ಶಕ್ತಿ ವರ್ಧಕ ರಾಗಿ ಅಂಬಲಿ ಕುಡಿಯುವುದರಿಂದ ಎಷ್ಟೊಂದು ಲಾಭಗಳಿವೆ

0 7

ಮೊದಲೆಲ್ಲ ಹಳ್ಳಿಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದು ರಾಗಿ ಮುದ್ದೆ ರಾಗಿ ಅಂಬಲಿ ಇಂದು ನಗರಗಳಲ್ಲಿ ಸಹ ಆರೋಗ್ಯದ ದೃಷ್ಟಿಯಿಂದ ಬಳಸಲಾಗುತ್ತದೆ. ರಾಗಿ ನಮ್ಮ ದೇಹಕ್ಕೆ ತಂಪು ನೀಡುತ್ತದೆ. ಇದನ್ನು ಪಾನೀಯವಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾದ್ರೆ ಈ ರಾಗಿಯಿಂದ ಏನೆಲ್ಲಾ ತಯಾರಿಸಬಹುದು ಅದರ ಪ್ರಯೋಜನಗಳು ಏನು ಅನ್ನೋದನ್ನ ನೋಡೋಣ ಬನ್ನಿ

ಬೇಸಿಗೆಯಲ್ಲಿ ಹೆಚ್ಚು ಉಷ್ಣತೆಯಿಂದ ಬಳಲುತ್ತೇವೆ ಆಗ ತಂಪಾಗಿ ಇರೋಣ ಅಂತ ನಾವು ಹೆಚ್ಚು ಹೆಚ್ಚು ಪಾಶ್ಚಿಮಾತ್ಯ ತಂಪು ಪಾನೀಯಗಳ ಮೊರೆ ಹೋಗುತ್ತೇವೆ ಆದರೆ ಅದರಿಂದ ಆರೋಗ್ಯಕರ ಲಾಭಕ್ಕಿಂತ ಅನಾರೋಗ್ಯವೇ ಹೆಚ್ಚು. ಹೀಗಾಗಿ ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ತಂಪನ್ನು ನೀಡುವ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ರಾಗಿ ಗಂಜಿ ಅಥವಾ ರಾಗಿ ಅಂಬಲಿ. ಹಾಗಾದ್ರೆ ರಾಗಿ ಅಂಬಲಿ ಪ್ರಯೋಜನಗಳು ಏನು ಅನ್ನೋದನ್ನ ತಿಳಿದುಕೊಳ್ಳೋಣ.

ರಾಗಿ ದೇಹಕ್ಕೆ ಶಕ್ತಿ ನೀಡುವ ಆಹಾರ ಜೊತೆಗೆ ನಮ್ಮ ದೇಹದಲ್ಲಿನ ಅನಾವಶ್ಯಕ ಕೊಬ್ಬನ್ನು ಕರಗಿಸುತ್ತದೆ. ರಾಗಿಯಲ್ಲಿರುವ ಕ್ಯಾಲ್ಸಿಯಂ ಪ್ರೊಟೀನ್ ಮೂಳೆಗಳನ್ನು ಬಲಗೊಳಿಸುತ್ತದೆ. ವಯಸ್ಸಾದವರು ರಾಗಿ ಗಂಜಿ ಕುಡಿಯುವುದರಿಂದ ಅವರ ಮೂಳೆಗಳಿಗೆ ಅಧಿಕ ಕ್ಯಾಲ್ಸಿಯಂ ದೊರಕಿಸಿ ಮೂಳೆಗಳನ್ನು ಬಲಪಡಿಸುತ್ತದೆ.

ರಾಗಿಯು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಪ್ರಪಂಚದಾದ್ಯಂತ ಸಕ್ಕರೆ ಕಾಯಿಲೆ ಇರುವ ಲಕ್ಷಾಂತರ ಜನರಿದ್ದಾರೆ ಅಂತವರಿಗೆಲ್ಲ ರಾಗಿ ಬಹಳಷ್ಟು ಉಪಯೋಗಕಾರಿ. ರಾಗಿಯನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ರಾಗಿ ಸೇವಿಸುವ ಜನರಲ್ಲಿ ೩೦% ಅಷ್ಟು ಜನರಿಗೆ ಮಧು ಮೇಹ ಕಾಯಿಲೆ ನಿವಾರಣೆ ಆಗಿದೆ ಎಂದು ಅಧ್ಯಯನ ತಿಳಿಸುತ್ತದೆ.

ಇತ್ತೀಚೆಗೆ ನಮ್ಮ ಆಹಾರ ಪದ್ಧತಿಯಿಂದಾಗಿ ಮಕ್ಕಳಿಗೆ ಸರಿಯಾದ ವಿಟಮಿನ್ ಪ್ರೊಟೀನ್ ಗಳು ದೊರೆಯುತ್ತಿಲ್ಲ ಅಂತಹ ಮಕ್ಕಳು ಜೀವಸತ್ವದ ಕೊರತೆಯಿಂದಾಗಿ ಬಳಲುತ್ತಾರೆ ಇಂತಹ ಮಕ್ಕಳಿಗೆ ರಾಗಿ ಗಂಜಿ ಬಹಳಷ್ಟು ಪ್ರಯೋಜನಕಾರಿ.

ರಾಗಿಯಲ್ಲಿ ಇರುವ ಮ್ಯಾಗ್ನಿಶ್ಯಂ ಅಂಶವು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯಕಾರಿ. ಹೃದಯಾಘಾತದಿಂದ ಉತಂತಾಗುವ ಪಾರ್ಶ್ವ ವಾಯು ಕಾಯಿಲೆಯನ್ನು ನಿಯಂತ್ರಿಸುತ್ತದೆ. ಅಷ್ಟೆ ಅಲ್ಲದೆ ನಮ್ಮ ದೇಹದಲ್ಲಿ ಇರುವ ವಿಷಾಮ್ಲವನ್ನು ತೆಗೆದುಹಾಕುತ್ತದೆ. ರಾಗಿ ಸೇವನೆಯಿಂದ ವಿಟಮಿನ್ ಡಿ ಸಿಗುತ್ತದೆ ಹಾಗೂ ಕೂದಲು ಬೆಳವಣಿಗೆಗೆ ಸಹಾಯಕಾರಿ ಆಗುತ್ತದೆ. ರಾತ್ರಿಯ ಸಮಯದಲ್ಲಿ ರಾಗಿಯ ಪದಾರ್ಥಗಳನ್ನು ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಹಳ್ಳಿ ಕಡೆಯ ಜನರು ಹೆಚ್ಚು ಹೆಚ್ಚು ರಾಗಿ ಅಂಬಲಿ ಗಂಜಿ ರಾಗಿ ರೊಟ್ಟಿಗಳನ್ನು ಸೇವಿಸುವುದರಿಂದ ಅವರಿಗೆ ಎಷ್ಟೇ ವಯಸ್ಸಾದರೂ ಗಟ್ಟಿಯಾಗಿ ಇರುತ್ತಾರೆ. ಇಷ್ಟೆಲ್ಲಾ ಪ್ರಯೋಜನಕಾರಿಯಾದ ರಾಗಿಯನ್ನು ಎಲ್ಲರೂ ಸೇವಿಸೋಣ ಹಾಗೂ ಮುಖ್ಯವಾಗಿ ಸಕ್ಕರೆ ಕಾಯಿಲೆಯಿಂದ ಮುಕ್ತರಾಗೋಣ

Leave A Reply

Your email address will not be published.