ಮಕರ ಸಂಕ್ರಾಂತಿ ಹಬ್ಬವನ್ನು ಹಲವು ರಾಜ್ಯಗಳಲ್ಲಿ ಬೇರೆ ಹೆಸರು ಮತ್ತು ವಿವಿಧ ಆಚರಣೆಗಳ ಜೊತೆಗೆ ಬೇರೆ ರೀತಿಯ ಸಂಪ್ರದಾಯದಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನ ಈ ಬಣ್ಣದ ಬಟ್ಟೆಯನ್ನು ಏಕೆ ನಾವು ತೊಡಬೇಕು. ಮಕರ ಸಂಕ್ರಾಂತಿಗೂ ನಾವು ಧರಿಸುವ ಬಟ್ಟೆಗೂ ಇರುವ ಸಂಪ್ರದಾಯವೇನು

ಪುಷ್ಯ ಮಾಸದಲ್ಲಿ ಸೂರ್ಯ ದೇವನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಇದನ್ನು, ಮಕರ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. 2024ರ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15ದು ಸೋಮವಾರದಂದು ಆಚರಿಸಲಾಗುವುದು.

ಮಕರ ಸಂಕ್ರಾಂತಿ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷ ಹಬ್ಬ ಎಂದು ಹೇಳಲಾಗುತ್ತದೆ ಮತ್ತು ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಅನೇಕ ಹಬ್ಬಗಳು ಈ ದಿನದಿಂದ ಅರಂಭವಾಗುತ್ತದೆ.

ಮಕರ ಸಂಕ್ರಾಂತಿಯ ಹಬ್ಬದ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನ ಪೊಂಗಲ್ ಮತ್ತು ಎಳ್ಳು-ಬೆಲ್ಲವನ್ನು ದಾನ ಮಾಡಲಾಗುತ್ತದೆ.

ಮಕರ ಸಂಕ್ರಾಂತಿ ಹಬ್ಬವನ್ನು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಬೇರೆ ರೀತಿಯ ವೈಶಿಷ್ಟ್ಯದಿಂದ ಆಚರಿಸಲಾಗುತ್ತದೆ. ಕೆಲವು ಕಡೆ ಈ ದಿನ ಗಾಳಿಪಟ ಹಾರಿಸಲಾಗುವುದು. ಕೆಲವು ಕಡೆ ಕಪ್ಪು ವಸ್ತ್ರ ಧರಿಸುವ ಸಂಪ್ರದಾಯವಿದೆ. ಮಕರ ಸಂಕ್ರಾಂತಿಯ ದಿನದಂದು ಕಪ್ಪು ಬಣ್ಣದ ವಸ್ತ್ರವನ್ನು ಏಕೆ ಧರಿಸುತ್ತಾರೆ ಎಂದು ತಿಳಿಯೋಣ.

ಹಿಂದೂ ಧರ್ಮದಲ್ಲಿ, ಹಬ್ಬಗಳು ಮತ್ತು ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಅದು ಅಶುಭಕರ ಎನ್ನುವ ನಂಬಿಕೆಯಿದೆ. ಆದರೆ ಮಕರ ಸಂಕ್ರಾಂತಿಯಂತ ದೊಡ್ಡ ಹಬ್ಬಗಳಲ್ಲಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯನ್ನು ಆಚರಿಸುವ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಲು ಕೂಡ ಒಂದು ಕಾರಣ ಇದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು, ಸೂರ್ಯನು ಉತ್ತರ ದಿಕ್ಕನ್ನು ಪ್ರವೇಶಿಸುತ್ತಾನೆ. ಇದರ ನಂತರ ಚಳಿ ಮತ್ತು ಶೀತ ಕಾಲವು ಮುಕ್ತಾಯಗೊಳ್ಳುತ್ತದೆ ಎನ್ನುವ ನಂಬಿಕೆ ಕೂಡ ಇದೆ.

ಮಕರ ಸಂಕ್ರಮಣದ ಹಿಂದಿನ ದಿನ ಅತ್ಯಂತ ಚಳಿಯ ದಿನವಾಗಿದ್ದು ಕಪ್ಪು ವಸ್ತ್ರ ತೊಡುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಉಷ್ಣತೆ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಕಪ್ಪು ಬಟ್ಟೆ ಧರಿಸುವುದರಿಂದ ಚಳಿಯಿಂದ ರಕ್ಷಣೆ ಪಡೆಯಬಹುದು ಹಾಗಾಗಿ ಮಕರ ಸಂಕ್ರಾಂತಿಯ ಹಬ್ಬದ ದಿನ ಕಪ್ಪು ಬಟ್ಟೆ ಧರಿಸುವ ಸಂಪ್ರದಾಯ ಇರುತ್ತದೆ.

ಮಕರ ಸಂಕ್ರಾಂತಿಯ ದಿನದಂದು ಪೊಂಗಲ್ ಮಾಡುವ ಹಿಂದಿನ ಉದ್ದೇಶ. ಮಕರ ಸಂಕ್ರಾಂತಿ ಹಬ್ಬದ ದಿನದಂದು ಆಚರಿಸುವ ಪದ್ಧತಿಗಳಲ್ಲಿ ಮತ್ತೊಂದು ಪದ್ಧತಿ ಎಂದರೆ ಅದು ಪೊಂಗಲ್ ಮಾಡಿ ಸೇವಿಸುವುದು ಮತ್ತು ದಾನ ಮಾಡಲಾಗುವುದು.

ಮಕರ ಸಂಕ್ರಾಂತಿಯ ದಿನದಂದು ಪೊಂಗಲ್ ದಾನ ಮಾಡುವುದು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ, ಈ ದಿನದಂದು ಪೊಂಗಲ್ ತಿನ್ನುವುದು ಕೂಡ ವಿಶೇಷ ಮಹತ್ವವನ್ನು ಹೊಂದಿದೆ.

ಮಕರ ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳಿನ ಉಂಡೆ ಮತ್ತು ಅಕ್ಕಿಯಿಂದ ಮಾಡುವ ಪೊಂಗಲ್ ತಿನ್ನಲಾಗುತ್ತದೆ ಮತ್ತು ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಈ ದಿನ ಎಳ್ಳು ಮತ್ತು ಬೆಲ್ಲದ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಎಳ್ಳಿನಲ್ಲಿ ಎಣ್ಣೆ ಅಂಶ ಇರುವುದು. ಅದು, ಚರ್ಮದ ರಕ್ಷಣೆ ಮಾಡಿ ಕಾಂತಿ ನೀಡುವುದು.

ಇನ್ನೂ ಕೆಲವು ಕಡೆ ಗಾಳಿಪಟ ಹಾರಿಸುವ ಸಂಪ್ರದಾಯ, ದನಗಳಿಗೆ ಕಿಚ್ಚು ಹಾಹಿಸುವುದು, ಹಾಗೂ ಎಳ್ಳು ಬೀರುವ ಸಂಪ್ರದಾಯ ಕೂಡ ಇದೆ. ಪ್ರದೇಶಗಳಿಗೆ ತಕ್ಕಂತೆ ಹಬ್ಬಗಳ, ವ್ರತಗಳ ಆಚರಣೆ ಸಹ ಬೇರೆಯ ರೀತಿ ಇರುತ್ತದೆ ಆಚರಿಸುವ ವಿಧಿ ವಿಧಾನ ಬೇರೆಯಾದರೂ ಆಚರಿಸುವ ಹಬ್ಬ ಒಂದೇ ಆಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *