Ultimate magazine theme for WordPress.

ರೋಗಗಳಿಂದ ದೂರ ಮಾಡುವ ಆಯುವೇದಿಕ್ ಚಹಾ, ಮಾಡೋದು ಅತಿ ಸುಲಭ

0 1

ಆಧುನಿಕ ಯುಗದ ಜಂಜಾಟದ ಜೀವನದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಒಂದಲ್ಲ ಒಂದು ರೀತಿಯ ಖಾಯಿಲೆಯಿಂದ ಬಳಲುತ್ತಿರುವುದನ್ನ ನಾವು ಪ್ರತಿಯೊಬ್ಬರ ಮನೆಯಲ್ಲೂ ನೀಡುತ್ತೇವೆ. ನಾವೆಲ್ಲರೂ “bye one get one free” ಈ ಆಫರ್ ಬಗ್ಗೆ ಸಹ ಸಾಕಷ್ಟು ನೋಡಿದ್ದೇವೆ ಕೇಳಿದ್ದೇವೆ ತಿಳಿದುಕೊಂಡಿದ್ದೇವೆ ಕೂಡ. ಈ ರೋಗಗಳು ಕೂಡಾ ಹಾಗೆ ಒಮ್ಮೆ ಒಂದು ರೋಗ ಬಂದರೆ ಅದರ ಹಿಂದೆಯೇ ಇನ್ನೊಂದು ರೋಗ ಅದರ ಜೊತಜೊತೆಗೇ ಮತ್ತೊಂದು ರೋಗ. ಇವು ಕೇವಲ bye one get one free ಆಫರ್ ಅಲ್ಲ “bye one get so many” ಅಂತ ಒಂದರ ಹಿಂದೆ ಒಂದರಂತೆ ಕೆಮ್ಮು, ಜ್ವರ, ತಲೆನೋವು, ಮಂಡಿನೋವು ಹೀಗೆ ಹತ್ತು ಹಲವಾರು ಖಾಯಿಲೆಗಳು ಬರುತ್ತಾನೆ ಇರತ್ತೆ. ಈ ಖಾಯಿಲೆಗಳು ಮನುಷ್ಯರಿಗೆ ಬರದೆ ಇನ್ನೇನು ಮರಕ್ಕೆ ಬರುತ್ತಾ? ಅನ್ನೋ ಹಾಗೆ ನಮಗೆ ಯಾವುದೇ ಕಾಯಿಲೆಗಳಿಗೂ ಬರವಿಲ್ಲ.

ಯಾತಕ್ಕಾಗಿ ನಮಗೆ ಇಷ್ಟೆಲ್ಲಾ ಖಾಯಿಲೆಗಳು ಬರುತ್ತೆ ಅದಕ್ಕೆ ಕಾರಣ ಏನು? ಅಂತ ನೋಡೋಕೆ ಹೋದ್ರೆ ನಮ್ಮ ದೇಹದಲ್ಲಿ ಕಡಿಮೆ ಇರುವ ರೋಗ ನಿರೋಧಕ ಶಕ್ತಿ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರೋದರಿಂದ ನಮಗೆ ಏನಾದರೂ ಖಾಯಿಲೆ ಬಂದರೆ ಅದರ ವಿರುದ್ಧ ಹೋರಾಡುವ ಶಕ್ತಿ ಇರಲ್ಲ ನಿಶ್ಯಕ್ತಿ ಉಂಟಾಗುತ್ತದೆ. ಹೀಗಿದ್ದಾಗ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದು ಹೇಗೆ ಅಂತ ತಿಲಿಸಿಕೊಡ್ತೀವಿ ಅದೂ ಮನೆಯಲ್ಲಿ ಸಿಗುವ ಸಾಮಗ್ರಿಗಳಿಂದ ಅತಿ ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ. ಈಗಿನ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಎಲ್ಲರಿಗೂ ಅತ್ಯಾವಶ್ಯಕ. ನಾವು ತಿಳಿಸುವ ಈ ಮನೆ ಮದ್ದನ್ನ ಒಮ್ಮೆ ಮಾಡಿ ನೋಡಿ.

ಇಂದು ನಾವು ನಿಮಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಿಳಿಸುತ್ತಿರುವ ಮನೆ ಮದ್ದು ಒಂದು ರೀತಿಯ ಚಹಾ ಇದನ್ನ ಮಾಡೋದು ಹೇಗೆ ಏನೆಲ್ಲಾ ಬೇಕು ಅಂತ ನೋಡೋಣ.

ಒಂದು ಇಂಚಿನಷ್ಟು ಹಸಿ ಶುಂಠಿ, ಕಾಲು ಚಮಚ ಕಾಳು ಮೆಣಸಿನ ಪುಡಿ, ಕಾಲು ಚಮಚ ಅರಿಶಿಣ, ಕಾಲು ಭಾಗ ನಿಂಬೆ ಹಣ್ಣು, ಜೇನು ತುಪ್ಪ ಹಾಗೂ ಎರಡು ಕಪ್ ನೀರು. ಇವಿಷ್ಟು ಈ ಚಹಾ ಅಥವಾ ಕಷಾಯಕ್ಕೆ ಬೇಕಾದ ಸಾಮಗ್ರಿಗಳು. ಇದು ಮಾಡೋದು ಹೇಗೆ?

ಮೊದಲು ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನೀರು ಕುಡಿಯಲು ಪ್ರಾರಂಭಿಸಿದ ಮೇಲೆ ಅದಕ್ಕೆ ಚಿಕ್ಕದಾಗಿ ಕಟ್ ಮಾಡಿದ ಶುಂಠಿ, ಕಾಳು ಮೆಣಸಿನ ಪುಡಿ, ಅರಿಶಿಣ ಇವಿಷ್ಟನ್ನು ಹಾಕಿ ಎರಡು ಕಪ್ ನೀರು ಒಂದು ಕಪ್ ಆಗುವವರೆಗೂ ಕುದಿಸಬೇಕು. ನಂತರ ಸ್ವಲ್ಪ ತಣ್ಣಗಾದ ಮೇಲೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಗೂ ಒಂದು ಚಮಚ ಜೇನು ತುಪ್ಪ ಹಾಕಬೇಕು. (ಜೇನು ತುಪ್ಪವನ್ನು ತುಂಬಾ ಬಿಸಿ ಇರುವಾಗ ಹಾಕಬಾರದು) ತುಂಬಾ ತಣ್ಣಗಾದ ಮೇಲೆ ಕುಡಿಯಬಾರದು ಸ್ವಲ್ಪ ಬಿಸಿ ಇದ್ದಾಗಲೇ ಕುಡಿಯಬೇಕು.

ಇಷ್ಟು ಮಾಡಿ ಕುಡಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಲ್ಲಿ ನಾವು ಕಾಳು ಮೆಣಸಿನ ಪುಡಿ, ಶುಂಠಿ ಹಾಕಿರುವುದರಿಂದ ಇವೆಲ್ಲ ನಮ್ಮ ದೇಹದಲ್ಲಿ ಶೀತ ಕೆಮ್ಮು ಇದ್ದರೆ ಅದನ್ನ ಓಡಿಸತ್ತೆ. ಮತ್ತೆ ಅರಿಶಿನದ ಪುಡಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಒಂದು ನೈಸರ್ಗಿಕ ವಿಧಾನ. ಪ್ರತಿದಿನ ಮಾಡಿ ನೋಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

Leave A Reply

Your email address will not be published.