Gemini Horoscope June 2024: ಜೂನ್ ತಿಂಗಳಿನಲ್ಲಿ ಮಿಥುನ ರಾಶಿಯಲ್ಲಿ (Gemini Horoscope) ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಹಾಗೂ ಮಿಥುನ ರಾಶಿಯವರು ಜೂನ್ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

2023-24 ನೆ ಸಾಲಿನ ಜೂನ್ ತಿಂಗಳಿನಲ್ಲಿ ಗ್ರಹಗತಿ ಬದಲಾವಣೆಯನ್ನು ನೋಡುವುದಾದರೆ ರವಿ ಹನ್ನೆರಡು ಹಾಗೂ ಒಂದನೆ ಮನೆಯಲ್ಲಿರುತ್ತಾನೆ. ಕುಜ ಗ್ರಹ 10 ಹಾಗೂ 11ನೆ ಮನೆಯಲ್ಲಿರುತ್ತಾನೆ. ಬುಧ ಗ್ರಹನು 12ನೆ ಮನೆಯಲ್ಲಿ ಶುಕ್ರ ಗ್ರಹ 12 ಮತ್ತು ಒಂದನೆ ಮನೆಯಲ್ಲಿ. ಶನಿ ಗ್ರಹವು 9ನೆ ಮನೆಯಲ್ಲಿ ರಾಹು ಹಾಗೂ ಕೇತು ಹತ್ತು ಹಾಗೂ ನಾಲ್ಕನೆ ಮನೆಯಲ್ಲಿ ಸಂಚಾರವನ್ನು ಮಾಡುತ್ತಾರೆ. ಮಿಥುನ ರಾಶಿಯ ಭರತನಾಟ್ಯ ಹಾಗೂ ಸೀರಿಯಲ್ ನಲ್ಲಿ ನಟಿಸುವ ಕಲಾವಿದರಿಗೆ ಇದು ಉತ್ತಮ ಸಮಯವಾಗಿದೆ ಪ್ರಶಂಸೆಗೆ ಇವರು ಭಾಜನರಾಗುತ್ತಾರೆ. ಮಿಥುನ ರಾಶಿಯವರಿಗೆ ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಲಾಭವಿರುತ್ತದೆ, ಹೊಸ ಕೆಲಸ ಹುಡುಕುತ್ತಿದ್ದರೆ 2024 ಜೂನ್ ತಿಂಗಳು ಉತ್ತಮ ಸಮಯವಾಗಿದೆ.

ಮಿಥುನ ರಾಶಿಯ ಹಣ ಹೂಡಿಕೆ ಮಾಡುವವರಿಗೆ ಇದು ಉತ್ತಮ ಸಮಯವಾಗಿದೆ ಪ್ರಯತ್ನ ಪಟ್ಟು ಒಳ್ಳೆಯ ಸ್ಥಳಗಳಿಗೆ ಹೂಡಿಕೆ ಮಾಡಿದ್ದಾದರೆ ಉತ್ತಮ ಧನ ಲಾಭವಾಗುತ್ತದೆ ಹಾಗೂ ಲಾಭದಾಯಕವಾಗಿ ಬೆಳೆಯುವ ಯೋಗ ಜೂನ್ ತಿಂಗಳಿನಲ್ಲಿ ಬರುತ್ತದೆ. ಹೊಸ ಮನೆ, ಸೈಟ್ ಕೊಳ್ಳುವವರಿಗೂ ಜೂನ್ ತಿಂಗಳು ಉತ್ತಮ ಸಮಯವಾಗಿದೆ. ರವಿ ತಿಂಗಳ ಮೊದಲ 15 ದಿನಗಳಲ್ಲಿ 12ನೆ ಮನೆಯಲ್ಲಿರುವುದರಿಂದ ಅನಾರೋಗ್ಯ ಹೆಚ್ಚಾಗುವ ಸಂಭವವಿದೆ. ಮಕ್ಕಳು ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಂತರ ರವಿಯು ಒಂದನೆ ಮನೆ ಅಂದರೆ ಮಿಥುನ ರಾಶಿಗೆ ಬರುವುದರಿಂದ ಅನಾರೋಗ್ಯ ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಬುಧನ ಅನುಗ್ರಹದಿಂದ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಿದೆ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಪ್ರಗತಿಯನ್ನು ಹೊಂದುತ್ತಾರೆ. ವಿದ್ಯಾರ್ಥಿಗಳಿಗೆ ಸ್ಥಾನಮಾನ ಗೌರವ ಪ್ರಾಪ್ತಿಯಾಗುತ್ತದೆ. ವಿದೇಶ ಪ್ರಯಾಣ ಮಾಡುವ ಯೋಗ ಭಾಗ್ಯ ದೊರೆಯುತ್ತದೆ.

ಶುಕ್ರನು ಮಿಥುನ ರಾಶಿಯವರಿಗೆ ಉತ್ತಮ ಸ್ಥಾನದಲ್ಲಿ ಇರುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ, ಮನೆಯಲ್ಲಿ ಸಂಸಾರಿಕ ಸುಖ ಸಿಗುತ್ತದೆ, ಆಭರಣಪ್ರಿಯರಿಗೆ ಆಭರಣಗಳು, ಅಲಂಕಾರ ಪ್ರಿಯರಿಗೆ ಅಲಂಕಾರಿಕ ವಸ್ತುಗಳನ್ನು ಪಡೆಯುವ ಯೋಗ ಭಾಗ್ಯಾದಿಗಳನ್ನು ಶುಕ್ರನು ಮಿಥುನ ರಾಶಿಯವರಿಗೆ ಕೊಡುತ್ತಾನೆ. ಶನಿ ಒಂಭತ್ತನೇ ಸ್ಥಾನದಲ್ಲಿದ್ದು ಲಾಭ ಸ್ಥಾನದಲ್ಲಿದ್ದಾನೆ ಲಾಭವಾಗುವುದು ಸ್ವಲ್ಪ ವಿರಳವಾದರೂ ಪೂರ್ಣ ಅನುಗ್ರಹದಿಂದ ಮಿಥುನ ರಾಶಿಗೆ ಕೊಡತಕ್ಕಂಥಹ ಲಾಭವನ್ನು ಕೊಡುತ್ತಾನೆ. ಮಿಥುನ ರಾಶಿಯವರು ಶನಿ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದು, ಬ್ರಹ್ಮ ವಿಷ್ಣು ಮಹೇಶ್ವರ ದೇವರ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ.

ರಾಹುಗ್ರಹನು 10ನೆ ಮತ್ತು ನಾಲ್ಕನೆ ಸ್ಥಾನದಲ್ಲಿ ಕೇತು ನಾಲ್ಕನೆ ಸ್ಥಾನದಲ್ಲಿದ್ದಾನೆ ಮಿಥುನ ರಾಶಿಯವರು ಷೇರು ಹೂಡಿಕೆ ಮಾಡುವಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಹೊಸದಾಗಿ ಷೇರು ಮಾಡದೆ ಇರುವುದು ಒಳ್ಳೆಯದು ಹಳೆಯ ಷೇರಿನ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಕೇತುವಿನ ಪ್ರಭಾವದಿಂದ ರಾಜಕೀಯದಲ್ಲಿರುವ ವ್ಯಕ್ತಿಗಳಿಗೆ ಒಳ್ಳೆಯದಾಗುತ್ತದೆ ಪ್ರಶಂಸೆ ಸಿಗುತ್ತದೆ ಆದರೆ ಪ್ರಯಾಣದಿಂದ ಆಯಾಸವಾಗಿ ಅನಾರೋಗ್ಯವಾಗಬಹುದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಂದರ್ಭ ಬರಬಹುದು ಹೀಗಾಗಿ ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಬೇಕು. ಮಿಥುನ ರಾಶಿಯವರಿಗೆ ಹಸಿರು, ಬಿಳಿ, ಕೇಸರಿ ಬಣ್ಣ ಲಾಭ ತರುವ ಬಣ್ಣಗಳಾಗಿವೆ. ಜೂನ್ ತಿಂಗಳಿನ 9,18, 29ನೆ ತಾರೀಕು ಉತ್ತಮ ಫಲ ಪ್ರಾಪ್ತಿಯಾಗುವ ದಿನಾಂಕಗಳಾಗಿವೆ. ಈ ದಿನಾಂಕದಲ್ಲಿ ಶುಭ ಕೆಲಸವನ್ನು ಮಾಡಿ ಉತ್ತಮ ಫಲ ಪಡೆಯಿರಿ. ಮಿಥುನ ರಾಶಿಯವರಿಗೆ ಈ ಮಾಹಿತಿಯನ್ನು ತಪ್ಪದೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!