ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿನದಾಗಿ ಬೇಕಾಗುತ್ತದೆ, ಯಾವ ಮನುಷ್ಯನಿಗೆ ರೋಗ ನಿರೋಧಕಶಕ್ತಿ ಇರುತ್ತದೆಯೋ ಅಂತವರಿಗೆ ಬೇಗನೆ ರೋಗಗಳು ಅಂಟೋದಿಲ್ಲ, ಹಾಗಾಗಿ ನೀವು ಕೂಡ ಮನೆಯಲ್ಲೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಜ್ಯುಸ್ ಮಾಡಿ ಕುಡಿಯಿರಿ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುವುದು.
ಅಷ್ಟಕ್ಕೂ ಮನೆಯಲ್ಲೇ ಹೇಗೆ ತಯಾರಿಸಬೇಕು ಹಾಗೂ ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡುವುದಾದರೆ ಮೊದಲನೇದಾಗಿ ಹಣ್ಣು ತರಕಾರಿಗಳು ಬೇಕಾಗುತ್ತವೆ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ನೀಡುವಂತ ಹಣ್ಣು ತರಕಾರಿಗಳು ದೇಹಕ್ಕೆ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ಯಾರೆಟ್ ಹಾಗೂ ಕಿತ್ತಳೆಹಣ್ಣು, ಸೇಬು ಇವುಗಳನ್ನು ಬಳಸಿ ಜ್ಯುಸ್ ತಯಾರಿಸಬೇಕಾಗುತ್ತದೆ, ಇವುಗಳಲ್ಲಿ ವಿಟಮಿನ್ ಅಂಶ ಹಾಗೂ ಪೌಷ್ಟಿಕಾಂಶಗಳು ಹೇರಳವಾಗಿರುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗು ಸಾಮಾನ್ಯವಾಗಿ ಕಾಡುವಂತ ಕೆಮ್ಮು ಶೀತ ಗಂಟಲುನೋವು ಮುಂತಾದವುಗಳನ್ನು ನಿಯಂತ್ರಿಸುತ್ತವೆ, ಇದನ್ನು ಹೇಗೆ ತಯಾರಿಸಬೇಕು ಅನ್ನೋದನ್ನ ಮುಂದೆ ನೋಡೋಣ.
ಜ್ಯುಸ್ ತಯಾರಿಸುವ ಮೊದಲನೆಯ ವಿಧಾನ: ಒಂದು ಕ್ಯಾರೆಟ್ ಒಂದು ಸೇಬು ಒಂದು ಕಿತ್ತಳೆಹಣ್ಣು ಇವುಗಳನ್ನು ಚನ್ನಾಗಿ ತೊಳೆದು, ಕಿತ್ತಳೆಹಣ್ಣು ಸುಲಿದು, ಕ್ಯಾರೆಟ್ ಕಟ್ ಮಾಡಿ, ಸೇಬುಹಣ್ಣು ತೊಳೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ, ನಂತರ ಅದನ್ನು ಒಂದು ಗ್ಲಾಸ್ ನಲ್ಲಿ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಹೀಗೆ ಮಾಡುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನಿಮ್ಮ ಸ್ನೇಹಿತರಿಗೂ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಂಡು ರೋಗಗಳಿಂದ ದೂರ ಉಳಿಯಲಿ