ಹೃದಯ ಸಂಬಂಧಿ ಕಾಯಿಲೆಗಳಿಂದ ದೂರು ಮಾಡುವ ಅಗಸೆ ಬೀಜ

0 1

ಅಗಸೆ ಬೀಜ ಇದನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬಳಕೆ ಮಾಡುವುದರಿಂದ ಇದರ ಬಳಕೆ ಅಷ್ಟಾಗಿ ನಗರ ಪ್ರದೇಶದವರಿಗೆ ತಿಳಿದಿಲ್ಲ. ಸಾವಿರಾರು ವರ್ಷಗಳ ಹಿಂದೆ ಆಹಾರವಾಗಿ ಸೇವಿಸುತ್ತಿದ್ದ ಅಗಸೆ ಬೀಜ ವನ್ನು ಆಧುನಿಕ ಜೀವನ ಶೈಲಿಯಲ್ಲಿ ಮರತೆಬಿಟ್ಟಿದ್ದಾರೆ. ಇದರಲ್ಲಿ ಇರುವಷ್ಟು ಪೌಷ್ಟಿಕಾಂಶ ಬೇರೆ ಯಾವುದೇ ಆಹಾರ ಪದಾರ್ಥಗಳಲ್ಲಿ ಇಲ್ಲ. ಇದನ್ನು ದಿನನಿತ್ಯ ಬಳಸಿದ್ದಲ್ಲಿ ಆರೋಗ್ಯದಲ್ಲಿ ನಿರೀಕ್ಷಿತ ಬದಲಾವಣೆ ಕಾಣಬಹುದು.

ಉತ್ತಮ ಆಹಾರ ಪದಾರ್ಥಗಳಲ್ಲಿ ಅಗಸೆ ಬೀಜವನ್ನು ಪ್ರಥಮ ಸ್ಥಾನದಲ್ಲಿ ನೋಡಬಹುದು. ಶೆಂಗಾ, ಬಾದಾಮಿ, ಮೀನನಲ್ಲಿರುವಷ್ಟು ಪೌಷ್ಟಿಕಾಂಶ ವನ್ನು15 ಗ್ರಾಂ ಅಗಸೆ ಬೀಜ ದಿಂದಲೇ ಪಡೆಯಬಹುದಾಗಿದೆ. ಇನ್ನು ಪ್ರತಿದಿನ ಅಗಸೆ ಬೀಜವನ್ನು ಬಳಸುತ್ತಿದ್ದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಅವುಗಳೆಂದರೆ. ಅಗಸೆ ಬೀಜದಲ್ಲಿರುವ ನಾರಿನಾಂಶ ದೇಹದ ತೂಕವನ್ನು ಇಳಿಸುತ್ತದೆ ಅಲ್ಲದೆ ಕಬ್ಬಿಣ ಮತ್ತು ಪ್ರೊಟೀನ್ ಅಂಶವಿರುತ್ತದೆ.

ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ ಅಗಸೆ ಬೀಜ. ಇದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರಮಾಡುತ್ತದೆ.ಅಗಸೆ ಬೀಜದಲ್ಲಿ ಒಮೇಗಾ ತ್ರಿ ಇರುವುದರಿಂದ ಇದರ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಹಾಗೇ ಸ್ತನ ಹಾಗೂ ರಕ್ತ ಕ್ಯಾನ್ಸರ್ ತಡೆಯಲು ಸಹಾಯಕವಾಗಿದೆ.

ಇನ್ನು ಅಗಸೆಯನ್ನ ಹೇಗೆ ಸೇವನೆ ಮಾಡಬೇಕೆಂದರೆ. ಅಗಸೆ ಬೀಜವನ್ನು ಚಟ್ನಿ ಮಾಡಿ ತಿನ್ನಬಹುದು ಅಥವಾ ಅಗಸೆ ಬೀಜವನ್ನು ಪುಡಿಮಾಡಿ ಮೊಸರಿನಲ್ಲಿ ಬೆರಸಿ ಕುಡಿಯಬಹುದು. ಆದರೆ ಅಗಸೆ ಬೀಜವನ್ನು ಪುಡಿ ಮಾಡಿದ 15 ನಿಮಿಷದಲ್ಲಿ ಸೇವಿಸಬೇಕು ಇಲ್ಲವಾದಲ್ಲಿ ಇದರಲ್ಲಿರುವ ಪ್ರೊಟೀನ್ ಅಂಶ ನಶಿಸುತ್ತದೆ. ಹೀಗೆ ಅಗಸೆ ತಿನ್ನುವುದರಿಂದ ಅಧಿಕ ಲಾಭ ಪಡೆಯಬಹುದು.

Leave A Reply

Your email address will not be published.