ಲಾಫಿಂಗ್ ಬುದ್ಧನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ನೋಡಬಹುದಾದ ವಿಗ್ರಹ ಇದನ್ನು ವಾಸ್ತು ಪ್ರಕಾರವಾಗಿ ಇಟ್ಟಿರುತ್ತಾರೆ ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ಲೇಖನದಲ್ಲಿ ಇದೆ. ಚೀನಾ ಲಾಫಿಂಗ್ ಬುದ್ಧನನ್ನು ಚೀನಾದಲ್ಲಿ ‘ಬುಡೈ'(Budai) ಎಂದು ಕರೆಯುತ್ತಾರೆ. ಆತ ಚೀನಾದ ಲಿಯಾಂಗ್ ರಾಜವಂಶದ ಅವಧಿಯಲ್ಲಿ ವಾಸಿಸುತ್ತಿದ್ದ ವಿಲಕ್ಷಣ ಚೀನೀ ಝೆನ್ ಸನ್ಯಾಸಿ(Zen monk). ಅವರು ಫೆಂಗ್ಹುವಾ ಮೂಲದವರಾಗಿದ್ದರು ಮತ್ತು ಅವರ ಬೌದ್ಧ ಹೆಸರು ಕ್ವಿಸಿ. ಅವರು ಒಳ್ಳೆಯ ಮತ್ತು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ವ್ಯಕ್ತಿ.

ಕೆಲವು ಬೌದ್ಧ ಸಂಪ್ರದಾಯಗಳು ಅವನನ್ನು ಬುದ್ಧ ಅಥವಾ ಬೋಧಿಸತ್ವ ಎಂದು ಪರಿಗಣಿಸುತ್ತವೆ ಸಾಮಾನ್ಯವಾಗಿ ಅವರನ್ನು ಮೈತ್ರೇಯ ಅಂದರೆ ಭವಿಷ್ಯದ ಬುದ್ಧ ಎಂದು ನಂಬಲಾಗುತ್ತದೆ. ಅವನ ದೊಡ್ಡ ಚಾಚಿಕೊಂಡಿರುವ ಹೊಟ್ಟೆ ಮತ್ತು ಜಾಲಿ ಸ್ಮೈಲ್ ಅವನಿಗೆ ‘ನಗುವ ಬುದ್ಧ’ ಎಂಬ ಸಾಮಾನ್ಯ ಪದನಾಮವನ್ನು ನೀಡಿದೆ.

ಬುದ್ಧನ ಹೊಟ್ಟೆಯನ್ನು ಉಜ್ಜಿದರೆ ದನ ಸಂಪತ್ತು ಹಾಗೂ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ ಎಂದು ನಂಬಿಕೆ ಇದ್ದು ಜಪಾನಿನ ಏಳು ಶಿಂಟೋ ದೇವರಲ್ಲಿ ಒಂದಾಗಿ ನೋಡುವರು ಇನ್ನೂ ಚೀನಾದ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಬುದ್ಧನ ಪ್ರತಿಮೆ ಇದ್ದು ನೋಡಿದರೆ ಅದೃಷ್ಟ ಎನ್ನುವುದು ವಾಡಿಕೆ ಇದನ್ನು ಇಂದು ಭಾರತೀಯ ಸಂಸ್ಕೃತಿ ಅಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ

ಹಾಗಾಗಿ ಜೀವನದಲ್ಲಿ ಸಂತೋಷ ಹಾಗೂ ನಗುವನ್ನು ಪಡೆಯಲು ಇದನ್ನು ಖರೀದಿ ಮಾಡಿ ಜನರು ತಮ್ಮ ವಾಹನ ಕಚೇರಿ ಹಾಗೂ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಇಡುವಾಗ ಕೆಲವು ವಾಸ್ತು ಹಾಗೂ ಫೆಂಗ್ ಶುಯ್ ನಿಯಮಗಳನ್ನು ಪಾಲಿಸಬೇಕು ಇನ್ನೂ ಶುದ್ಧ ಮನಸ್ಸಿನ ಮೂಲಕ ಖರೀದಿ ಮಾಡಬೇಕು ದುರಾಷೆ ಮೂಲಕ ಖರೀದಿ ಮಾಡಿದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ

ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಕುಬೇರ ಮೂಲೆಯ ಅಲ್ಲಿ ಅದನ್ನು ಇಟ್ಟು ಪೂಜಿಸಬೇಕು ಯಾವತ್ತೂ ಸಂಪತ್ತನ್ನು ಒಳಗೆ ತರುವ ರೀತಿಯಲ್ಲಿ ಇದನ್ನು ಇಡಬೇಕು ಇಲ್ಲವಾದಲ್ಲಿ ಬರುವರಿಗೆ ಮುಖ ತೋರಿಸುವ ಹಾಗೆ ಇಟ್ಟರೆ ಏನು ಲಾಭವಿಲ್ಲ ಹಾಗೂ ಈ ವಿಗ್ರಹವನ್ನು ಕುಬೇರ ಎಂದು ಕರೆಯುತ್ತಾರೆ ಮನೆಯಲ್ಲಿ ಲಿವಿಂಗ್ ರೂಮ್ ಅಲ್ಲಿ ಇರಿಸಿ ವಿದ್ಯಾರ್ಥಿಗಳು ಕೂಡ ತಮ್ಮ ಅಭ್ಯಾಸ ಕೊಠಡಿಯಲ್ಲಿ ಇಟ್ಟರೆ ಉತ್ತಮ ಹಾಗೂ ಹೆತ್ತವರಿಗೆ ಗೌರವದಿಂದ ನೋಡುವರು ಬುದ್ಧನನ್ನು ನಿಮ್ಮ ಕಣ್ಣಿನ ಮಟ್ಟಕಿಂತ ಮೇಲಿನ ಸ್ಥಳದಲ್ಲಿ ಇರಿಸಿ ಒಳ್ಳೆಯದು ಕಚೇರಿಯಲ್ಲಿ ಇಟ್ಟರೆ ಶತ್ರುಗಳು ಕಡಿಮೆ ಆಗಿ ಕೆಲಸದಲ್ಲಿ ಅಭಿವೃದ್ದಿ ಆಗುವುದು.

Leave a Reply

Your email address will not be published. Required fields are marked *