ಮಗು ಪಡೆಯಲು ಹೆಣ್ಮಕ್ಕಳು ತಿಳಿಯಬೇಕಾದ ವಿಷಯ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಇವತ್ತಿನ ಈ ಲೇಖನದಲ್ಲಿ ಒಂದು ಮುಖ್ಯವಾದ ಹಾಗೂ ಆರೋಗ್ಯಕರವಾದ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ಈ ಮಾಹಿತಿ ಉಪಯೋಗ ಆಗುತ್ತದೆ. ತಾಯಿ ಅಥವ ತಾಯಿತನ ಎನ್ನುವುದು ಎಷ್ಟೊಂದು ಶ್ರೇಷ್ಠವಾದ ಸ್ಥಾನ. ಹೆಣ್ತನ ಅಂದರೆ ತಾಯಿ ತಾಯಿಯೆಂದರೆ ಸೃಷ್ಟಿಕರ್ತೆ ಹೆಣ್ಣನ್ನು ಯಾವುದಕ್ಕೆಲ್ಲ ಹೋಲಿಸಲಾಗಿದೆ ಭೂತಾಯಿ ಹೆಣ್ಣು ಪ್ರಕೃತಿಮಾತೆ ಹೆಣ್ಣು ನದಿ ಸರೋವರ ಕೆಲವು ಹೆಣ್ಣು, ಹೀಗೆ ಪ್ರತಿಯೊಂದಕ್ಕೂ ಹೆಣ್ಣಿನ ಹೋಲಿಕೆ ಮಾಡಲಾಗುತ್ತದೆ. ಇಂತಹ ಹೆಣ್ಣಿಗೆ ಮಕ್ಕಳಿಲ್ಲ ಅನ್ನುವ ಒಂದು ಕೊರಗು ತುಂಬಾ ದೊಡ್ಡ ನೋವು ಬಾಧೆಯಾಗಿರುತ್ತದೆ. ಅಂತಹ ಎಷ್ಟು ಜನ ಮಕ್ಕಳು ಇಲ್ಲದ ಹೆಣ್ಣು ಮಕ್ಕಳಿಗೆ ಈ ಲೇಖನ ಸ್ವಲ್ಪವಾದರೂ ಉಪಯೋಗವಾಗಬಹುದು.

ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳು ಗರ್ಭಕೋಶದಲ್ಲಿ ಇರುವಂತಹ ಅಂಡಾಣು ಬಿಡುಗಡೆ ಹಾಕಲೇಬೇಕು ಆಗದೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಗರ್ಭಧರಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಎಷ್ಟು ಜನ ಹೆಣ್ಣು ಮಕ್ಕಳಿಗೆ ಋತುಮತಿಯಾದ ಎಷ್ಟು ದಿನದ ನಂತರ ಇವರು ಗರ್ಭಧರಿಸಲು ಅರ್ಹರು ಎನ್ನುವುದರ ಬಗ್ಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಓವರಿಯಿಂದ ಅಂಡಾಣುಗಳು ಉತ್ಪತ್ತಿಯಾಗಿ ಫೇಲಪೇನೈನ್ ಟ್ಯೂಬ್ ಇಂದ ನಮ್ಮ ಗರ್ಭಕೋಶಕ್ಕೆ ಗರ್ಭಧಾರಣೆ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಗರ್ಭಕೋಶದಲ್ಲಿ ಅಂಡಾಣುಗಳು ಬಿಡುಗಡೆಯಾದಾಗ 5 ದಿನದವರೆಗೂ ಸ್ಪರ್ಮ್ ಇರುತ್ತದೆ. ಈ ಐದು ದಿನಗಳಲ್ಲಿ ಸ್ಪರ್ಮ್ ಅಂಡಾಣುಗಳು ಜೊತೆ ಸೇರಿದಾಗ ಗರ್ಭಧಾರಣೆ ಆಗುತ್ತದೆ. ಅಂದ್ರೆ ಎಷ್ಟು ಜನ ಹೆಣ್ಣು ಮಕ್ಕಳಿಗೆ ಗರ್ಭಧರಿಸುವಿಕೆ ಸಮಯ ಯಾವುದು ಅನ್ನೋದರ ಬಗ್ಗೆ ತಿಳಿದಿರಲಿಲ್ಲ. ಅಂತವರಿಗೆ ಓವಿಲೇಶನ್ ಕಿಟ್ ತುಂಬಾ ಸಹಾಯ ಮಾಡುತ್ತೆ. ಇದರಲ್ಲಿ ಅಂಡಾಣುಗಳು ಬಿಡುಗಡೆಯಾಗುತ್ತಿದ್ದ ರೇ ಸಮಯವಾಗಿದ್ದು ದಿನಗಳಲ್ಲಿ ಪ್ಲಾನಿಂಗ್ ಮಾಡಬಹುದು. ಆದರೆ ಈಗಲೇ ನಮಗೆ ಮಕ್ಕಳು ಬೇಡ ಅಂತ ಹಾಗೇ ಮುಂದೂಡುತ್ತಾ ಆದರೆ ನಂತರ ತೊಂದರೆ ಆಗುವುದು ಖಂಡಿತ. ಗರ್ಭಧಾರಣೆಗೆ ಸರಿಯಾದ ಸಮಯ ಅಂದ್ರೆ 19 ವರ್ಷದಿಂದ 27 ವರ್ಷದವರೆಗೆ ಆಗಿರುತ್ತದೆ 27 ವರ್ಷದ ನಂತರ ಅಂದರೆ ಹಲವಾರು ಸಮಸ್ಯೆಗಳು ಉದ್ದವಾಗುತ್ತದೆ ಇದರಿಂದ ಮಕ್ಕಳಾಗುವುದು ತಡವಾಗುತ್ತದೆ ಅಥವಾ ಆಗದೆಯೂ ಇರಬಹುದು. ಹಾಗಾದ್ರೆ ಈ ಓವಿಲೇಶನ್ ಟೆಸ್ಟ್ ಅಂದ್ರೆ ಏನು ಇದನ್ನ ಯಾವಾಗ ಹೇಗೆ ಉಪಯೋಗ ಮಾಡುವುದು ಅನ್ನೋದರ ಬಗ್ಗೆ ನೋಡೋಣ.

ಸಾಮಾನ್ಯವಾಗಿ ಓವಿಲೇಶನ ಟೆಸ್ಟನ್ನು ಪಿರಿಯಡ್ಸ್ ಮುಗಿದ 10 ದಿನಗಳ ನಂತರ ನೋಡಬೇಕಾಗುತ್ತದೆ. I know ಹೆಸರಿನ ಓವಿಲೇಷನ್ ಕಿಟ್ ಎಲ್ಲ ಮೆಡಿಕಲ್ ಶಾಪುಗಳಲ್ಲಿ ಸಹ ಸಿಗತ್ತೆ. ಆದರೆ ಕಿಟ್ ತೆಗೆದುಕೊಳ್ಳುವುದಕ್ಕಿಂತ ಮೊದಲು ಇದರ ಎಕ್ಸ್ಪೈರಿ ಡೇಟ್ ಅನ್ನು ನೋಡಿಕೊಂಡು ತೆಗೆದುಕೊಳ್ಳಬೇಕು. ಈ ಒಂದು ಕಿಟ್ ನ ಮೂಲಕ ನೀವು ಈ ತಿಂಗಳಿನಲ್ಲಿ ಯಾವ ದಿನಗಳಂದು ಅಂಡಾಣುಗಳು ಬಿಡುಗಡೆಯಾಗುತ್ತವೆ ಎನ್ನುವುದರ ಕುರಿತಾಗಿ ತಿಳಿದುಕೊಳ್ಳಬಹುದು. ಹಾಗೆ ಗರ್ಭ ನಿಲ್ಲುವುದಕ್ಕೆ ಯಾವ ಸಮಯದಲ್ಲಿ ಪ್ರಯತ್ನಿಸಿದರೆ ಗರ್ಭ ನಿಲ್ಲುತ್ತದೆ ಎನ್ನುವುದರ ಕುರಿತಾಗಿ ಸಹ ತಿಳಿದುಕೊಳ್ಳಬಹುದು . ಅದರಲ್ಲಿರುವ ಎಲ್ಲಾ ಸೂಚನೆಗಳನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು, ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ C ಎಂದು 1 ಗೆರೆ ಬಂದರೆ ಅಂಡಾಣು ಉತ್ಪತ್ತಿ ಸರಿಯಾಗಿ ಆಗುತ್ತಿಲ್ಲ ಎಂದರ್ಥ. ಎರಡು ಗೆರೆ ಬಂದಿದ್ದರೆ ಯಾವುದೇ ಸಮಸ್ಯೆ ಇಲ್ಲ ಧರಿಸಬಹುದು ಎಂದರ್ಥ ಹಾಗೂ ಯಾವುದೇ ಗೆರೆಗಳು ಬರೆದಿದ್ದಾರೆ ಇನ್ನೊಮ್ಮೆ ಟೆಸ್ಟ್ ಮಾಡಬೇಕು ಎನ್ನುವುದನ್ನು ಸೂಚಿಸುತ್ತದೆ. ಅದರಲ್ಲಿ ಕೊಟ್ಟಿರುವ ಸೂಚನೆಗಳನ್ನು ಸರಿಯಾಗಿ ನೋಡಿಕೊಳ್ಳಬೇಕು. ನಂತರ ಯೂರಿನ್ ಸ್ಯಾಂಪಲ್ ತೆಗೆದುಕೊಂಡು ಮೂರು ಹನಿ ಯೂರಿನ್ ಅನ್ನು ಹಾಕಿ ಐದು ನಿಮಿಷಗಳ ಕಾಲ ಬಿಡಬೇಕು. ಕಿಟ್ ನಲ್ಲಿ ಯುರಿನ್ ಹಾಕಿದಾಗ ಐದು ನಿಮಿಷದ ನಂತರ ಎಂಬ ಜಾಗದಲ್ಲಿ ಒಂದು ಗೆರೆಯನ್ನು ಮಾತ್ರ ತೋರಿಸಿದರೆ ಇನ್ನು ನಿಮ್ಮ ಪಕ್ಷದಲ್ಲಿ ಅಂಡಾಣುಗಳು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ ಅಥವಾ ಬಿಡುಗಡೆಯಾಗುತ್ತಿಲ್ಲ. ಸಿ ಮತ್ತು ಟಿ 2 ಜಾಗದಲ್ಲೂ ಎರಡು ಕೆಂಪು ಗೆರೆಗಳು ಕಾಣಿಸಿದರೆ ಅಂಡಾಣುಗಳು ಉತ್ಪತ್ತಿಯಾಗುತ್ತಿವೆ ಹಾಗೂ ಬಿಡುಗಡೆಯಾಗುತ್ತಿದೆ ಹಾಗೂ ಅಂಡಾಣು ಸರ್ಮ್ ಗಾಗಿ ಐದು ದಿನಗಳವರೆಗೂ ಕಾಯುತ್ತದೆ. ಈ ಸಮಯದಲ್ಲಿ ಪ್ಲಾನಿಂಗ್ ಮಾಡಬಹುದು. ಆದರೆ ಒಂದು ವೇಳೆ ಯಾವುದೇ ಗೆರೆಗಳನ್ನು ತೋರಿಸದಿದ್ದಲ್ಲಿ ಇನ್ನೊಮ್ಮೆ ಮರು ಪರೀಕ್ಷೆ ಮಾಡಬೇಕಾಗುತ್ತದೆ. ಇದನ್ನ ಯಾವಾಗ ಟೆಸ್ಟ್ ಮಾಡಬೇಕು ಅಂತ ಪ್ರಶ್ನೆ ಇದ್ರೆ ಪಿರಿಯಡ್ಸ್ ಆಗಿ ಹತ್ತು ದಿನದ ನಂತರ ಈ ಟೆಸ್ಟ್ ಮಾಡಬಹುದು. ಅದರಲ್ಲಿ ಸುಮಾರು ಮಧ್ಯಾಹ್ನದ ಸಮಯದಲ್ಲಿ ಈ ಟೆಸ್ಟನ್ನು ಮಾಡಿದರೆ ಸರಿಯಾದ ಉತ್ತರ ಸಿಗುತ್ತದೆ. ಆದಷ್ಟು ಇದರ ಪ್ರಯೋಜನವನ್ನು ಎಲ್ಲ ಹೆಣ್ಣುಮಕ್ಕಳಿಗೂ ತಿಳಿಯುವಂತಾಗಲಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *