ಮನೆಯಲ್ಲಿ ಶೇಂಗಾ ಬೀಜ ಇದ್ರೆ ದಿಡೀರ್ ಆಗಿ ತಯಾರಿಸಿ ಶೇಂಗಾ ಚಿಕ್ಕಿ

0 1

ಸುಲಭ ರೀತಿಯಲ್ಲಿ ರುಚಿಯಾದ ಶೇಂಗಾ ಚಿಕ್ಕಿಯನ್ನು ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಶೇಂಗಾ ಚಿಕ್ಕಿ ಮಾಡೋಕೆ ಬೇಕಾಗಿರುವ ಸಾಮಗ್ರಿಗಳು :- ಶೇಂಗಾ 2 ಕಪ್,ಬೆಲ್ಲ 1 ಕಪ್ಎಣ್ಣೆ 4 ಟೀಸ್ಪೂನ್.

ಶೇಂಗಾ ಚಿಕ್ಕಿ ಮಾಡೋಕೆ ಬೇಕಾಗಿರೋದು ಈ ಮೂರು ಸಾಮಗ್ರಿಗಳು. ಹಾಗಾದ್ರೆ ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಮೊದಲು ಸ್ಟೋವ್ ಮೇಲೆ ಒಂದು ಪ್ಯಾನ್ ಇತ್ತು ಶೇಂಗಾ ಹಾಕಿ ಚೆನ್ನಾಗಿ ಗರಿ ಗರಿ ಆಯಾಗುವಂತೆ ಬಣ್ಣ ಬಡಲಾಗುವವರೆಗೂ ಹುರಿದುಕೊಳ್ಳಬೇಕು. ನಂತರ ಇನ್ನೊಂದು ಪ್ಲೇಟ್ ಗೆ ಹಾಕಿ ತಣ್ಣಗಾಗಲು ಬಿಡಬೇಕು.ಪೂರ್ತಿ ತಣ್ಣಗಾಗಲು ಬಿಡದೆ ಸ್ವಲ್ಪ ಬಿಸಿ ಇರುವಾಗಲೇ ಶೇಂಗಾ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಪ್ಯಾನ್ ಸ್ಟೋವ್ ಮೇಲೆ ಇಟ್ಟು ಒಂದು ಕಪ್ ಬೆಲ್ಲ ಹಾಕಿ ಅದಕ್ಕೆ 3 ಟೀ ಸ್ಪೂನ್ ಎಣ್ಣೆ ಸೇರಿಸಬೇಕು. ಎಣ್ಣೆ ಸೇರಿಸುವುದರಿಂದ ಚಿಕ್ಕಿ ಚೆನ್ನಾಗಿ ಬರತ್ತೆ. ಎಣ್ಣೆ ಬೆಲ್ಲದ ಜೊತೆ ಸೇರುವ ಹಾಗೆ ಮಿಕ್ಸ್ ಮಾಡಿಕೊಂಡು ಬೆಲ್ಲ ಕರಗಿಸಿ ಪಾಕ ತರಿಸಿಕೊಳ್ಳಬೇಕು.

ಒಂದು ಬೌಲ್ ನಲ್ಲಿ ತಣ್ಣೀರಿನಲ್ಲಿ ಬೆಲ್ಲದ ಪಾಕವನ್ನು ನೋಡಿಕೊಳ್ಳಬೇಕು. ಪಾಕ ಗಟ್ಟಿಯಾಗಿ ಇರಬೇಕು. ಪಾಕ ಬಂದಾಗ ಬೆಲ್ಲದ ಬಣ್ಣ ಸ್ವಲ್ಪ ಚೇಂಜ್ ಆಗುತ್ತದೆ. ಚೆನ್ನಾಗಿ ಪಾಕ ಬಂದ ನಂತರ ಸಿಪ್ಪೆ ತೆಗೆದಿಟ್ಟುಕೊಂಡ ಶೇಂಗಾವನ್ನು ಅದಕ್ಕೆ ಸೇರಿಸಿ ಸ್ಟೋವ್ ಉರಿಯನ್ನು ಸಣ್ಣ ಉರಿಯಲ್ಲಿ ಇಟ್ಟು ಕೈ ಆಡಿಸಿ ನಂತರ ಒಂದು ಪ್ಲೇಟ್ ಅಥವಾ ಪೇಪರ್ ಶೀಟ್ ಮೇಲೆ ಎಣ್ಣೆ ಸವರಿ ಅದರ ಮೇಲೆ ಹಾಕಿ ಲಟ್ಟಣಿಗೆ ಕೋಲಿನ ಸಹಾಯದಿಂದ ಲಟ್ಟಿಸಿ ಸರಿಯಾಗಿ ಲೇವಲ್ ಮಾಡಿ ನಂತರ ಐದು ನಿಮಿಷ ಬಿಟ್ಟು ಚಾಕುವಿನಿಂದ ಬೇಕಾದ ಆಕಾರಕ್ಕೆ ಹಾಗೂ ಬೇಕಾದ ಗಾತ್ರಕ್ಕೆ ಕಟ್ ಮಾಡಿ ಅರ್ಧ ಗಂಟೆಯ ಕಾಲ ಹಾಗೆಯೇ ಬಿಡಬೇಕು. ನಂತರ ಅದು ಸರಿಯಾಗಿ ಸೆಟ್ ಆಗಿರತ್ತೆ. ರುಚಿಯಾದ ಶೇಂಗಾ ಚಿಕ್ಕಿ ರೆಡಿ.

Leave A Reply

Your email address will not be published.