September Month astrology 2023: ಸೆಪ್ಟೆಂಬರ್ ತಿಂಗಳು ಈಗ ಶುರುವಾಗಿದ್ದು, ಯಾವ ರಾಶಿಯವರಿಗೆ ಈ ತಿಂಗಳ ಫಲ ಚೆನ್ನಾಗಿರುತ್ತದೆ? ಯಾರಿಗೆ ಯಾವ ಪರಿಹಾರ ಅವಶ್ಯಕವಾಗಿರುತ್ತದೆ? ಇಂದು ತಿಳಿದುಕೊಳ್ಳೋಣ..

ಮೇಷ ರಾಶಿ :- ಈ ರಾಶಿಯವರು ಯಾವುದೇ ಕೆಲಸ ಶುರು ಮಾಡಿದರು ಕೂಡ ಇನ್ನೇನು ಎಲ್ಲವೂ ಸುಸೂತ್ರವಾಗಿ ಮುಗಿಯುತ್ತದೆ ಎಂದುಕೊಳ್ಳುವಾಗ ಕೊನೆಯ ಕ್ಷಣದಲ್ಲಿ ನಿಂತು ಹೋಗಬಹುದು. ಆದರೆ ನಿಮಗೆ ಧನಲಾಭ ಉಂಟಾಗುತ್ತದೆ. ಕೆಲಸಗಳು ನಡೆಯದೆ ಇರುವ ಸಮಸ್ಯೆಗೆ ಪರಿಹಾರ ಏನು ಎಂದರೆ, ಸೆಪ್ಟೆಂಬರ್ ತಿಂಗಳ 4 ಸೋಮವಾರ ಬೆಳಗ್ಗೆ ಶಿವನ ದೇವಸ್ಥಾನಕ್ಕೆ ಹೋಗಿ ನಿಮ್ಮ ಕೈಯಲ್ಲಾದಷ್ಟು ಒಣದ್ರಾಕ್ಷಿ ದಾನ ನೀಡಿ. ನೀವು ಗಳಿಕೆ ಮಾಡುವ ಹಣದಲ್ಲಿ 10% ಅನ್ನು ಅನಾಥಾಶ್ರಮಕ್ಕೆ ನೀಡಿ, ನಿಮ್ಮಿಂದ ಆಗುವ ರೀತಿಯಲ್ಲಿ ಸಹಾಯ ಮಾಡಿ. ನಿಮ್ಮಿಂದ ಆಗುವಂಥದ್ದನ್ನು ಡೋನೇಟ್ ಮಾಡಿ..

ವೃಷಭ ರಾಶಿ :- ಕೆಎಎಸ್ ಐಎಎಸ್ ಪರೀಕ್ಷೆಗೆ ಪ್ರಯತ್ನ ಮಾಡುತ್ತಿರುವವರಿಗೆ ಟೆಂಡರ್ ಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಈ ತಿಂಗಳು ಹೆಚ್ಚಾಗಿ ಸೂರ್ಯನಮಸ್ಕಾರ ಮಾಡಿ, ಶನಿವಾರದ ದಿನ ಸಂಜೆ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ನಿಮ್ಮ ಕೈಯಲ್ಲಾದಷ್ಟು ದಾಳಿಂಬೆ ಹಣ್ಣುಗಳನ್ನು ದಾನ ನೀಡಿ. ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕಳೆದು ಬಳಿಕ ನಿಮ್ಮ ಮನೆಗೆ ಹೋಗಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು.

ಮಿಥುನ ರಾಶಿ :- ಈ ರಾಶಿಯವರಿಗೆ ಈ ತಿಂಗಳು ಮುಟ್ಟಿದ್ದೆಲ್ಲವು ಚಿನ್ನ ಆಗುತ್ತದೆ. ಯಾವುದೇ ಕೆಲಸ ಇದ್ದರು ಕೂಡ, ಮನೆ ಕಟ್ಟುವುದು, ಆಸ್ತಿ ಖರೀದಿ ಮಾಡುವುದು, ಮದುವೆಯ ವಿಷಯ ಇದೆಲ್ಲದಕ್ಕೂ ಕೂಡ ಸೆಪ್ಟೆಂಬರ್ ತಿಂಗಳು ಅನುಕೂಲಕರವಾಗಿ ಇರುತ್ತದೆ. ಇವರು ಶುರುಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು ಖಂಡಿತ. ಹೊರದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಕೂಡ ಇದು ಸರಿಯಾದ ಸಮಯ ಆಗಿದೆ. ಹಾಗಿದ್ದರೂ ನೀವು ತೊಂದರೆಗೆ ಕೆಲವು ಪರಿಹಾರಗಳನ್ನು ಕೂಡ ಮಾಡಿಕೊಳ್ಳಬಹುದು. ನಿಮ್ಮ ಕೈಯಲ್ಲಿ ಆದಷ್ಟು ಬೆಡ್ ಶೀಟ್ಸ್ ಗಳನ್ನು ಅನಾಥಾಶ್ರಮಕ್ಕೆ ನೀಡಿ. 4 ಭಾನುವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ನಿಮ್ಮ ಹೆಸರಲ್ಲಿ ಅರ್ಚನೆ ಮಾಡಿಸಿ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ 18 ನೇ ತಾರೀಕಿನ ನಂತರ ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತದೆ, ಬೇರೆ ಕಡೆ ಸ್ಟ್ರಕ್ ಆಗಿರುವ ಹಣ ನಿಮಗೆ ವಾಪಸ್ ಬರುತ್ತದೆ. ಬಿಸಿನೆಸ್ ನಲ್ಲಿ ಲಾಭ ಅಥವಾ ಕೆಲಸದಲ್ಲಿ ಇನ್ಕ್ರಿಮೆಂಟ್ ಇದೆಲ್ಲವೂ ಸಿಗುತ್ತದೆ. ಆದರೆ ಬೇರೆ ಕೆಲಸಗಳು ಸ್ವಲ್ಪ ನಿಧಾನವಾಗಿ ಆಗುತ್ತದೆ. ಪರಿಹಾರಕ್ಕಾಗಿ ಶುಕ್ರವಾರದ ದಿನ ಸಂಜೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಒಂದು ಮೊಳ ಆಗಷ್ಟೇ ಅರಳುತ್ತಿರುವ ಮಲ್ಲಿಗೆ ಹೂವಿನ ಹಾರವನ್ನು ದೇವರಿಗೆ ನೀಡಿ. ಮನೆಯಲ್ಲಿ ಬೆಡ್ ಸ್ಪ್ರೆಡ್ಸ್ ಹಾಗೂ ಬೆಡ್ ಶೀಟ್ ಗಳನ್ನು ಬದಲಾಯಿಸಿ. ಕಪ್ಪು ನತ್ತು ಕೆಂಪು ಬಣ್ಣದ ಬೆಡ್ ಸ್ಪ್ರೆಡ್ಸ್ ಗಳನ್ನು ಬಳಸಬೇಡಿ. ಈ ತಿಂಗಳು ಮಾತ್ರ 2 ದಿನಗಳಿಗೆ ಬದಲಾಯಿಸಿದರು ಒಳ್ಳೆಯದು. ಇದರಿಂದ ಒಳ್ಳೆಯ ವೈಬ್ರೇಷನ್ ಇರುತ್ತದೆ ಹಾಗೆಯೇ ಒಳ್ಳೆಯ ರಿಸಲ್ಟ್ಸ್ ಇರುತ್ತದೆ.

ಸಿಂಹ ರಾಶಿ :- ಇವರಿಗೂ ಕೂಡ ವೃಷಭ ರಾಶಿಯ ಹಾಗೆ ಸರ್ಕಾರಿ ಕೆಲಸಕ್ಕೆ, ಸರ್ಕಾರದ ಎಕ್ಸಾಂ ಗೆ ಅಪ್ಲೈ ಮಾಡಿ ಪ್ರಿಪೇರ್ ಆಗುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಸೂರ್ಯನಮಸ್ಕಾರ ಮಾಡಿ. ಪರಿಹಾರಕ್ಕಾಗಿ 4 ಮಂಗಳವಾರದ ದಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ಕೆಂಪು ಬಣ್ಣದ ದಾಸವಾಳ, ರೋಜಾ, ಕಣಗಲೇ ಹೂವನ್ನು ದೇವರಿಗೆ ಅರ್ಪಿಸಿ, ಅಲ್ಲಿ ಕೊಡುವ ವಿಭೂತಿಯನ್ನು ಹಣೆಗೆ ಇಟ್ಟುಕೊಳ್ಳಿ, ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ :- ಆತ್ಮವಿಶ್ವಾಸ ಕಡಿಮೆ ಇರುವುದರಿಂದ ಕೆಲಸಗಳು ನಡೆಯದೆ ಇರಬಹುದು. ಹಾಗೆಯೇ ಡ್ರೈವಿಂಗ್ ವೇಕೆ ಎಚ್ಚರ ವಹಿಸಿ, ಇಲ್ಲಿ ನೀವು ಭಯ ಬೀಳಬೇಕು ಎಂದು ಅಲ್ಲ, ಎಚ್ಚರಿಕೆ ಇಂದ ಇದ್ದರೆ ಒಳ್ಳೆಯದು. ಈ ಸಮಯದಲ್ಲಿ ನಿಮಗೆ ಹಣಕಾಸಿನ ವಿಷಯದಲ್ಲಿ ಆಗುವ ಅರಿವು ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಲೋನ್ ಗೆ ಅಪ್ಲೈ ಮಾಡಿರುವವರಿಗೆ ಲೋನ್ ಸಿಗುತ್ತದೆ, ಸಾಲ ಕೊಟ್ಟಿರುವವರಿಗೆ ವಾಪಸ್ ಹಣ ಸಿಗುತ್ತದೆ. ಹಾಗಾಗಿ ಕೆಟ್ಟದರಲ್ಲಿ ಕೂಡ ಕೆಲವು ವಿಚಾರ ಒಳ್ಳೆಯದಾಗುತ್ತದೆ. ಪರಿಹಾರವಾಗಿ ಬೀದಿ ನಾಯಿಗಳಿಗೆ ಊಟ, ಬಿಸ್ಕೆಟ್ ಏನಾದರೂ ಹಾಕುವುದನ್ನು ಮಾಡಿ. ಗುರುವಾರದ ದಿನ ರಾಘವೇಂದ್ರ ಸ್ವಾಮಿ ದೇವಸ್ಥಾನ, ಸಾಯಿಬಾಬಾ ದೇವಸ್ಥಾನ ಅಥವಾ ಶಿವನ ದೇವಸ್ಥಾನದಲ್ಲಿ ಊಟದ ವ್ಯವಸ್ಥೆಗೆ ನಿಮ್ಮಿಂದ ಆದಷ್ಟು ಸಹಾಯ ಮಾಡಿ.

ತುಲಾ ರಾಶಿ :- ಇವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವ ಹಾಗೆ ಇರುತ್ತದೆ. ಆದರೆ ಇದರಲ್ಲಿ ಕೂಡ ನಿಮಗೆ ಕೆಲವು ಒಳ್ಳೆಯದಾಗಬಹುದು. ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ, ಉದ್ಯೋಗ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ಸೋಮವಾರದ ದಿನ ಸಾಯಂಕಾಲ 700 ಗ್ರಾಮ್ ಹುರಳಿಕಾಳನ್ನು ಶಿವನ ದೇವಸ್ಥಾನಕ್ಕೆ ದಾನ ನೀಡಿ. ಇದರಿಂದ ನಿಮ್ಮ ಟೈಮ್ ಸರಿ ಹೋಗುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಈಗ ಶತ್ರುನಾಶ ಆಗುತ್ತದೆ. ಆ ಶತ್ರುಗಳು ಮನೆಯವರೇ ಆಗಿರಬಹುದು., ಅವರ ನಾಶ ಆಗುತ್ತದೆ. ಹಾಗೆಯೇ ಈ ರಾಶಿಯವರಿಗೆ ಸೈಟ್ ಅಥವಾ ಭೂಮಿ ಖರೀದಿ ಮಾಡಬೇಕು ಎಂದುಕೊಂಡಿದ್ದಾರೆ ಸಹ ಇದು ಒಳ್ಳೆಯ ಸಮಯ ಆಗಿದೆ. ಎಲ್ಲರ ಸಲಹೆ ಪಡೆದು, ಎಲ್ಲಾ ಡಾಕ್ಯುಮೆಂಟ್ ಗಳನ್ನು ಚೆಕ್ ಮಾಡಿ, ನಂತರ ಮುಂದುವರೆಯಬಹುದು. ಒಟ್ಟಿನಲ್ಲಿ ಆಸ್ತಿ ಖರೀದಿಗೆ ಇದು ಒಳ್ಳೆಯ ಸಮಯ ಆಗಿದೆ. ಪರಿಹಾರಕ್ಕಾಗಿ ಶನಿವಾರದ ದಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅರ್ಧ ಕೆಜಿ ಉಪ್ಪಿಟ್ ರವೆಯನ್ನು ದಾನವಾಗಿ ನೀಡಿ, ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಧನು ರಾಶಿ :- ಈ ರಾಶಿಯವರಿಗೆ ಸಂತಾನದ ಸಮಸ್ಯೆ ಏನಾದರು ಇದ್ದರೆ, ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ತಿಂಗಳು ಸರಿಯಾದ ಸಮಯ ಆಗಿದೆ. ಈ ತಿಂಗಳು ಕೂಡ ನಿಮಗೆ ಒಳ್ಳೆಯ ಸಮಯ ಆಗಿದ್ದು, ಸಂತಾನಕ್ಕೆ ಅನುಕೂಲವಾಗಿರುತ್ತದೆ. ಇದು ಬಿಟ್ಟು ಈ ರಾಶಿಯವರ ಸಮಯ ಚೆನ್ನಾಗಿದೆ. ಈ ಸಮಯದಲ್ಲಿ ನಿಮಗೆ ಸೂಕ್ತ ಪರಿಹಾರ, 4 ಸೋಮವಾರದ ದಿನ ಶಿವನ ದೇವಸ್ಥಾನಕ್ಕೆ ಕಡಲೆಬೇಳೆ ಇಂದ ಮಾಡಿದ ಯಾವುದಾದರೂ ಸ್ವೀಟ್ ಅನ್ನು ದಾನ ನೀಡಿ, ಸ್ವೀಟ್ ಮಾಡಲು ಆಗುವುದಿಲ್ಲ ಎಂದರೆ ಕಡಲೆಬೇಳೆ ಮತ್ತು ಬೆಲ್ಲವನ್ನು ದಾನವಾಗಿ ನೀಡಿ, ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ..

ಮಕರ ರಾಶಿ :- ಈ ಸಮಯದಲ್ಲಿ ನೀವು ಮಾಡಬೇಕು ಅಂದುಕೊಂಡಿರುವ ಕೆಲಸಗಳು ನಿಧಾನ ಆಗಬಹುದು. ಇನ್ನೇನು ಕೆಲಸ ಆಗುತ್ತದೆ ಎಂದುಕೊಳ್ಳುವಷ್ಟರಲ್ಲಿ ನಿಧಾನ ಆಗಬಹುದು. ಇದಕ್ಕಾಗಿ ನಿಮಗೆ ಹೇಳುವ ಪರಿಹಾರ, ಈ ತಿಂಗಳು ನೀವು ಹೆಚ್ಚಾಗಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಹಾಗೆಯೇ ನೀಲಿ ಬಣ್ಣದ ಪೆನ್ ಅನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ. ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ವೃದ್ಧಾಶ್ರಮಕ್ಕೆ ಬೆಡ್ ಶೀಟ್ಸ್ ಅಥವಾ ಚಪ್ಪಲಿಗಳನ್ನು ಡಾಜ ನೀಡಿ.

ಕುಂಭ ರಾಶಿ :- ನೀವು ಮಾಡುತ್ತಿರುವ ಅಥವಾ ಅಂದುಕೊಂಡಿರುವ ಕೆಲಸಗಳು ಬೇಗ ಆಗೋದಿಲ್ಲ, ಬಹಳ ತಡವಾಗಿ ಮಂದವಾಗಿ ಸಾಗುತ್ತದೆ. ಈ ತಿಂಗಳು ತಾಯಿಯ ಆಶೀರ್ವಾದ ಪಡೆಯುವುದು ಒಳ್ಳೆಯದು. ನಿಮಗೆ ಪರಿಹಾರ, ಭಾನುವಾರದ ದಿವಸ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ನಿಮ್ಮಿಂದ ಆಗುವಷ್ಟು ಬೆಣ್ಣೆ ದಾನ ಮಾಡಿ. ಈ ರೀತಿ ಮಾಡಿದರೆ ಬೆಣ್ಣೆ ಕರಗುವ ಹಾಗೆ ನಿಮ್ಮ ಕಷ್ಟಗಳೆಲ್ಲವು ಕರಗುತ್ತದೆ. ದೇವಸ್ಥಾನದಲ್ಲಿ ಸಿಗುವ ಸಿಂಧೂರವನ್ನು ಹಣೆಗೆ ಇಡೀ ತಿಂಗಳು ಹಚ್ಚಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ.

ಮೀನ ರಾಶಿ :- ನಿಮ್ಮ ಟೈಮ್ ಚೆನ್ನಾಗಿದೆ, ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ ನೀವು ಹೇಗೆಂದರೆ ಹಾಗೆ ಮಾತನಾಡದೆ ಮಾತಿನಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದು ಒಳ್ಳೆಯದು. ಅತಿಯಾದ ಮಾತಿನಿಂದ ನಿಮ್ಮ ಕೆಲಸಕ್ಕೆ ತೊಂದರೆ ಆಗಬಹುದು. ಅನಾಥಾಶ್ರಮಕ್ಕೆ ನಿಮ್ಮ ಕೈಯಲ್ಲಿ ಆಗುವಷ್ಟು ಆಹಾರ ಪದಾರ್ಥಗಳನ್ನು ದಾನವಾಗಿ ನೀಡಿ. ಮಾತು ಹಿಡಿತಕ್ಕೆ ಬರಲು ಧ್ಯಾನ ಮಾಡಿ, ಸ್ತೋತ್ರ ಪಠಣೆ ಮಾಡಿ. ಹಾಗೆಯೇ ಶಿವನ ದೇವಸ್ಥಾನಕ್ಕೆ ಸೋಮವಾರದ ದಿನ ಜೇನುತುಪ್ಪವನ್ನು ಅಬ್ಭಿಷೇಕಕ್ಕೆ ನೀಡಿ. ಯಾವುದೇ ಅಪೇಕ್ಷೆ ಪಡದೆ ಈ ಕೆಲಸಗಳನ್ನು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *