ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಷಭ ರಾಶಿಯವರ ಮೇ ತಿಂಗಳ ಮಾಸಿಕ ಭವಿಷ್ಯವನ್ನು ತಿಳಿಯೋಣ.

ಮೇ 1ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಇದರಿಂದ, ವೃಷಭ ರಾಶಿಯ ಜನರಿಗೆ ಗುರುಬಲ ಬರುತ್ತದೆ. ಇದು, ಈ ರಾಶಿಯವರ ಬದುಕಿನಲ್ಲಿ ಉತ್ತಮ ಫಲಗಳು ತರುತ್ತದೆ. ಮೇ ತಿಂಗಳಿನ 10ನೇ ತಾರೀಖು ಅಕ್ಷಯ ತೃತೀಯ, ಬಸವೇಶ್ವರ ಜಯಂತಿ. ದೇವ ಗುರು ಮತ್ತು ದೈತ್ಯ ಗುರು ಇಬ್ಬರು ಒಂದೇ ರಾಶಿಯಲ್ಲಿ ಇರುವಾಗ ಅವರು ಹೆಚ್ಚಿನ ಶುಭಫಲ ಕೊಡುವರು.

ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅಪೂರ್ಣವಾಗಿರುವ ಕೆಲಸಗಳು ಬೇಗ ಕೈಗೂಡುತ್ತವೆ. ಕುಟುಂಬದಲ್ಲಿ ಇರುವ ಎಲ್ಲ ಸಮಸ್ಯೆಗಳು ದೂರವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ. ಕೆಲವು ಸಣ್ಣ ಪುಟ್ಟ ಕಿರಿಕಿರಿಗಳನ್ನು ಈ ಗುರು ಗೃಹ ದೂರ ಮಾಡುತ್ತದೆ. ಸರ್ಕಾರಿ ಅನುಧಾನಗಳು ಹೆಚ್ಚಾಗಿ ದೊರಕುತ್ತವೆ. ರವಿ ದೋಷ ದೊಡ್ದ ದೋಷ ಅದರಿಂದ, ಹೆಚ್ಚಿನ ತೊಂದರೆ ಉಂಟಾಗುತ್ತದೆ ವೈವಾಹಿಕ ಜೀವನದಲ್ಲಿ ಹೆಚ್ಚು ಸಮಸ್ಯೆಗಳು ಎದುರಾಗಬಹುದು.

ಗುರು ಗ್ರಹದ ದೆಸೆಯಿಂದ ಎಲ್ಲಾ ತೊಂದರೆಗಳು ಸಕಾರಾತ್ಮಕವಾಗಿ ಪರಿವರ್ತನೆ ಆಗುತ್ತವೆ. ಅದರಿಂದ, ವೈವಾಹಿಕ ಜೀವನದಲ್ಲಿ ಇದ್ದ ಎಲ್ಲಾ ತೊಡಕುಗಳು ನಿವಾರಣೆಯಾಗುತ್ತವೆ. ಸಂತಾನ ಭಾಗ್ಯ ಇಲ್ಲದ ಜನರಿಗೆ ಸಂತಾನ ಪ್ರಾಪ್ತಿಯಾಗುವ ಯೋಗವಿದೆ. ನೂತನ ವಾಹನ ಖರೀದಿ ಮಾಡುವ ಅವಕಾಶ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಆಗುತ್ತದೆ. ವೈದ್ಯಕೀಯ ಕ್ಷೇತ್ರ ಕಲಾಕೃತಿಯಲ್ಲಿ ತೊಡಗಿಸಿಕೊಂಡ, ಕಥೆ ಕಾದಂಬರಿ ಬರೆಯುವ ಲೇಖಕರಿಗೆ, ಒಳ್ಳೆ ಫಲಗಳನ್ನು ಶುಕ್ರ ಗ್ರಹ ಕೊಡುತ್ತದೆ.

ಶರೀರದಲ್ಲಿ ನರಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು, ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು, ಜೀರ್ಣಕ್ರಿಯೆಯಲ್ಲಿ ಸ್ವಲ್ಪ ಸಮಸ್ಯೆಗಳು ಉಂಟಾಗಬಹುದು ಅದರಿಂದ, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ.ಕೋಪ ತಾಪಗಳು ಬೇಗ ಬರಬಹುದು, ಓಡಾಟದಲ್ಲಿ ಕೂಡ ಹೆಚ್ಚಿನ ಜಾಗೃತಿ ವಹಿಸಬೇಕು, ಖಿನ್ನತೆ ಒತ್ತಡ ಎಲ್ಲ ಹೆಚ್ಚಾಗಬಹುದು. ಗುರುಗಳ ಧ್ಯಾನ ಮಾಡುವುದು ಒಳ್ಳೆಯದು ಅದರಿಂದ, ಅತ್ಯುತ್ತಮ ಫಲ ಸಿಗುತ್ತದೆ.

ಹಿರಿಯರಿಗೆ ಗೌರವ ಕೊಡಬೇಕು ಜೊತೆಗೆ ಅವರ ಆಶೀರ್ವಾದ ಪಡೆಯಬೇಕು. ತಂದೆ ತಾಯಿ ಆಶೀರ್ವಾದವನ್ನು ಪ್ರತಿದಿನ ಪಡೆಯಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ, ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *