ಮಳೆಗಾಲ ಶುರು ಆಯಿತು ಅಂದ್ರೆ ಸಾಕು ಮನೆಯಲ್ಲಿ ಮಲಗೋಕೆ, ಕುಳಿತು ಕೊಳ್ಳಲು ಸಹ ಬಿಡೋದಿಲ್ಲ ಈ ಸೊಳ್ಳೆಗಳು ಅಷ್ಟೊಂದು ಹಾವಳಿ ಹೆಚ್ಚಾಗುತ್ತೆ, ಆದ್ರೆ ಈ ಸೊಳ್ಳೆಗಳಿಗೆ ಕಡಿವಾಣ ಹಾಕಲು ನಾನಾ ರೀತಿಯ ಪ್ರಯತ್ನ ಪಟ್ಟರು ಕೂಡ ಸೊಳ್ಳೆಗಳು ಕಡಿಮೆ ಆಗೋದಿಲ್ಲ. ಆ ರೀತಿಯ ಸಮಸ್ಯೆಗೆ ಸುಲಭ ಹಾಗೂ ಸೂಕ್ತ ಪರಿಹಾರ ಮಾರ್ಗವನ್ನು ಈ ಮೂಲಕ ತಿಳಿಯೋಣ. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.
ಎಲ್ಲರಿಗೂ ತಿಳಿದಿರುವ ಹಾಗೇ ಸೊಳ್ಳೆಗಳು ಡೆಂಗ್ಯೂ, ಚಿಕನ್ ಗುನ್ಯದಂತಹ ರೋಗಗಳನ್ನು ಹರಡುತ್ತದೆ. ಇವು ನಿಂತ ನೀರಿನಲ್ಲಿ ಬೆಳೆಯುತ್ತದೆ. ಸೊಳ್ಳೆಗಳು ಎಲ್ಲರ ಮನೆಯಲ್ಲೂ ಇರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು. ಸೊಳ್ಳೆಗಳಿಂದ ಹರಡುವ ರೋಗಗಳೇನು ಕಡಿಮೆ ಇಲ್ಲ ಹಾಗಾದ್ರೆ ಸೊಳ್ಳೆಗಳು ನಮ್ಮ ಮನೆ ಹತ್ರ ಬರಬಾರ್ದು ಅಂದ್ರೆ ಏನೆಲ್ಲಾ ಮಾಡ್ಬೇಕು ಯಾವ ವಿಧಾನವನ್ನು ಅನುಸರಿಸಿದರೆ ಸೊಳ್ಳೆಗಳನ್ನು ನಿಯಂತ್ರಣ ಮಾಡಬಹುದು ಅಂತ ನೋಡೋಣ. ಈ ಕ್ರಮಗಳನ್ನು ಅನುಸರಿಸಿ.
ಒಂದು ಹಣತೆಯನ್ನು ತೆಗೆದುಕೊಂಡು ಅದಕ್ಕೆ ಎರಡು ಇಡೀ ಬೆಳ್ಳುಳ್ಳಿಯನ್ನು ಜಜ್ಜಿಹಾಕಿ ಅದಕ್ಕೆ ಎರಡು ಕರ್ಪೂರ ಹಾಕಿ ನಂತರ ಅದಕ್ಕೆ ಓಂಕಾಳು, ಅರ್ಧ ಸ್ಫೂನ್ ತುಪ್ಪ ಹಾಕಿ ಅದರ ಮೇಲೆ ಎರಡು ಕರ್ಪೂರ ಹಾಕಿ ಕರ್ಪೂರ ಹತ್ತಿಸಬೇಕು. ಆಗ ಬರುವ ಹೊಗೆಯನ್ನು ಇಡೀ ಮನೆಯ ಮೂಲೆಮೂಲೆಯಲ್ಲಿ ಹಿಡಿಯಬೇಕು. ಇದರಿಂದಾಗಿ ಸೊಳ್ಳೆಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದೂ ಇಲ್ಲ. ನೀವು ಆರೋಗ್ಯವಂತರಾಗಿರಬಹುದು.