ ನಿತ್ಯ ಮೊಳಕೆ ಕಾಳನ್ನು ತಿನ್ನಿಸುವುದು ತುಂಬಾ ಒಳ್ಳೆಯದು ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆದು ಮೊಳಕೆ ಒಡೆದ ಕಾಳುಗಳಲ್ಲಿ ವಿಟಮಿನ್ ಎ ಹೇರಳವಾಗಿ ಇರುತ್ತದೆ ಮೊಳಕೆ ಕಾಳು ಗಳನ್ನು ಬೇಯಿಸಿ ತಿನ್ನುದಕಿಂತ ಹಸಿಯಾಗಿ ತಿನ್ನುವುದು ಒಳ್ಳೆಯದು ಹಸಿಯಾಗಿ ತಿನ್ನುದರಿಂದಅನೇಕ ಪೋಷಕಾಂಶಗಳು ಸಿಗುತ್ತದೆ ಬೇಯಿಸಿದ ಮೊಳಕೆ ಕಾಳುಗಳಲ್ಲಿ ವಿಟಮಿನ್ ಗಳು ಹಾಳಾಗುತ್ತದೆ ಹಾಗಾಗಿ ಹಸಿ ಮೊಳಕೆ ಕಾಳನ್ನು ಸೇವಿಸಬೇಕು.

ಇಂದಿನ ದಿನದಲ್ಲಿ ತಾಜಾ ಹಣ್ಣುಗಳು ಹಾಗೂ ತರಕಾರಿಗಳು ಸಿಗುವುದು ಕಷ್ಟ ಕರವಾಗಿದೆ ರಾಸಾಯನಿಕ ಗೊಬ್ಬರ ಬಳಸಿ ತರಕಾರಿ ಹಣ್ಣು ಬೆಳೆಯಲಾಗುತ್ತಿದೆ ಹಾಗಾಗಿ ಪೌಷ್ಟಿಕಾಂಶದ ಕೊರತೆ ಕಂಡು ಬರುತ್ತಿದೆ ಹಾಗಾಗಿ ಮೊಳಕೆ ಕಾಳುಗಳನ್ನು ತಿನ್ನುದರಿಂದ ಆದರೂ ಪೌಷ್ಟಿಕಾಂಶವನ್ನು ಪಡೆದುಕೊಳ್ಳಬಹುದು ಹೀಗೆ ಅನೇಕ ಉಪಯೋಗವನ್ನು ಮೊಳಕೆ ಕಾಳುಗಳು ಹೊಂದಿದೆ.

Leave A Reply

Your email address will not be published.