ಮನುಷ್ಯನಿಗೆ ಬುದ್ದಿ ಶಕ್ತಿ ಅನ್ನೋದು ಹೆಚ್ಚಿನ ಪ್ರಾಮುಖ್ಯತೆವಹಿಸುತ್ತದೆ, ಹಾಗಾಗಿ ಕೆಲವರಿಗೆ ಮರೆವು ಸಮಸ್ಯೆ ಇದ್ರೆ ಇನ್ನು ಕೆಲವರಿಗೆ ಜ್ಞಾಪಕಶಕ್ತಿ ವೃದ್ಧಿಸಿಕೊಳ್ಳಬೇಕು ಅನ್ನೋ ಅಸೆ ಇದ್ದೆ ಇರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿ ಇವುಗಳನ್ನು ಬಳಸಿ ಉತ್ತಮವಾದ ಆಹಾರವನ್ನು ಸೇವಿಸುವುದರಿಂದ ದೇಹದ ಅರೋಗ್ಯ ವೃದ್ಧಿಯಾಗುತ್ತದೆ.

ಬ್ರಾಹ್ಮೀ ತಂಬುಳಿ ಎಂಬುದಾಗಿ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತವಾಗಿರುತ್ತದೆ, ಆಗಾಗಿ ಈ ತಂಬುಳಿ ನೆನಪಿನ ಶಕ್ತಿಯನ್ನು ಹೆಚ್ಚಿಸುವಂತ ಗುಣಗಳನ್ನು ಹೊಂದಿದೆ, ಇದನ್ನು ಮಕ್ಕಳ ಜ್ಞಾಪಕಶಕ್ತಿ ವೃದ್ಧಿಗೆ ಕೂಡ ಬಳಸಲಾಗುತ್ತದೆ. ಅಷ್ಟಕ್ಕೂ ಈ ತಂಬುಳಿಯನ್ನು ಹೇಗೆ ಮಾಡಬಹುದು ಅನ್ನೋದನ್ನ ನೋಡುವುದಾದರೆ, ತೆಂಗಿನಕಾಯಿ ತೂರಿ ಹಾಗೂ ಬ್ರಾಹ್ಮೀ ಎಲೆ ಮೊಸರು ಉಪ್ಪು ಒಗ್ಗರಣೆಗೆ ಅಡುಗೆ ಎಣ್ಣೆ ಇವುಗಳನ್ನು ಬಳಸಬೇಕಾಗುತ್ತದೆ.

ತಂಬುಳಿ ತಯಾರಿಸುವ ವಿಧಾನ: ಮೊದಲನೆಯದಾಗಿ ತೆಂಗಿನ ಕಾಯಿ ತುರಿಯನ್ನು ಹಾಗು ಬ್ರಾಹ್ಮೀ ಎಲೆಯನ್ನು ರುಬ್ಬಿ ನಂತರ ಅದಕ್ಕೆ ಮೊಸರು ಹಾಗು ರುಚಿಗೆ ತಕ್ಕಸ್ಟು ಉಪ್ಪು ಬೆರಸಿ, ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಮೊಸರಿನ ಮಿಶ್ರಣಕ್ಕೆ ಹಾಕಿಕೊಳ್ಳಬೇಕು ಆ ನಂತರ ಮಜ್ಜಿಗೆ ಮೆಣಸನ್ನು ಕರೆದು ಅದಕ್ಕೆ ಸೇರಿಸಿದರೆ ನೀವು ಬಯಸುವ ಬ್ರಾಹ್ಮೀ ತಂಬುಳಿ ಸೇವಿಸಲು ಸಿದ್ಧವಿರುತ್ತದೆ. ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!