ಊಟ ಮಾಡುವಾಗ ಈ ವಿಧಾನ ಅನುಸರಿಸಿದ್ರೆ ನೂರು ವರ್ಷ ಅರೋಗ್ಯ ವೃದ್ಧಿಯಾಗುವುದು

0 79

ಸಹನಾ ಭವತು ಸಹನೌರ್ಭುನತ್ತು ಸಹಾವೀರ್ಯಂ ಕರವಾವ ಹೈ|
ತೇಜಸ್ವಿ ನಾಮಧೋ ತಮಸ್ತು ಮಾ ವಿದ್ವಿ ಶಾವ ಹೈ| ಈ ಸಂಸ್ಕೃತ ಶ್ಲೋಕದ ಅರ್ಥವೇನೆಂದರೆ ಈ ಭೌತಿಕ ಶರೀರದಲ್ಲಿ ನಾವು ತಿಂದಿರುವ ಆಹಾರ ಜೀರ್ಣವಾಗಲಿ. ನೂರು ಕಾಲ ಬದುಕುವಷ್ಟು ಶಕ್ತಿಯನ್ನು ನೀಡು ಎಂದು ಬೇಡಿಕೊಳ್ಳುವುದು.

ಮನುಷ್ಯನನ್ನು ಬುದ್ಧಿ ಜೀವಿಗಳು ಎಂದು ಕರೆಯುತ್ತಾರೆ. ಏಕೆಂದರೆ ದೇವರು ಮನುಷ್ಯನಿಗೆ ಬುದ್ಧಿಶಕ್ತಿಯನ್ನು ನೀಡಿದ್ದಾನೆ. ಅವನದೇ ಆದ ಸಂಸ್ಕ್ರತಿ, ಆಚಾರ ವಿಚಾರಗಳನ್ನು ಹೊಂದಿದ್ದಾನೆ. ಪ್ರತಿಯೊಂದು ಕೆಲಸ, ಕಾರ್ಯ ಮಾಡುವಾಗ ಅದರದೇ ಆದ ಕ್ರಮಬದ್ಧವಾದ ವಿಧಾನಗಳು ಇರುತ್ತವೆ. ಹಾಗೆಯೇ ಅದನ್ನು ಅನುಸರಿಸಿಕೊಂಡು ಹೋಗುವುದು ಅವನ ಕರ್ತವ್ಯವಾಗಿದೆ. ಹಾಗೆಯೇ ನಾವು ಇಲ್ಲಿ ಊಟ ಮಾಡುವಾಗ ಅನುಸರಿಸುವ ವಿಧಾನಗಳನ್ನು ತಿಳಿಯೋಣ.

ಊಟ ಮಾಡುವುದು ಯಾವುದೇ ಧರ್ಮ ಧಾರ್ಮಿಕ ಕಾರ್ಯಕ್ಕಿಂತ, ಯಾವುದೇ ಪೂಜೆ ಪುನಸ್ಕಾರಕ್ಕಿಂತ ಕಡಿಮೆಯೇನಲ್ಲ. ಅದಕ್ಕಿಂತ ಲೂ ಮಿಗಿಲಾದದ್ದು. ಊಟ ಮಾಡುವ ವಿಧಿ ವಿಧಾನ ಅದರದೇ ಆದ ಪ್ರಾಮುಖ್ಯತೆ ಪಡೆದಿದೆ. ಇಷ್ಟು ದೊಡ್ಡ ದೇಹವನ್ನು ನಿವಾರಣೆ ಮಾಡಬೇಕು ಅಥವಾ ಜೀವಂತ ವಾಗಿಡಬೇಕು.

ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡಬಾರದು. ಪದ್ಮಾಸನ ಹಾಕಿ ನೆಲದ ಮೇಲೆ ಕುಳಿತು ಕೊಳ್ಳಬೇಕು. ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಗಂಟೆಯ ನಾದ, ಶಂಖನಾದ ಅಲ್ಲಿಯ ವಾತಾವರಣ ನಾವು ಗಮನಿಸಿರುತ್ತೇವೆ. ಸ್ಮಶಾನಕ್ಕೆ ಹೋದರೆ ಅಲ್ಲಿಯ ವಾತಾವರಣ ಗಮನಿಸಿರುತ್ತೇವೆ. ಅದಕ್ಕೆ ಸ್ಥಳ ಮಹಿಮೆ ಎನ್ನುತ್ತಾರೆ. ಪ್ರತಿಯೊಂದು ಸ್ಥಳವು ಅದರದೇ ಆದ ವಾತಾವರಣ ಹೊಂದಿರುತ್ತದೆ. ಹಾಗೇ ಊಟದ ವಾತಾವರಣ ನಿರ್ಮಾಣವಾಗಬೇಕು.

ಊಟ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಗಾಡಿಯಲ್ಲಿ, ಬಸ್ಸಿನಲ್ಲಿ ಹೋಗುವಾಗ ತಿನ್ನುವುದು ಒಳ್ಳೆಯದಲ್ಲ. ಆಹಾರವನ್ನು ಒಂದು ಸ್ವಚ್ಛವಾದ ಸ್ಥಳದಲ್ಲಿ ಕುಳಿತು ತಿನ್ನಬೇಕು. ಮನೆಯ ಊಟಕ್ಕೂ, ದೇವಸ್ಥಾನದ ಪ್ರಸಾದಕ್ಕೂ, ಹೋಟೆಲ್ ಊಟಕ್ಕೂ ಬಹಳ ವ್ಯತ್ಯಾಸವಿದೆ. ಆಹಾರ ಪದಾರ್ಥಗಳನ್ನು ತಯಾರಿಸುವ ವಿಧಾನ ಒಂದೇ. ಆದರೆ ಅಲ್ಲಿಯ ವಾತಾವರಣ ರುಚಿಯನ್ನು ಬದಲಿಸುತ್ತದೆ. ಆಹಾರದ ಗುಣಗಳನ್ನು ಬದಲಾವಣೆ ಮಾಡುತ್ತದೆ. ಸಾತ್ವಿಕ ಆಹಾರವನ್ನು ರಾಜಸಿಕ ಆಹಾರವನ್ನಾಗಿ, ತಾಮಸಿಕ ಆಹಾರವನ್ನಾಗಿ ಮಾಡುತ್ತದೆ. ಆದ್ದರಿಂದ ನಾವು ಊಟ ಮಾಡುವಾಗ ಒಳ್ಳೆಯ ಮನಸ್ಸಿನಿಂದ ಸ್ವಚ್ಛ ಜಾಗದಲ್ಲಿ ಕುಳಿತು ಮಂತ್ರೋಚ್ಚಾರ ಮಾಡಿದರೆ ಒಳ್ಳೆಯ ಆರೋಗ್ಯ ನೂರು ವರ್ಷಗಳ ತನಕ ಪಡೆಯಬಹುದಾಗಿದೆ.

Leave A Reply

Your email address will not be published.