ಕೆಲವು ಜನರ ಬಳಿ ಸಕ್ರಮ ಆಸ್ತಿಗಿಂತ ಅಕ್ರಮ ಆಸ್ತಿ ಇರುವುದೇ ಹೆಚ್ಚು. ಅದರಿಂದ, ಅಕ್ರಮ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಬಹುದು ಅದಕ್ಕೆ, ಅರ್ಜಿ ಸಲ್ಲಿಕೆ ಮಾಡುವುದು ಹೇಗೆ.? ಅದಕ್ಕೆ ಏನೆಲ್ಲಾ ದಾಖಲೆಗಳ ಅಗತ್ಯ ಇದೆ?.  ಈ ಪ್ರಕ್ರಿಯೆ ಯಾವ ವಿಧಾನದಲ್ಲಿ ನಡೆಯುತ್ತದೆ ಎಂದು ತಿಳಿಯೋಣ;
 
ಗ್ರಾಮೀಣ ಪ್ರದೇಶದಲ್ಲೇ ಆಗಲಿ ಇಲ್ಲವೇ ನಗರ ಪ್ರದೇಶದಲ್ಲಿಯೇ ಆಗಲಿ ವಾಸ ಮಾಡಲು ಸ್ವಂತ ಮನೆ ಇಲ್ಲದ ಕಾರಣದಿಂದಾಗಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡ ಜನರಿಗೆ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಇನ್ನೊಂದು ಬಾರಿ ಅವಕಾಶ ಕಲ್ಪಿಸಿ ಕೊಡುತ್ತಿದೆ. ಅಕ್ರಮ ಸಕ್ರಮ ಯೋಜನೆಯ ಕೆಳಗೆ ಅರ್ಜಿ ಸಲ್ಲಿಕೆ ಮಾಡಿ. ಅದಕ್ಕೆ, ಅಗತ್ಯ ಇರುವ ಪೂರಕ ದಾಖಲೆಗಳನ್ನು ಕೊಟ್ಟರೆ ಮನೆಯನ್ನು ಸಕ್ರಮ ಮಾಡಿಕೊಳ್ಳಬಹುದು. ಆದರೆ, ಅನೇಕ ಜನರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ.ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ? ಈ ವಿಧಾನ ಹೇಗಿರುತ್ತದೆ.? ಇತ್ಯಾದಿ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳೋಣ.

ಅಗತ್ಯ ಇರುವ ದಾಖಲೆಗಳು :-

  • ಆಧಾರ್ ಕಾರ್ಡ್ ಮತ್ತು ಮನೆ ನಕ್ಷೆ
  • ಗ್ರಾಮ ಪಂಚಾಯಿತಿ ಇಲ್ಲವೇ ಪುರಸಭೆ ಇಲ್ಲವೇ ನಗರ ಸಭೆಯಲ್ಲಿ ಕಂದಾಯ ಕಟ್ಟಿರುವ ರಸೀದಿ.
  • ಮನೆಯ ಫೋಟೋ ಸ್ಥಳೀಯ ಪರಿಚಿತ ಜನರಿಂದ ಪಂಚನಾಮೆ ಸಹಿ.

ಅರ್ಜಿ ಸಲ್ಲಿಕೆ ಮಾಡುವ ವಿಧಾನ:-

  • ಅಕ್ರಮ ಸಕ್ರಮ ಯೋಜನೆಯ ಕೆಳಗೆ ಅರ್ಜಿ ಸಲ್ಲಿಕೆ ಮಾಡಲು ಅಪ್ಲಿಕೇಶನ್ ಫಾರಂ ಸಿಗುತ್ತದೆ. ಆ, ಅಪ್ಲಿಕೇಶನ್ ಫಾರಂ ಪಡೆದುಕೊಂಡು ಅದರಲ್ಲಿ, ಕೇಳಿರುವ ಸ್ವ-ವಿವರಗಳನ್ನು ಸರಿಯಾಗಿ ತುಂಬಿಸಿ ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆ ಪ್ರತಿಗಳನ್ನು ಸಹ ಲಗತ್ತಿಸಬೇಕು.
  • ತಾಲೂಕು ವ್ಯಾಪ್ತಿಗೆ ಬರುವ ಅಟಲ್ ಜಿ ಜನಸ್ನೇಹಿ ಕೇಂದ್ರ ಇಲ್ಲವೇ ನೆಮ್ಮದಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು.
  • ಅರ್ಜಿ ಸಲ್ಲಿಕೆ ಮಾಡಿದ ಮೇಲೆ ಅವರು ಅರ್ಜಿ ಸ್ವೀಕರಿಸಿ ಒಂದು ಆಕ್ನಾಲಜಿಮೆಂಟ್ ( acknowledgement ) ಸಹ ಕೊಡುತ್ತಾರೆ. ಇದನ್ನು, ತಪ್ಪದೆ ತೆಗೆದುಕೊಳ್ಳಬೇಕು.
  • ಯಾಕೆಂದರೆ ಇದರ ಮುಖಾಂತರ ಕಚೇರಿಗೆ ಬಾರದೆ ಆನ್’ಲೈನ್ ಮೂಲಕ ಸ್ಟೇಟಸ್ ಏನಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಅರ್ಜಿ ಸಲ್ಲಿಕೆ ಮಾಡಿದ ಮೇಲೆ ಮುಂದಿನ ಪ್ರಕ್ರಿಯೆಗಳು ಯಾವ ರೀತಿ ನಡೆಯುತ್ತವೆ :-

  • ಸಲ್ಲಿಕೆ ಮಾಡಿದ ಅರ್ಜಿಯ ಪರೀಕ್ಷೆಗಾಗಿ ನಿಮ್ಮ ಗ್ರಾಮದ ವಿಲೇಜ್ ಅಕೌಂಟೆಂಟ್ ( Village accountant ) ಅವರ ಕಚೇರಿಗೆ ಹೋಗುತ್ತದೆ.
  • ರೆವೆನ್ಯೂ ಇನ್ಸ್ಪೆಕ್ಟರ್ ( RI ) ಹಾಗೂ ವಿಲೇಜ್ ಅಕೌಂಟೆಂಟ್ ( VA ) ಇಬ್ಬರು ವಿಳಾಸಕ್ಕೆ ಆಗಮಿಸಿ ಜಾಗ ಪರೀಕ್ಷೆ ಮಾಡಿ ಹಾಗು ಈ ಮೇಲೆ ಸಹಿ ಮಾಡಿರುವ ಪಂಚನಾಮೆ ಸಾಕ್ಷಿಗಳ ಸಮ್ಮುಖದಲ್ಲಿ ಜೊತೆಗೆ ಸುತ್ತಮುತ್ತಲ ಮನೆ ಮಾಲೀಕರ ಸಮ್ಮುಖದಲ್ಲಿ ಅಳತೆ ಮಾಡಿಸುವರು.
  • ವಾಸ್ತವಿಕವಾಗಿ ವಿವರ ಬರೆದು ಅದನ್ನು, ತಯಾರಿಸಿ ಸಮಿತಿ ಎದುರು ಮಂಡಿಸುತ್ತಾರೆ. ( ಸಮಿತಿಯಲ್ಲಿ ಸ್ಥಳೀಯ ಶಾಸಕರು ಅಧ್ಯಕ್ಷರಾಗಿ ಇರುತ್ತಾರೆ, ತಹಶೀಲ್ದಾರರ ಕಾರ್ಯದರ್ಶಿಗಳಾಗಿ ಇರುತ್ತಾರೆ ವಿಲೇಜ್ ಅಕೌಂಟೆಂಟ್ ಮತ್ತು ರೆವೆನ್ಯೂ ಇನ್ಸ್ಪೆಕ್ಟರ್ ಕೂಡ ಇರುತ್ತಾರೆ.)
  • ಎಲ್ಲವೂ ಸರಿ ಇದ್ದರೆ ಮಂಡಳಿ ಕಡೆಯಿಂದ ಆಸ್ತಿ ಅಕ್ರಮದಿಂದ ಸಕ್ರಮವಾಗಿ ಬದಲಾಗಿರುವ ಆಸ್ತಿ ಹಕ್ಕುಪತ್ರ ದೊರಕುತ್ತದೆ.
  • ಇದಾದ ನಂತರ 15 ದಿನಗಳ ಒಳಗೆ ಯಾರಾದರು ತಕರಾರು ಮಾಡಿದರೆ ಸೂಕ್ತ ದಾಖಲೆಗಳ ಜೊತೆಗೆ ತಕರಾರು ಅರ್ಜಿ ಸಲ್ಲಿಕೆ ಮಾಡಿದರೆ 15 ದಿನಗಳ ಕಾಲಾವಕಾಶ ಮಾಡಿಕೊಡಲಾಗುತ್ತದೆ.

ಅಕ್ರಮ-ಸಕ್ರಮಕ್ಕೆ ಇರುವ ಕಂಡೀಷನ್’ಗಳು :-
*ಸಕ್ರಮವಾಗಿ ಬದಲಾದ ಮನೆ ಹಕ್ಕುಪತ್ರ ನಿಮ್ಮ ಹೆಸರಿನಲ್ಲಿ ಇದ್ದರು ಸಹ ಯಾರಿಗೂ ಆ ಮನೆಯನ್ನು ಮಾರುವಂತೆ ಇಲ್ಲ.
*ಮನೆಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುವಂತೆ ಇಲ್ಲ.
*ನಿರ್ಮಾಣ ಆಗಿರುವ ಮನೆಗೆ ಮಾತ್ರ ಈ ರೀತಿ ಅಕ್ರಮ ಸಕ್ರಮ ಯೋಜನ ಕೆಳಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರುತ್ತದೆ.

ಯಾರಾದರೂ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದರೆ ಈ ಯೋಜನೆಯ ಕೆಳಗೆ ಮೇಲೆ ತಿಳಿಸಿರುವ ವಿಧಾನ ಬಳಸಿ ಅಕ್ರಮ ಮನೆಯನ್ನು ಸಕ್ರಮ ಮಾಡಿಕೊಳ್ಳಿ.

Leave a Reply

Your email address will not be published. Required fields are marked *