ಬಿಲ್ವಪತ್ರೆ ಎಲೆಯ ಜ್ಯುಸ್ ಮಾಡಿ ಸೇವನೆ ಮಾಡುವುದರಿಂದ ಶರೀರಕ್ಕೆ ಏನ್ ಲಾಭ?

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳು ಇವೆ. ಮನೆಯಲ್ಲೇ ಕೆಲವು ರೋಗಗಳಿಗೆ ಬಿಲ್ವ ಪತ್ರೆಯನ್ನು ಬಳಸಿ ಮನೆ ಮದ್ದನ್ನು ತಯಾರಿಸಬಹುದು. ಯಾವ ಯಾವ ರೋಗಗಳಿಗೆ ಬಿಲ್ವ ಪತ್ರೆ ಔಷಧಿ ಎಂದು ಈ ಲೇಖನದ ಮೂಲಕ ತಿಳಿಯೋಣ.

ಹಳ್ಳಿಗಳಲ್ಲಿ ಮನೆಯ ಅಂಗಳದಲ್ಲಿ ಬಿಲ್ವ ಪತ್ರೆ ಎಂಬ ಗಿಡ ಬೆಳೆದಿರುತ್ತದೆ. ಈ ಪತ್ರೆ ಈಶ್ವರನಿಗೆ ಬಹಳ ಶ್ರೇಷ್ಟ. ಬಿಲ್ವ ಪತ್ರೆ ನೋಡಲು ತ್ರಿಶೂಲದಂತೆ ಮೂರು ಮೂರು ಎಲೆಗಳನ್ನು ಹೊಂದಿರುತ್ತದೆ. ಗ್ರೀನ್ ಜ್ಯೂಸ್ ಥೆರಪಿ ಎಂದು ಹೇಳುತ್ತಾರೆ. ಗ್ರೀನ್ ಜ್ಯೂಸ್ ಮಾಡಲು ಪತ್ರೆಯ ಎಲೆಗಳು, 1 ಚಮಚ ಎಳ್ಳು, 1 ಸ್ಪೂನ್ ಅಗಸೆ ಬೀಜ, ಸ್ವಲ್ಪ ಬೆಲ್ಲ, ನೀರು ಹಾಕಿ ಜ್ಯೂಸ್ ಮಾಡಿ ಕುಡಿದರೆ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡುತ್ತದೆ ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಿಲ್ವ ಪತ್ರೆಯನ್ನು ಆಹಾರದಲ್ಲಿ ಬಳಸಿದರೆ ಅದು ವಾತ ಶಮನ ಮಾಡುತ್ತದೆ, ಮಂಡಿ ನೋವು, ಸೊಂಟ ನೋವು, ಕೈ, ಕಾಲು ನೋವು ನಿವಾರಣೆಯಾಗುತ್ತದೆ. ಬಿಲ್ವ ಪತ್ರೆ ಜೀರ್ಣಶಕ್ತಿಯನ್ನು ಹಚ್ಚಿಸುತ್ತದೆ ಹಾಗೂ ಜೀರ್ಣಶಕ್ತಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಐಬಿಎಸ್ ರೋಗಿಗಳು ಬಿಲ್ವ ಪತ್ರೆಯ ಎಳೆಯ ಕಾಯಿಯ ತಿರುಳನ್ನು ಹಾಗೆ ಅಥವಾ ಬೆಲ್ಲದೊಂದಿಗೆ ಸೇರಿಸಿ ಸೇವಿಸಬೇಕು. ಡಯಾಬಿಟೀಸ್ ಇರುವ ರೋಗಿಗಳು ಬಿಲ್ವ ಪತ್ರೆಯನ್ನು ಸೇವಿಸುವುದರಿಂದ ನಿಯಂತ್ರಣಕ್ಕೆ ಬರುತ್ತದೆ.

ಡಯಾಬಿಟೀಸ್ ಇಲ್ಲದೆ ಇರುವವರು ಸಹ ಬಿಲ್ವ ಪತ್ರೆಯನ್ನು ಸೇವಿಸುವುದರಿಂದ ಡಯಾಬಿಟೀಸ್ ಬರದಂತೆ ತಡೆಯುತ್ತದೆ. ಎಲೆಯ ಪೌಡರ್ ಅನ್ನು ಮಾಡಿಟ್ಟುಕೊಂಡು ಅದಕ್ಕೆ ನೆಲ್ಲಿಕಾಯಿ ಪುಡಿ ಮತ್ತು ಅರಿಶಿಣವನ್ನು ನೀರಿಗೆ ಹಾಕಿ ಕುಡಿಯುವುದರಿಂದ ಡಯಾಬಿಟೀಸ್ ಇದ್ದವರಿಗೆ ಅದರಿಂದಾಗುವ ಅಡ್ಡಪರಿಣಾಮದಿಂದ ರಕ್ಷಣೆ ಮಾಡುತ್ತದೆ. ವೈದ್ಯರು ಹೇಳಿದ ಔಷಧಿಗಳನ್ನು ತೆಗೆದುಕೊಳ್ಳುತ್ತಾ ಅದರೊಂದಿಗೆ ಈ ಪುಡಿಯನ್ನು ಸೇವಿಸಬೇಕು. ಅಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಧಿಕ ತೂಕವನ್ನು ಹೊಂದಿದವರು ಬಿಲ್ವ ಪತ್ರೆಯ ಕಷಾಯವನ್ನು ಅಥವಾ ಪುಡಿಯನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ. ಬಿಲ್ವ ಪತ್ರೆಯ ತಂಬಳಿ ಮಾಡಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲಿ ಬಿಲ್ವ ಪತ್ರೆಯಂತಹ ಗಿಡಗಳನ್ನು ಬೆಳೆಸಬೇಕು ಮನಸ್ಸಿಗೆ ನೆಮ್ಮದಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *