ಲಕ್ಷ್ಮೀದೇವಿಯ ಕಲಶಕ್ಕೆ ನಕಲಿ ತಾಳಿ ಹಾಕಬಹುದಾ? ಕಲಶದ ಪೂಜೆ ಬಗ್ಗೆ ಈ ಮಾಹಿತಿಯನ್ನು ತಿಳಿದುಕೊಳ್ಳಿ..

0 1,979

Lord Lakshi Devi worship: ಲಕ್ಷ್ಮೀದೇವಿ ಹಣ, ಐಶ್ವರ್ಯ, ಅಂತಸ್ತಿನ ಅಧಿದೇವತೆ. ಲಕ್ಷ್ಮೀದೇವಿ (Lord Lakshi Devi) ಅಷ್ಟೇ ಕಟ್ಟುನಿಟ್ಟಿನ ದೇವತೆ ಸಹ ಹೌದು. ಪ್ರತಿ ವಿಷಯದಲ್ಲಿ ಕೂಡ ಲಕ್ಷ್ಮೀದೇವಿ ಸ್ವಚ್ಛತೆಯನ್ನು ಬಯಸುವ ದೇವತೆ. ಲಕ್ಷ್ಮಿದೇವಿಯ ಪೂಜೆ ಮಾಡುವಾಗ ಸ್ವಲ್ಪ ಏರು ಪೇರು ಉಂಟಾದರು ದೇವಿ ಅದನ್ನು ಸಹಿಸುವುದಿಲ್ಲ. ಹಬ್ಬದ ಸಮಯಗಳಲ್ಲಿ ವರಮಹಾಲಕ್ಷ್ಮಿಯ ಪ್ರತಿಷ್ಠಾಪನೆಯನ್ನು ಮನೆಯಲ್ಲಿ ಮಾಡುವಾಗ ಯಾವುದೇ ಕಾರಣಕ್ಕೂ ದೇವಿಗೆ ನಕಲಿ ತಾಳಿಯನ್ನು ಹಾಕಬೇಡಿ.

ಇದು ನಿಮ್ಮ ಮನೆಗೆ ದರಿದ್ರ ಮತ್ತು ಅಶುಭ ತರುವಂಥ ಸಂಕೇತ ಆಗಿರುತ್ತದೆ. ಲಕ್ಷ್ಮೀದೇವಿಗೆ ಬಂಗಾರದ ತಾಳಿಯ ಮೂಲಕವೇ ಅಲಂಕಾರ ಮಾಡಬೇಕು. ಬಂಗಾರದ ತಾಳಿ ಇಲ್ಲವಾದರೆ ಅರಿಶಿನದ ಕೊಂಬಿನಿಂದ ಕೂಡ ಲಕ್ಷ್ಮೀದೇವಿಗೆ ಅಲಂಕಾರ ಮಾಡಬಹುದು. ಲಕ್ಷ್ಮೀದೇವಿಯ ಅಲಂಕಾರದಲ್ಲಿ ಗೆಜ್ಜೆವಸ್ತ್ರ ಮತ್ತು ಅರಿಶಿನದ ಕೊಂಬನ್ನು ಕಡ್ಡಾಯವಾಗಿ ಹಾಕಬೇಕು. 9 ಸುತ್ತು ಬರುವ ಅರಿಶಿನ ದಾರ ಮಾಡಿ, ಅದಕ್ಕೆ ಅರಿಶಿನದ ಕೊಂಬು ಕಟ್ಟಿ ಲಕ್ಷ್ಮೀದೇವಿಯ ಕಲಶದ ಬಾಯಿಯ ಹತ್ತಿರ ಇಡಬೇಕು. ಇದಕ್ಕೆ ಅರಿಶಿನ ಕುಂಕುಮ ಎರಡನ್ನು ಹಚ್ಚಿ ತಾಳಿಯನ್ನು ಇಲ್ಲಿಗೆ ಹಾಕಬೇಕು.

ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯ ಪ್ರತಿಷ್ಠಾಪನೆ ಮಾಡಲು ಕಲಶ ತುಂಬಾ ಪ್ರಮುಖವಾದದ್ದು, ಲಕ್ಷ್ಮೀದೇವಿಗೆ ಇಷ್ಟವಾದ ಎಲ್ಲಾ ವಸ್ತುಗಳನ್ನು ಕಲಾಶದಲ್ಲಿ ಇಡಲಾಗುತ್ತದೆ. ಕಲಶದ ಒಳಗೆ ಯಾವೆಲ್ಲಾ ವಸ್ತುಗಳನ್ನು ಇಡಬೇಕೋ, ಅದರಲ್ಲಿ ಒಂದು ವಸ್ತುವನ್ನು ಇಡದೆ ಹೋದರೆ ಪೂಜೆ ಪೂರ್ತಿಯಾಗುವುದಿಲ್ಲ. ನೀವು ಪೂಜೆಗೆ ಇಡುವ ಕಲಶ ಹೇಗಿರಬೇಕು ಎಂದರೆ, ಲಕ್ಷ್ಮೀದೇವಿಯ ಪ್ರತಿಷ್ಠಾಪನೆಗೆ ಯಾವುದೇ ಕಾರಣಕ್ಕೂ ನೀವು ಸ್ಟೀಲ್ ಕಲಶವನ್ನು ಬಳಸುವ ಹಾಗಿಲ್ಲ. ಅನುಕೂಲ ಇರುವವರು ಚಿನ್ನ ಅಥವಾ ಬೆಳ್ಳಿಯ ಕಲಶ ಇಡಬಹುದು.

ಇಲ್ಲದೆ ಹೋದರೆ ತಾಮ್ರ, ಹಿತ್ತಾಳೆ ಅಥವಾ ಕಂಚಿನ ಕಲಶ ಇಡಬಹುದು. ಲಕ್ಷ್ಮೀದೇವಿಯ ಪ್ರತಿಷ್ಠಾಪನೆಗೆ ಬಳಸಿದ ಕಲಶವನ್ನು ಬೇರೆ ಕೆಲಸಕ್ಕೆ ಬಳಸಬಾರದು. ಇನ್ನು ಕಲಶದ ಒಳಗೆ ಯಾವೆಲ್ಲಾ ವಸ್ತುಗಳನ್ನು ಇಡಬೇಕು ಎಂದು ನೋಡುವುದಾದರೆ, ಕಲಶದ ಒಳಗೆ ಅಕ್ಕಿ, 5 ವೀಳ್ಯದ ಎಲೆಗಳು ಅಥವಾ 5 ಮಾವಿನ ಎಲೆಗಳು, 5 ಅಡಿಕೆಗಳು, 5 ಒಣಖರ್ಜೂರಗಳು, 5 ಒಣದ್ರಾಕ್ಷಿಗಳು, 5 ನಾಣ್ಯಗಳು, ಅರಿಶಿನ ಕುಂಕುಮ. ಸಣ್ಣ ಕಪ್ಪುಬಳೆಗಳು ಈ ಬಳೆ ಲಕ್ಷ್ಮಿ ಸಾಮಗ್ರಿಯ ಜೊತೆಗೆ ಬರುತ್ತದೆ. 8 ಲವಂಗ, 8 ಗೋಮತಿ ಚಕ್ರ, 8ಕಲ್ಲುಸಕ್ಕರೆ, 8 ಗೋಡಂಬಿ, 8 ಬಾದಾಮಿ, ಚಿನ್ನದ ವಸ್ತು, ಬೆಳ್ಳಿಯ ವಸ್ತು..

8 ಕಮಲದ ಬೀಜಗಳು, 8 ಬಟ್ಟಲು ಅಡಿಕೆಗಳು, 5 ವಿವಿಧ ಧಾನ್ಯಗಳು, ಒಂದು ನಿಂಬೆಹಣ್ಣು, ಮಾವಿನ ಎಲೆಗಳು, ತೆಂಗಿನಕಾಯಿ. ಇಷ್ಟು ವಸ್ತುಗಳ ಪೈಕಿ ಮಿನಿಮಮ್ 8 ವಸ್ತುಗಳನ್ನು ಕಲಶಕ್ಕೆ ಬಳಸಬೇಕು. ಕಲಶದ ಒಳಗೆ ಕಡ್ಡಾಯವಾಗಿ ಬೆಳ್ಳಿ ವಸ್ತುಗಳನ್ನು ಹಾಕಬೇಕು. ಲಕ್ಷ್ಮೀದೇವಿಯು ಒಳ್ಳೆಯ ಸುವಾಸನೆ ಬೀರುವ ಹೂವುಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಲಕ್ಷ್ಮೀದೇವಿಗೆ ಮಲ್ಲಿಗೆ ಮತ್ತು ಕಮಲದ ಹೂವುಗಳನ್ನು ತಪ್ಪಿಸುವ ಹಾಗಿಲ್ಲ.

ಲಕ್ಷ್ಮೀದೇವಿ ತುಂಬಾ ಇಷ್ಟಪಡುವ ಹೂವು ಕಮಲ, ಈ ಹೂವು ಇದ್ದರೆ ಪೂಜೆ ಶ್ರೇಷ್ಠವಾಗಿ ಆದ ಹಾಗೆ, ಕಮಲದ ಹೂವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಅತಿಶ್ರೇಷ್ಠವಾಗಿರುವ ವಸ್ತುಗಳಲ್ಲಿ ತುಳಸಿ ಕೂಡ ಒಂದು, ತುಳಸಿಯ ಬಳಕೆಯಾಗದೆ ಲಕ್ಷ್ಮೀದೇವಿಯ ಪೂಜೆ ಪೂರ್ತಿ ಆಗುವುದಿಲ್ಲ. ಲಕ್ಷ್ಮೀದೇವಿ ಇಷ್ಟಪಡುವ ಹೂವುಗಳಲ್ಲಿ ಕೆಂಪು ದಾಸವಾಳ ಹೂವು ಕೂಡ ಒಂದು. ಲಕ್ಷ್ಮಿ ಪೂಜೆಗೆ ಈ ಕ್ರಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ.

Leave A Reply

Your email address will not be published.