ಕಪ್ಪಾದ ಅಂಡರ್ ಆರ್ಮ್ಸ್ ಗೆ ಹೇಳಿಮಾಡಿಸಿದಂತ ಮನೆ ಮದ್ದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕೆಲವರಿಗೆ ಅಂಡರ್ ಆರ್ಮ್ಸ್ ಗಳು ಕಪ್ಪಾಗಿರುತ್ತವೆ. ಕೆಲವರು ಯಾವಾಗಲೂ ಬ್ಯೂಟಿಪಾರ್ಲರ್ಗೆ ಹೋಗುವುದರಿಂದ ಬಿಳಿಯಾಗಿರುತ್ತದೆ. ಅಂಡರ್ ಆರ್ಮ್ಸ್ ಗಳು ಕಪ್ಪಾಗಿದ್ದರೆ ಇದು ಅಸಹ್ಯವೆನಿಸುತ್ತದೆ. ಹೀಗೆ ಆಗದೆ ಇರಲು ಮನೆಯಲ್ಲಿ ಹಲವಾರು ಮದ್ದುಗಳಿವೆ. ಇದಕ್ಕೆ ಒಂದು ಸುಲಭವಾದ ಪರಿಹಾರವಿದೆ. ಆದ್ದರಿಂದ ಅದರ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಂಡರ್ ಆರ್ಮ್ಸ್ ಇರುವುದರಿಂದ ಕೆಲವರು ಕೈಯನ್ನು ಮೇಲೆತ್ತಲು ಧೈರ್ಯ ಮಾಡುವುದಿಲ್ಲ. ಏಕೆಂದರೆ ಯಾರಾದರೂ ನೋಡಿದರೆ ಏನಾದರೂ ತಿಳಿದುಕೊಳ್ಳುತ್ತಾರೆ ಎಂಬ ಭಯವಿರುತ್ತದೆ. ಲೂಸ್ ಶರ್ಟ್ ಗಳನ್ನು ಹಾಕಿಕೊಂಡರೆ ಅಂಡರ್ ಆರ್ಮ್ಸ್ ಗಳು ಕಾಣುತ್ತವೆ. ಆದ್ದರಿಂದ ಕೆಲವರು ಹೆಚ್ಚಾಗಿ ಫುಲ್ ತೋಳ್ ಇರುವ ಅಂಗಿಗಳನ್ನು ಹಾಕಲು ಇಷ್ಟಪಡುತ್ತಾರೆ. ಹಾಗಾಗಿ ಇದಕ್ಕೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾದ ಪರಿಹಾರವನ್ನು ಮಾಡಿಕೊಳ್ಳಬಹುದು.

ಕೆಲವರಿಗೆ ಅಂಡರ್ ಆರ್ಮ್ಸ್ ಗಳು ಕಪ್ಪಾಗಿರುತ್ತವೆ. ಇದಕ್ಕೆ ಕಾರಣ ಜನೆಟಿಕ್ ಎಂದು ಕೂಡ ಹೇಳಬಹುದು. ಹಾಗೆಯೇ ಡಯಾಬಿಟಿಸ್ ಇದ್ದವರಿಗೂ ಸಹ ಹೀಗೆ ಆಗಬಹುದು. ನಂತರದಲ್ಲಿ ಹಾರ್ಮೋನಿನ ಕಾರಣದಿಂದ ಕೂಡ ಇದು ಆಗಬಹುದು. ಇದಕ್ಕೆ ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಕೆಲವು ವಸ್ತುಗಳನ್ನು ಸಹ ಬಳಸುತ್ತಾರೆ. ಆದರೆ ಇದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಈ ಸುಲಭದ ವಿಧಾನದಲ್ಲಿ ಮಾಡುವುದರಿಂದ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಒಳ್ಳೆಯ ರೀತಿಯಲ್ಲಿ ಫಲಿತಾಂಶ ಸಿಗುತ್ತದೆ.

ಇದಕ್ಕೆ ಮೊದಲು ಕಾಲು ಲೋಟ ಹಸಿ ಹಾಲನ್ನು ತೆಗೆದುಕೊಳ್ಳಬೇಕು. ನಂತರ ಇದಕ್ಕೆ ಒಂದು ಚಮಚ ಸೋಡವನ್ನು ಹಾಕಬೇಕು. ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಹಾಕಬೇಕು. ಹಾಗೆಯೇ ಚೂರು ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅಂಡರ್ ಆರ್ಮ್ಸ್ ನಲ್ಲಿರುವ ಕೂದಲನ್ನು ಮೊದಲು ತೆಗೆದುಕೊಂಡ ನಂತರ ಇದನ್ನು ಹಚ್ಚಬೇಕು. ಇದನ್ನು ಚೆನ್ನಾಗಿ ಮಸಾಜ್ ಮಾಡಬೇಕು. ಇದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *