ಕೈ ಕಾಲುಗಳು ಜೋಮು ಹಿಡಿಯುವುದು ಮರಗೆಟ್ಟುವ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

0 407

ಕೆಲವೊಂದು ಸಲ ಸುಮ್ಮನೆ ಕುಳಿತಿದ್ದರೂ ಸಹ ಕೈ ಕಾಲುಗಳಲ್ಲಿ ಜೋಮು ಹಿಡಿದ ಅನುಭವ ಉಂಟಾಗುತ್ತದೆ. ಮಲಗಿದಾಗಲೂ ಸಹ ಕೆಲವೊಮ್ಮೆ ಕಾಲು ಮರಗೆಟ್ಟಿದ ಅನುಭವ ಆಗುತ್ತದೆ. ಆಗ ನಾವು ಕೈ ಕಾಲಿಗೆ ಸ್ವಲ್ಪ ಹೊಡೆದ ಹಾಗೆ ಮಾಡುತ್ತೇವೆ ಅಥವಾ ಕೈ ಕಾಲುಗಳನ್ನು ಶೇಕ್ ಮಾಡುತ್ತೇವೆ. ಆಗ ಸರಿ ಆದ ಅನುಭವ ಆಗುತ್ತದೆ. ಈಗಿನ ಜೀವನ ಶೈಲಿ ಅಥವಾ ನಮ್ಮ ಆಹಾರ ಪದ್ಧತಿಯಿಂದಾಗಿ ಒಂದೊಂದು ರೀತಿಯ ಕಾಯಿಲೆಗಳು ಬರುತ್ತಾ ಇವೆ. ಆದರೆ ನಾವು ಸಿಂಪಲ್ ಆಗಿ ನಮ್ಮ ಕಾಲು ಕೈ ಜೋಮು ಹಿಡಿದಿದೆ ಅಥವಾ ಮರಗೆಟ್ಟಿದೆ ಅಂದುಕೊಂಡರೆ ಅದು ಶುದ್ಧ ಸುಳ್ಳು. ಯಾಕಂದ್ರೆ ನಾವು ಅಳಗಿರುವಾಗ ಕೆಲವೊಮ್ಮೆ ನಮ್ಮ ಕೈ ಕಾಲುಗಳು ಜುಮ್ಮ್ ಎನ್ನುತ್ತ ಇರತ್ತೆ ಹೀಗಾದಾಗ ನಾವು ನಮ್ಮ ಕೈ ಗಳನ್ನ ತಲೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಇತ್ತು ಮಲಗಿದ್ದರಿಂದ ಜೋಮು ಹಿಡಿದಿದೆ ಅಂತ ತಿಳಿದಿರುತ್ತೇವೆ. ಆದರೆ ನಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ರಕ್ತ ಸಂಚಾರ ಆಗದೆ ಇದ್ದಾಗ ಅಲ್ಲಿ ನಮಹೇ ಸ್ಪರ್ಶ ಜ್ಞಾನ ಇರುವುದಿಲ್ಲ ಇದರಿಂದಾಗಿ ಯಾವುದೇ ವಸ್ತುವನ್ನು ಮುಟ್ಟಿದರೂ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣಗಳು ಎಂದರೆ ಕೈ ಕಾಲುಗಳ ಮೇಲೆ ಭಾರ ಬೀರುವುದು, ರಕ್ತನಾಳಗಳ ಮೇಲೆ ಒತ್ತಡ ಬೀಳುವುದು, ಅತಿಯಾದ ಧೂಮಪಾನ ಮತ್ತು ಮಧ್ಯಪಾನ ಮಾಡುವುದು, ತುಂಬಾ ತಂಪು ಪಾನೀಯಗಳನ್ನು ಸೇವಿಸುವುದು, ಇಷ್ಟೇ ಅಲ್ಲದೆ ಡಯಾಬಿಟಿಸ್ , ವಿಟಮಿನ್ ಬಿ12 ಕೊರತೆ ಹಾಗೂ ಹಲವಾರು ಪೋಷಕಾಂಶಗಳ ಕೊರತೆ ಇದ್ದಾಗಲೂ ಸಹ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದನ್ನ ನಾವು ನಿರ್ಲಕ್ಷ ಮಾಡದೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಂದೊಂದು ದಿನ ಇದು ಗಂಭೀರವಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾತಕ್ಕಾಗಿ ಶರೀರದ ಒಂದೇ ಭಾಗದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ? ಯಾಕೆ ರಕ್ತ ನಾಳಗಳಎಲೆ ಒಂದೇ ಕಡೆ ಒತ್ತಡ ಬೀಳುತ್ತದೆ? ಇದನ್ನ ತಿಳಿದುಕೊಳ್ಳುವುದು ಬಹಳ ಮುಖ್ಯ.

ಇವುಗಳಿಗೆ ಮುಖ್ಯ ಕಾರಣ ಆ ದೇಹದಲ್ಲಿನ ವಿಟಮಿನ್ ಬಿ12 ನ ಕೊರತೆ. ವಿಟಮಿನ್ ಬಿ12 ನಮ್ಮ ದೇಹದ ರಕ್ತ ನಾಳಗಳಿಗೆ ಶಕ್ತಿಯನ್ನು ಕೊಡುತ್ತದೆ. ಇದು ಎಲ್ಲಾ ಜೀವಕೋಶಗಳಿಗೆ ಅಗತ್ಯವಾಗಿ ಬೇಕಾಗಿದೆ. ಮೆದುಳು ಮತ್ತು ಮರಮಂಡಲದ ಮಧ್ಯೆ ಸಂದೇಶ ಕಳಿಸುವಲ್ಲಿ ವಿಟಮಿನ್ ಬಿ12 ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ವಿಟಮಿನ್ ಬಿ12 ನ ಕೊರತೆ ಉಂಟಾದರೆ ನರಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೆ ಇದು ನಮ್ಮ ದೇಹದ ಮೂಳೆಗಳ ಮೂಲಕ ರಕ್ತದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರ ಕೊರತೆ ಆದರೆ ರಕ್ತದ ಉತ್ಪಾದನೆಯಲ್ಲಿ ಸಹ ಸಮಸ್ಯೆ ಉಂಟಾಗಿ ಅನೇಮಿಯ ಅಥವಾ ರಕ್ತದ ಕೊರತೆ ಉಂಟಾಗಬಹುದು. ನಮ್ಮ ದೇಹದಲ್ಲಿ ವಿಟಮಿನ್ ಬಿ12 ನ ಉತ್ಪಾದನೆಗೆ ಪೂರಕವಾಗಿ ನಾವು ಕ್ಯಾಲ್ಶಿಯಂ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ವಿಟಮಿನ್ ಬಿ12 ನ ಉತ್ಪಾದನೆಗೆ ಬೇಕಾಗಿರುವ ಕ್ಯಾಲ್ಶಿಯಂ ಅನ್ನು ಹೇಗೆ ಪಡೆಯಬಹುದು ಅನ್ನುವುದನ್ನು ನೋಡೋಣ.

ಗಸಗಸೆಯನ್ನು ಸೇವಿಸುವುದರಿಂದ ನಾವು ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಶಿಯಂ ಅನ್ನು ಪಡೆದುಕೊಳ್ಳಬಹುದು. ಇದನ್ನ ಯಾವ ರೀತಿ ಸೇವಿಸಬೇಕು ಅಂದರೆ ಒಂದು ಪಾತ್ರೆಗೆ ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ 2 ಸ್ಪೂನ್ ಗಸಗಸೆ ಸೇರಿಸಿ ಸ್ಟೋವ್ ಮೇಲೆ ಇಟ್ಟು ಒಂದೆರಡು ನಿಮಿಷ ಕುದಿಸಿ ನಂತರ ಗಸಗಸೆಯನ್ನು ಸೋಸದೆ ಹಾಗೆ ಲೋಟಕ್ಕೆ ಹಾಕಿಕೊಂಡು ಹಾಲಿನ ಜೊತೆಗೆ ಗಸಗಸೆ ಕೂಡ ನಮ್ಮ ದೇಹಕ್ಕೆ ಸೇರಬೇಕು. ಒಂದುವೇಳೆ ಈ ರೀತಿ ಇಷ್ಟವಾಗದೇ ಇದ್ದಲ್ಲಿ ಗಸಗಸೆ ಪುಡಿ ಮಾಡಿಕೊಂಡು ಪಾಯಸ ಮಾಡಿ ಆದರೂ ಸೇವಿಸಬಹುದು. ಇದನ್ನ ಒಂದು ಹದಿನೈದು ದಿನ ಸೇವಿಸಬೇಕು. ಇದೇ ರೀತಿ ಬಿಳಿ ಎಳ್ಳನ್ನು ಸಹ ಉಪಯೋಗಿಸಿಕೊಳ್ಳಬಹುದು. ಬಿಳಿ ಎಲ್ಲ್ಲನ್ನು ಪುಡಿ ಮಾಡಿ ಹಾಲಿನಲ್ಲಿ ಹಾಕಿಕೊಂಡು ಕುಡಿದರೂ ಸಹ ಕ್ಯಾಲ್ಶಿಯಂ ಸಿಗುತ್ತದೆ. ಅಜವಾನವನ್ನು ಪ್ರತೀ ದಿನ ಒಂದು ಚಮಚ ಸೇವಿಸುವುದರಿಂದಲೂ ಸಹ ಕ್ಯಾಲ್ಶಿಯಂ ಸಿಗುತ್ತದೆ. ನಾವು ನಮ್ಮ ಆಹಾರದಲ್ಲಿ ಕ್ಯಾಲ್ಶಿಯಂ ಇರುವಂತಹ ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸುವುದರಿಂದ ಕ್ಯಾಲ್ಶಿಯಂ ಕೊರತೆ ಉಂಟಾಗುವುದಿಲ್ಲ. ಪ್ರತೀ ದಿನ ವಾಕಿಂಗ್, ರನ್ನಿಂಗ್ ಅಥವಾ ಯೋಗಾಸನ ,ಪ್ರಾಣಾಯಾಮ ಮಾಡುವುದು ಹೇಗೆ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಇವುಗಳಿಂದಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಆರೋಗ್ಯವನ್ನು ಪಡೆಯಬಹುದು.

Leave A Reply

Your email address will not be published.