ಪಿತ್ತ ಆಗಿದಕ್ಕೆ ಸಾಕಷ್ಟು ಕಾರಣಗಳು ಇವೆ. ಆಗಳಲ್ಲಿ ಕೆಲವೊಂದು ಕಾರಣಗಳ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. ಪಿತ್ತ ಆಗೋಕೆ ಮೊದಲ ಕಾರಣ ಎಂದರೆ ಬೆಳಗ್ಗೆ ಬೆಳಗ್ಗೆ ಟೀ ಕಾಫಿ ಕುಡಿಯುವುದು. ವಿಜ್ಞಾನಿಗಳು ಇದರ ಬಗ್ಗೆ ಮುಂದುವರೆದು ಬೆಳಗ್ಗೆ ಬೆಳಗ್ಗೆ ಟೀ ಕಾಫಿ ಕುಡಿಯುವುದನ್ನು ಒಂದು ರಾಷ್ಟ್ರೀಯ ಕಾಯಿಲೆ ಎಂದು ಪರಿಗಣಿಸಿದ್ದಾರೆ. ವ್ಯಸ್ಥಿತವಾಗಿ ಕಾಯಿಲೆಗೆ ಬೀಳಿಸುತ್ತಾರೆ. ಒಂದು ವಿಧದಲ್ಲಿ ನಾವೇ ಕಾಯಿಲೆಯನ್ನು ತರಿಸಿಕೊಂಡು ನಾವೇ ಔಷಧಿಯನ್ನು ಹುಡುಕಿಕೊಂಡು ಹೋಗುತ್ತೇವೆ. ಸಮಾಜವನ್ನೇನು ನಮ್ಮಿಂದ ಬದಲಾಯಿಸೋಕೆ ಆಗಲ್ಲ ಹಾಗಾಗಿ ಕಾಯಿಲೆ ಬರದಂತೆ ನಮ್ಮನ್ನ ನಾವು ಬದಲಾಯಿಸಿಕೊಳ್ಳೋಣ. ಹಾಗಾಗಿ ಕಾಯಿಲೆಗಳಲ್ಲಿ ಪಿತ್ತವೂ ಒಂದಾಗಿರುವುದರಿಂದ ಇದನ್ನ ಬಡಲಾಯಿಸಿಕೊಳ್ಳೋದು ಹೇಗೆ ಅನ್ನೋದನ್ನ ನೋಡೋಣ. ಮೊದಲಿಗೆ ಪಿತ್ತ ಬರದಂತೆ ತಡೆಗಟ್ಟಲು ಕಾಫಿ ಟೀ ಕುಡಿಯುವುದನ್ನು ಮೊದಲು ನಿಲ್ಲಿಸಬೇಕು ಇದರ ಬದಲು ಆಯುರ್ವೇದದಲ್ಲಿ ಹಲವಾರು ಕಷಾಯಗಳು ಇವೆ ಅದನ್ನು ಸೇವಿಸಬಹುದು. ಸಕ್ಕರೆ ಬಳಕೆ ಕಡಿಮೆ ಮಾಡಬೇಕು. ವಿಶ್ವ ಆರೋಗ್ಯ ಸಂಸ್ಥೆ WHO ಅವರು ಸಕ್ಕರೆಯನ್ನು ನಿಶಾನಕ್ಕೆ ಮಾನವನ ದೇಹಕ್ಕೆ ವಿಷವನ್ನು ಪೂರೈಸುವ ಪದಾರ್ಥ ಎಂದು ತಿಳಿಸಿದ್ದಾರೆ. ಅಂತಹ ವಿಷವನ್ನು ನಾವು ಪ್ರತೀ ದಿನ ಕಾಫಿ ಟೀ ಮೂಲಕ ನಮ್ಮ ದೇಹಕ್ಕೆ ನೀಡುತ್ತಾ ಇದ್ದೇವೆ. ಇದರಿಂದ ಕಾಯಿಲೆಗಳು ಬರುತ್ತವೆ. ಇದರ ಬದಲು ಸಾವಯವ ಬೆಲ್ಲವನ್ನು ಬಳಸಬೇಕು. HF ಮತ್ತು ಜರ್ಸಿ ಇವು ಮಾನವ ನಿರ್ಮಿತ ಹಸುಗಳ ವಿಧ. ಇವುಗಳ ಹಾಲ ಎನ್ನುವ ಹಾಲಹಲವನ್ನು ಸೇವಿಸುತ್ತಿದ್ದೇವೆ ಇದು ಕೂಡ ಪಿತ್ತವನ್ನು ಹೆಚ್ಚಿಸುತ್ತದೆ. ಮಾಂಸಾಹಾರ ಸೇವನೆ ಮುಖ್ಯವಾಗಿ ತುಂಬಾ ಅಪಾಯಕಾರಿ ಆಗಿದೆ. ಆದಿಮಾನವನ ಕಾಲದಿಂದಲೂ ಬಂದ ಹಲವಾರು ರೀತಿ ನೀತಿಗಳನ್ನು ಬದಲಾಯಿಸಿಕೊಂಡು ಬಂದಿದ್ದೇವೆ ಆದರೆ ಸತ್ತ ಪ್ರಾಣಿಗಳನ್ನ ತಿನ್ನುವುದನ್ನು ಮಾತ್ರ ಇನ್ನೂ ಬಿಡಲೇ ಇಲ್ಲ. ಇದರಿಂದಲೂ ಹಲವಾರು ರೋಗಗಳು ಬರುತ್ತವೆ. ಇವುಗಳಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ.

ನಂತರ ಧೂಮಪಾನ, ಮಧ್ಯಪಾನ ಹಾಗೂ ಗುಟ್ಕಾ ಇವುಗಳಿಂದಲೂ ಸಹ ನಮ್ಮ ದೇಹದಲ್ಲಿ ಪಿತ್ತ ಉತ್ಪತ್ತಿ ಆಗುತ್ತದೆ ಹಾಗಾಗಿ ಇವುಗಳ ಸೇವನೆಯನ್ನು ನಿಲ್ಲಿಸಬೇಕು. ಹಾಗೆ ಬೇಕರಿ ಉತ್ಪನ್ನಗಳು ಮೈದಾ ಬಳಕೆ , ಡಾಲ್ಡಾದಲ್ಲಿ ಕರಿದಿರುವ ಬೇಕರಿ ಉತ್ಪನ್ನಗಳು ಸಹ ನಮ್ಮ ದೇಹದಲ್ಲಿ ಪಿತ್ತವನ್ನು ಜಾಸ್ತಿ ಮಾಡುತ್ತವೆ. ಅಷ್ಟೇ ಅಲ್ಲದೆ ಇವುಗಳ ಸೇವನೆಯಿಂದ ಡಯಾಬಿಟಿಸ್ ಕೂಡಾ ಬರುವ ಸಾಧ್ಯತೆ ಇರುತ್ತದೆ. ರೆಡಿಮೇಡ್ ಹಿಟ್ಟು , ಸಾಂಬಾರ ಪೌಡರ್ ಗಳು ಇವುಗಳಿಂದಲೂ ಪಿತ್ತ ಉಂಟಾಗುತ್ತದೆ. ರೆಡಿಮೇಡ್ ಪದಾರ್ಥಗಳ ಬಳಕೆಯಿಂದ ನಾವೇ ಮನೆಯಲ್ಲಿ ತಯಾರಿಸಿಕೊಳ್ಳುವುದು ಉತ್ತಮ.ಹಾಗೆ ಪಾಲಿಶ್ ಮಾಡಿದ ಅಕ್ಕಿಯ ಸೇವನೆ, ಪ್ರತೀ ದಿನ ಯಥೇಚ್ಛವಾಗಿ ಹಸಿಮೆಣಸಿನಕಾಯಿ ಸೇವನೆ ಮಾಡುವವರಿಗೂ ಸಹ ಪಿತ್ತದ ಸಮಸ್ಯೆ ಬರುತ್ತದೆ. ಅಪರೂಪಕ್ಕೆ ತಿನ್ನುವುದರಿಂದ ಏನೂ ಆಗಲ್ಲ ಆದರೆ ಪ್ರತೀ ದಿನ ಹಸಿಮೆಣಸಿನಕಾಯಿ ತಿನ್ನುವುದರಿಂದ ಪಿತ್ತ ದೋಷ ಕಟ್ಟಿಟ್ಟ ಬುತ್ತಿ. ರೇಫೈನ್ಡ್ ಆಯಿಲ್ ಗಳು ಅದರಲ್ಲೂ ರೇಫೈನ್ಡ್ ಆಯಿಲ್ ನಿಂದ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಇದು ಪಿತ್ತ ಆಗಲು ಉತ್ತಮ ಔಷಧ ಆಗಿ ಕೆಲಸ ಮಾಡುತ್ತದೆ.

ಈ ಒಂದು ಮಾತನ್ನು ನಂಬುವುದು ಸ್ವಲ್ಪ ಕಷ್ಟ ಆಗಬಹುದು ಅತಿಯಾದ ಬಿಸಿ ನೀರಿನ ಸ್ನಾನ ಮಾಡುವುದರಿಂದಲೂ ಸಹ ಪಿತ್ತ ಹೆಚ್ಚು ಆಗುತ್ತದೆ. ಬಿಳಿ ಉಪ್ಪನ್ನು ಬಳಸುವುದರಿಂದಲೂ ಇದರಲ್ಲಿ ಏಳೆಂಟು ರೀತಿಯ ರಾಸಾಯನಿಕಗಳು ಸೇರಿಸಿ ಮಾಡಿರುವುದರಿಂದ ಬಿಳಿ ಉಪ್ಪು ಕೂಡಾ ಪಿತ್ತವನ್ನು ಉಂಟು ಮಾಡುತ್ತದೆ. ಬೆಳಿಗ್ಗೆ ಎಂಟು ಗಂಟೆಯ ನಂತರ ಎದ್ದು ತಿಂಡಿ ಮಾಡುವವರಿಗೂ ಸಹ ಪಿತ್ತ ದೋಷ ಉಂಟಾಗುತ್ತದೆ. ಯಾರಿಗೆ ಜಾಸ್ತಿ ಕೋಪ ಬರುತ್ತದೆಯೋ ಅವರಿಗೂ ಸಹ ಪಿತ್ತ ಹೆಚ್ಚು ಇರತ್ತೆ. ರಾತ್ರಿ ಹತ್ತು ಗಂಟೆಗಿಂತಲೂ ತಡವಾಗಿ ಮಲಗುವವರಿಗೂ ಹಾಗೂ ರಾತ್ರಿ ಪಾಳಿ ಕೆಲಸ ಮಾಡುವವರಿಗೂ ಸಹ ಪಿತ್ತ ದೋಷ ಬರುತ್ತದೆ. ಪಂಚಭೂತಗಳಿಂದ ಆದ ನಮ್ಮ ದೇಹವನ್ನು ಅದರ ವಿರುದ್ಧ ದಿಕ್ಕಿನಲ್ಲಿ ನಾವು ಉಪಯೋಗಿಸುತ್ತ ಇದ್ದೇವೆ ಇದರಿಂದ ನಮಗೆ ಕಾಯಿಲೆಗಳು ಬರುತ್ತವೆ. ಬೆಳಿಗ್ಗೆ ತಡವಾಗಿ ಏಳುವವರಿಗೆ ಪಿತ್ತ ದೋಷ ಬರುತ್ತೆ. ಬೆಳಿಗ್ಗೆ ಎದ್ದ ನಂತರ ಬಾಯಿ ಸ್ವಚ್ಛ ಮಾಡಿಕೊಂಡು ಎರಡು ಲೋಟ ಬಿಸಿ ನೀರು ಕುಡಿಯುವುದರಿಂದ ಪಿತ್ತ ದೋಷ ಬರುವುದಿಲ್ಲ. ಹಾಗೆ ಮೈಕ್ರೋ ಒವೆನ್ ಅಲ್ಲಿ ಯಾರೆಲ್ಲ ಆಹಾರವನ್ನು ಬಿಸಿ ಮಾಡಿ ತಿನ್ನುತ್ತೀರೋ ಅವರಿಗೆಲ್ಲ ಪಿತ್ತ ಕಟ್ಟಿಟ್ಟ ಬುತ್ತಿ. ಇದರಿಂದ ಪಿತ್ತ ಮಾತ್ರ ಅಲ್ಲದೆ ಚರ್ಮ ರೋಗಗಳು, ಕ್ಯಾನ್ಸರ್ ಅಂತಹ ರೋಗಗಳೂ ಸಹ ಮೈಕ್ರೋ ಒವೆನ್ ಬಳಕೆಯಿಂದ ಬರುತ್ತವೆ. ಹೆಚ್ಚಾಗಿ ಮಸಾಲೆ ಇರುವ ಪದಾರ್ಥಗಳನ್ನು ತಿನ್ನುವುದರಿಂದಲೂ ಸಹ ಒಇಟ್ಟ ದೋಷ ಬರುತ್ತೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಇತಮಿತವಾಗಿ ಮಸಾಲೆ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಆದರೆ ಬೇಸಿಗೆಯಲ್ಲೂ ಸಹ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಪಿತ್ತ ಕಟ್ಟಿಟ್ಟ ಬುತ್ತಿ. ಮನುಷ್ಯನಿಗೆ ದುಡ್ಡು ಹೆಚ್ಚಾದಂತೆ ಕಾಯಿಲೆಗಳೂ ಸಹ ಹೆಚ್ಚೆಚ್ಚು ಆಗುತ್ತಾ ಹೋಗುತ್ತದೆ.

By

Leave a Reply

Your email address will not be published. Required fields are marked *