ಹೊಟ್ಟೆ ಕ್ಲಿನ್ ಮಾಡುವ ಜೊತೆಗೆ ಮಲಬದ್ಧತೆ, ಅಸಿಡಿಟಿ ಗ್ಯಾಸ್ ನಿವಾರಿಸುತ್ತೆ ಈ ಮನೆಮದ್ದು

0 16

ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಈ ಎಲ್ಲಾ ಸಮಸ್ಯೆ ಕಾಡುತ್ತಿದೆ ಎಂದರೆ ಹೊಟ್ಟೆ ಸರಿಯಾಗಿಲ್ಲ ಎಂದು ಅರ್ಥ. ಹೊಟ್ಟೆ ಕ್ಲೀನ್ ಆಗಲು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಬಹುದಾದ ಮನೆಮದ್ದು ಹಾಗೂ ಈ ಮನೆಮದ್ದಿನ ಇತರೆ ಉಪಯೋಗವನ್ನು ಈ ಲೇಖನದ ಮೂಲಕ ತಿಳಿಯೋಣ.

ಬ್ಯೂಸಿ ಜೀವನ ಶೈಲಿಯಿಂದ ತಪ್ಪಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಹೊಟ್ಟೆ ಹಾಳಾಗುವುದು, ಮಲಬದ್ಧತೆ ಸಮಸ್ಯೆ ಉಂಟಾಗಿ ಇದರಿಂದ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರ, ಅಜೀರ್ಣದಂತ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಜೀರ್ಣಕ್ರಿಯೆ ಸರಿಯಾಗಿದ್ದರೆ ಮಾತ್ರ ದೇಹದ ಇತರೆ ಅಂಗಗಳಿಗೆ ಶಕ್ತಿ ದೊರೆಯುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲ ಅಂದರೆ ಕಿಡ್ನಿ, ಹೃದಯ ಹೀಗೆ ಇತರೆ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಈ ಸಮಸ್ಯೆಗೆ ನಾವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ ಜೊತೆಗೆ ಹೊಟ್ಟೆಯನ್ನು ಕ್ಲೀನ್ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಇಡೀ ದಿನ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ಲದೇ ಹೊಟ್ಟೆ ಹಸಿವು ಆಗುವುದಿಲ್ಲ, ನಿದ್ರೆ ಬರುವುದಿಲ್ಲ ಇದರಿಂದ ಮುಖದಲ್ಲಿ ಮೊಡವೆಗಳು, ಕೂದಲು ಉದುರುವುದು ಸಮಸ್ಯೆಗಳು ಕಂಡುಬರುತ್ತದೆ. ಹೊಟ್ಟೆಯನ್ನು ಕ್ಲೀನ್ ಮಾಡುವ ಆಯುರ್ವೇದ ಡ್ರಿಂಕ್ ಜೀರಿಗೆ ಟಿ ಇದೆ ಅದನ್ನು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ, ಸುಲಭವಾಗಿ ತಯಾರಿಸಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು ನೀರು, ಜೀರಿಗೆ, ನಿಂಬು, ಬ್ಲಾಕ್ ಸಾಲ್ಟ್.

ಮೊದಲು ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ಹಾಕಿ ನೀರು ಸ್ವಲ್ಪ ಬಿಸಿಯಾದ ತಕ್ಷಣ ಒಂದು ಸ್ಪೂನ್ ಜೀರಿಗೆ ಹಾಕಿ 3-4 ನಿಮಿಷದ ಚೆನ್ನಾಗಿ ಕುದಿಸಬೇಕು ಜೀರಿಗೆಯಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ ಅವು ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಅದರಲ್ಲಿ ಐರನ್ ಅಂಶ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತ ಸಂಚಾರವನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ. ನಂತರ ಒಂದು ಗ್ಲಾಸ್ ಗೆ ಸೋಸಿ 4-5 ಹನಿ ನಿಂಬೆ ರಸವನ್ನು ಹಾಗೂ ರುಚಿಗೆ ತಕ್ಕಷ್ಟು ಬ್ಲಾಕ್ ಸಾಲ್ಟ್ ಹಾಕಿ, ಸಿಹಿ ಇರಬೇಕು ಎನ್ನುವುದಾದರೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ, ನೀರು ಬಿಸಿ ಇರುವಾಗ ಜೇನುತುಪ್ಪ ಹಾಕಬಾರದು. ಜೀರಿಗೆ ಟಿಯನ್ನು ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಕುಡಿಯಬೇಕು. ಹೀಗೆ ಕುಡಿದಾಗ ಹೊಟ್ಟೆ ಕ್ಲೀನಾಗಿ ಆರೋಗ್ಯಯುತವಾಗಿ ಇರಬಹುದು. ದೇಹದಲ್ಲಿ ಟಾಕ್ಸಿನ್ ಇರುವುದಿಲ್ಲ ಹಾಗೂ ರಕ್ತ ಶುದ್ಧಿಯಾಗುತ್ತದೆ. ಈ ಟಿ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕರಗಿ ತೂಕ ಕಡಿಮೆ ಮಾಡಿಕೊಳ್ಳಬಹುದು ಅಲ್ಲದೇ ದೇಹದಲ್ಲಿ ಮೆಟಬೋಲಿಸಂ ರೇಟ್ ಅನ್ನು ಹೆಚ್ಚಿಸುತ್ತದೆ. ಅನೇಮಿಯಾ ಸಮಸ್ಯೆಯಿಂದ ಬಳಲುವವರು ಈ ಟಿ ಅನ್ನು ಕುಡಿಯುವುದು ಒಳ್ಳೆಯದು. ಈ ಟಿ ಅನ್ನು ಅಸಿಡಿಟಿ, ಗ್ಯಾಸ್ ಸಮಸ್ಯೆ ಕಾಣಿಸಿಕೊಂಡಾಗಲೂ ಕುಡಿಯಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಆರೋಗ್ಯ ಸಮಸ್ಯೆಯಿಂದ ದೂರವಿರಿ.

Leave A Reply

Your email address will not be published.