ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ ಆಸಕ್ತರು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಶ್ರೀ ಸಿದ್ಧಗಂಗಾ ಮಠ, ತುಮಕೂರು ಜಿಲ್ಲೆ ಆಶ್ರಯದಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳ ಅನುದಾನಿತ ಹಿರಿಯ ಪ್ರೌಢಶಾಲೆಗಳಲ್ಲಿ 2015ರ ಡಿಸೆಂಬರ್ 31ರವರೆಗೆ ವರ್ಗಾವಣೆ, ಮರಣ ಮತ್ತು ಬಡ್ತಿಯಿಂದಾಗಿ ಖಾಲಿ ಉಳಿದಿರುವ ವಿವಿಧ ವಿಷಯಗಳ ಸಹಾಯಕ ಶಿಕ್ಷಕರು/ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ.
ಹುದ್ದೆಗಳ ವಿವರ ಹೀಗಿದೆ:
ಹುದ್ದೆಯ ಹೆಸರು- ಶಿಕ್ಷಕರು
ಹುದ್ದೆಗಳ ಸಂಖ್ಯೆ-51
ಕನ್ನಡ ವಿಷಯ ಸಹಶಿಕ್ಷಕರು-9
ಆಂಗ್ಲ ವಿಷಯ ಸಹಶಿಕ್ಷಕರು-16
ಹಿಂದಿ ವಿಷಯ ಸಹಶಿಕ್ಷಕರು-3
ಗಣಿತ ವಿಷಯ ಸಹಶಿಕ್ಷಕರು-4
ವಿಜ್ಞಾನ ವಿಷಯ ಸಹಶಿಕ್ಷಕರು-8
ಕಲಾ ವಿಷಯಗಳ ಸಹಶಿಕ್ಷಕರು-8
ದೈಹಿಕ ಶಿಕ್ಷಣ ಶಿಕ್ಷಕರು-3
ವಿದ್ಯಾರ್ಹತೆ: ಪದವಿ ಹಾಗೂ ಬಿ.ಇಡಿ ಶಿಕ್ಷಣ ತರಬೇತಿಯನ್ನು ಸಂಬಂಧಿಸಿದ ವಿಷಯಗಳ ಬೋಧನ ಕ್ರಮಗಳಿಗೆ ತಕ್ಕಂತೆ ಹೊಂದಿರಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿ
E- Mail ವಿಳಾಸ
ಮೊಬೈಲ್ ನಂಬರ್
ವೈಯಕ್ತಿಕ ವಿವರ
ಆಧಾರ್ ಕಾರ್ಡ್
ಎಸ್ಎಸ್ಎಲ್ಸಿ ಅಂಕಪಟ್ಟಿ,
ಪದವಿ ಹಾಗೂ ಬಿ.ಇಡಿ ಶಿಕ್ಷಣ ಪ್ರಮಾಣ ಪತ್ರ, ಈ ದಾಖಲೆಗಳ ಜೆರಾಕ್ಸ್
ಅರ್ಜಿಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಪೋಸ್ಟಿಂಗ್ ವಿವರಗಳನ್ನು ಪರಿಶೀಲಿಸಲು ಸಂಸ್ಥೆಯ ವೆಬ್ಸೈಟ್ www.sses.org.in ಗೆ ಭೇಟಿ ನೀಡಬಹುದು, ಅಧಿಸೂಚನೆಯನ್ನು ಓದಬಹುದು ಮತ್ತು ಪ್ರತಿ ವರ್ಗಕ್ಕೆ ಕಾಯ್ದಿರಿಸಿದ ಹುದ್ದೆಗಳ ಸಂಖ್ಯೆಯನ್ನು ಪರಿಶೀಲಿಸಬಹುದು. ನಂತರ ಈ ವೆಬ್ಸೈಟ್ನಿಂದ ಅರ್ಜಿ ನಮೂನೆಯನ್ನು ಪಡೆದು ಜುಲೈ 24 ರಿಂದ 21 ರೊಳಗೆ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿಯ ಪ್ರತಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ತುಮಕೂರು ಜಿಲ್ಲೆ ಇವರಿಗೆ ಕಳುಹಿಸಿ.