ಸಾಮಾನ್ಯವಾಗಿ ಈ ಹಣ್ಣು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತದೆ, ಈ ಹಣ್ಣನ್ನು ಎಲ್ಲರು ನೋಡಿರುತ್ತಾರೆ ಅಥವಾ ಕೇಳಿರುತ್ತಾರೆ ಈ ಹಣ್ಣಿನಲ್ಲಿ ಹತ್ತಾರು ಲಾಭಗಳನ್ನು ಪಡೆಯಬಹುದಾಗಿದೆ, ಈ ಹಣ್ಣು ಅಂಜೂರ ಹಣ್ಣು ಎಂದು ಗುರುತಿಸಿಕೊಂಡಿದೆ. ಈ ಹಣ್ಣು ಸೇವನೆಯಿಂದ ಹತ್ತಾರು ರೋಗಗಳನ್ನು ನಿವಾರಿಸಿಕೊಳ್ಳಬಹುದು.

ಅಂಜೂರ ಹಣ್ಣು ಯಾವೆಲ್ಲ ಸಮಸ್ಯೆಗೆ ಪರಿಣಾಮಕಾರಿ ಅನ್ನೋದನ್ನ ನೋಡುವುದಾದರೆ, ಮೂಲವ್ಯಾದಿ ಸಮಸ್ಯೆ ಇರೋರಿಗೆ ಹಾಗೂ ಮೂತ್ರದಲ್ಲಿ ಕಲ್ಲಿನ ಸಮಸ್ಯೆ ಇದ್ರೆ ಈ ಹಣ್ಣು ಸೇವನೆ ಮಾಡುವುದು ಉತ್ತಮ. ಇನ್ನು ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹಕ್ಕೆ ತಂಪು ಹಾಗೂ ಹಿತಕರವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಕಫ ಸಮಸ್ಯೆ ಇದ್ರೆ ಈ ಹಣ್ಣು ಸೇವನೆ ಸಹಕಾರಿಯಾಗಿದೆ ಹಾಗೂ ರಕ್ತ ಪಿತ್ತನಾಶಕ ಸಮಸ್ಯೆ ನಿವಾರಣೆಯಾಗುತ್ತದೆ, ಮಲಬದ್ದತೆ ಸಮಸ್ಯೆ ಇರೋರು ಪ್ರತಿದಿನ ಬೆಳಗ್ಗೆ ೨ ರಿಂದ ೩ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ನಿಯಂತ್ರಣಕ್ಕೆ ಬರುತ್ತದೆ. ಇನ್ನು ದೇಹದ ಉಷ್ಣತೆ ಸಮಸ್ಯೆ ಕಾಡುತ್ತಿದ್ದರೆ ಈ ಹಣ್ಣು ಸೇವನೆಯಿಂದ ಪರಿಹಾರ ಕಾಣಬಹುದು.

ಇನ್ನು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿರುವವರು ೫ ರಿಂದ ೬ ಅಂಜೂರಹಣ್ಣನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ, ಅದು ತಣ್ಣಗಾದ ಮೇಲೆ ಪ್ರತಿದಿನ ಸಂಜೆ ವೇಳೆ ಆ ನೀರನ್ನು ಸೇವಿಸುವುದರಿಂದ ಶ್ವಾಶಕೋಶ ತೊಂದರೆಗೆ ಪರಿಹಾರ ಕಾಣಬಹುದಾಗಿದೆ. ಇನ್ನು ಅಂಜೂರಹಣ್ಣನು ಮಕ್ಕಳು ಗಾಜು, ಪಿನ್ ಇಂತಹ ವಸ್ತುಗಳನ್ನು ನುಂಗಿದಾದಾಗ ಈ ಹಣ್ಣನು ಸೇವಿಸಿದರೆ ಮಲದ ಮೂಲಕ ಆ ವಸ್ತುಗಳು ಹೊರ ಬರಲು ಸಹಕಾರಿಯಾಗಿದೆ.

By

Leave a Reply

Your email address will not be published. Required fields are marked *