ಬೆಳಿಗ್ಗೆ ಉಪಹಾರಕ್ಕೆ ಹೆವಿ ಪ್ರೊಟೀನ್ ನೀಡುವ ಈ ಬ್ರೇಕ್ ಫಾಸ್ಟ್ ಮಾಡಿ

0 0

ಬೆಳಿಗ್ಗೆ ಉಪಹಾರಕ್ಕೆ ಹೆಚ್ಚಾಗಿ ದೋಸೆ ಮಾಡಿ ತಿನ್ನುವವರು ಜಾಸ್ತಿ. ಆದರೆ ಒಂದೇ ರೀತಿಯ ದೋಸೆ ಎಲ್ಲರಿಗೂ ಬೇಸರವೆನಿಸುತ್ತದೆ. ಹಾಗಾಗಿ ದೋಸೆಗೆ ಹಚ್ಚಿಕೊಳ್ಳಲು ದಿನನಿತ್ಯ ಏನಾದರೂ ವಿಧವಿಧವಾದದ್ದನ್ನು ಮಾಡುತ್ತಾರೆ. ಆದರೂ ಬೇರೆ ಬೇರೆ ರೀತಿಯ ದೋಸೆಯನ್ನು ಮಾಡುವವರು ಬಹಳ ಕಡಿಮೆ. ಆದ್ದರಿಂದ ನಾವು ಇಲ್ಲಿ ಆರೋಗ್ಯಕ್ಕೆ ಒಳ್ಳೆಯ ಪೋಷಕಾಂಶವನ್ನು ನೀಡುವ ಒಂದಷ್ಟು ರೀತಿಯ ಬೇಳೆ ಕಾಳುಗಳನ್ನು ಸೇರಿಸಿ ದೋಸೆ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ರೀತಿಯಾಗಿ ಮಾಡಿ ದೋಸೆಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ವಿಧವಾದ ದೋಸೆಯಲ್ಲಿ ಬಳಸುವ ಕಾಳುಗಳಲ್ಲಿ ಒಳ್ಳೆಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಇರುತ್ತವೆ. ಇದನ್ನು ಮಾಡುವುದು ಬಹಳ ಸುಲಭ. ಹಾಗೆಯೇ ಇದಕ್ಕೆ ಯಾವುದೇ ರೀತಿಯಾದ ಅಗತ್ಯ ಖರ್ಚುಗಳು ಅವಶ್ಯಕತೆ ಇರುವುದಿಲ್ಲ. ಮೊದಲು ಒಂದು ಲೋಟ ಅಕ್ಕಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕಾಲುಲೋಟ ಹೆಸರುಕಾಳನ್ನು ಹಾಕಬೇಕು.

ಅದಕ್ಕೆ ಎರಡು ಚಮಚದಷ್ಟು ತೊಗರಿಬೇಳೆಯನ್ನು ತೆಗೆದುಕೊಳ್ಳಬೇಕು. ನಂತರ ಮೈಸೂರ್ ದಾಲ್ ಅನ್ನು ತೆಗೆದುಕೊಳ್ಳಬೇಕು. ಇದು ಕೇಸರಿ ಬಣ್ಣವನ್ನು ಹೊಂದಿರುತ್ತದೆ ಇದನ್ನು ಎಲ್ಲರೂ ಮನೆಯಲ್ಲಿ ಬಳಸುವುದು ಬಹಳ ಕಡಿಮೆ. ನಂತರ ಇದಕ್ಕೆ 4 ಬಾದಾಮಿಯನ್ನು ಹಾಕಬೇಕು. ಬಾದಾಮಿಯು ದೇಹಕ್ಕೆ ಬಹಳ ಒಳ್ಳೆಯದು. ಬಾದಾಮಿಯನ್ನು ಬೆಳಿಗ್ಗೆ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ನಂತರ ಅದಕ್ಕೆ ಅಕ್ಕಿಯನ್ನು ಹಾಕಬೇಕು. ಹಾಗೆಯೇ ಅದಕ್ಕೆ ಒ ಹತ್ತು ಶೇಂಗಾವನ್ನು ಹಾಕಬೇಕು. ಕೊನೆಯದಾಗಿ ಎರಡು ಚಮಚ ಉದ್ದಿನಬೇಳೆಯನ್ನು ಹಾಕಬೇಕು. ಇವೆಲ್ಲವುಗಳನ್ನು ಒಟ್ಟಾರೆಯಾಗಿ ಸೇರಿಸಿ ಇದಕ್ಕೆ ನೀರನ್ನು ಹಾಕಿ ನೆನೆಸಬೇಕು. ಇವೆಲ್ಲವುಗಳಲ್ಲಿ ದೋಸೆಹಿಟ್ಟು ಬೀಸುವಂತೆ ಚೆನ್ನಾಗಿ ಬೀಸಬೇಕು. ನಂತರ ದೋಸೆಯ ಬಂಡಿಯನ್ನು ಚೆನ್ನಾಗಿ ಕಾಯಿಸಿಕೊಂಡು ದೋಸೆಯನ್ನು ಮಾಡಿ ತಿನ್ನಬೇಕು. ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Leave A Reply

Your email address will not be published.