ಮರೆವು ಕಾಯಿಲೆಯು ಒಂದು ವಿಚಿತ್ರ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಅನೇಕ ತರಹದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ಸರಿಯಾದ ಪರಿಹಾರವನ್ನು ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಇದರಿಂದ ಅನೇಕ ತರಹದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಮರೆವಿನ ಖಾಯಿಲೆಗೆ  ಮನೆಯಲ್ಲೇ ಮಾಡಬಹುದಾದ ಔಷಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಒಂದು ಸೇಬುಹಣ್ಣು, ಒಂದು ಲೋಟ ಹಾಲು, ಒಂದುಚಮಚ ಜೇನುತುಪ್ಪ ತೆಗೆದುಕೊಂಡು, ಸೇಬುಹಣ್ಣನ್ನು ಕತ್ತರಿಸಿ, ಹಾಲು ಮತ್ತು ಜೇನುತುಪ್ಪದ ಜೊತೆ ಪ್ರತಿದಿನ ಸೇವಿಸಬೇಕು. ಎರಡನೆಯದಾಗಿ ಪ್ರತಿ ದಿನ ಎರಡು ಹೊತ್ತು ಒಂದು ಚಮಚ  ಕರಿಮೆಣಸಿನ ಪುಡಿ ಹಾಗೂ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೂ ಮರೆವಿನ ಕಾಯಿಲೆಯನ್ನು ದೂರಮಾಡಬಹುದು. ಎರಡು ಚಮಚ ಜೀರಿಗೆ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಪ್ರತಿ ದಿನ ಬೆಳಿಗ್ಗೆ ಸೇವಿಸುವುದರಿಂದಲೂ ಮರೆವಿನ ಕಾಯಿಲೆಯನ್ನು ತಡೆಗಟ್ಟಬಹುದು.

ಇದು ಸಾಧ್ಯವಾಗದಿದ್ದರೆ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ರಾತ್ರಿ ನೆನೆಸಿಟ್ಟ ಒಣ ದ್ರಾಕ್ಷಿ, ಅಂಜೂರ, ಖರ್ಜೂರವನ್ನು ತಿನ್ನಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಮನಸ್ಸು ಮತ್ತು ದೇಹ ಚೈತನ್ಯದಿಂದ ಕೂಡಿರುತ್ತದೆ. ಇನ್ನೊಂದು ಪರಿಹಾರವೆಂದರೆ 15 ಬಾದಾಮಿಯನ್ನು ನೆನೆಸಿಟ್ಟು ಬೆಳಿಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ, ಒಂದು ಚಮಚ ಬೆಣ್ಣೆಯನ್ನು ಸೇರಿಸಿ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದಲೂ ಈ ಸಮಸ್ಯೆಯನ್ನು ದೂರವಿಡಬಹುದು.

ಒಂದು ಹಿಡಿಯಷ್ಟು ತುಳಸಿ ಎಲೆಯನ್ನು ಒಂದು ಲೋಟ ನೀರಿಗೆ ಹಾಕಿ ಸ್ವಲ್ಪ ಸಮಯದ ವರೆಗೆ ಕುದಿಸಿ ದಿನಕ್ಕೆ 3 ಬಾರಿ ಸೇವಿಸುವುದು ಉತ್ತಮ. ಹಾಗೆ ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಬ್ರಾಹ್ಮಿ ಪುಡಿಯನ್ನು ಸೇರಿಸಿ 10 ನಿಮಿಷಗಳವರೆಗೆ ಕುದಿಸಿ  ಆರಿದ ಮೇಲೆ ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ. ಇದಕ್ಕೆ ಇನ್ನು ಉತ್ತಮವಾದ ಔಷಧವೆಂದರೆ ವ್ಯಾಯಾಮವನ್ನು ಮಾಡಬೇಕು. ಇದರಿಂದ ಹಲವಾರು ಪ್ರಯೋಜನಗಳು ಇವೆ.

ಅಂದರೆ ದೇಹದಲ್ಲಿರುವ ನರಗಳಿಗೆ ಚೈತನ್ಯ ಕೊಡುವ ಮತ್ತು ಪ್ರಾಣಾಯಾಮವನ್ನು ಅಂದರೆ ಮೆದುಳಿನ ಜೀವಕೋಶಗಳನ್ನು ಅರೋಗ್ಯವಾಗಿರುವಂತೆ ಮಾಡಲು ದೇಹಕ್ಕೆ ಸರಿಯಾದ ಆಮ್ಲಜನಕದ ಪೂರೈಕೆಯಾಗುತ್ತದೆ. ಮನಸ್ಸು ಶಾಂತವಾಗಿರುವಂತೆ ಮತ್ತು ವಿಶ್ರಾಂತಿಗೊಳಿಸಲು ಸಹಕಾರಿಯಾಗುತ್ತದೆ. ಇದನ್ನು ಪ್ರತಿನಿತ್ಯ ರೂಢಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಉತ್ತಮವಾಗಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಮರೆವಿನ ಕಾಯಿಲೆಯನ್ನು ದೂರ ಮಾಡಬಹುದು.

Leave a Reply

Your email address will not be published. Required fields are marked *