ಕೋರೋನ ಶುರು ಆದಾಗಿನಿಂದ ಎಲ್ಲು ಎಂದು ಇಲ್ಲದ ಸ್ವಚತೆ ಈಗ ಒಂದು ತಿಂಗಳಿಂದ ಬಹಳಷ್ಟು ಸ್ವಚ್ಛತೆ ಬಗ್ಗೆ ಪ್ರಾಮುಖ್ಯ ಕೊಡಲಾಗುತ್ತಿದೆ. ಮೊದಲಿಗಿಂತಲೂ ಈಗ ಈ ಒಂದು ತಿಂಗಳಲ್ಲಿ ದೇಶವೂ ಕೂಡಾ ಬಹಳಷ್ಟು ಮಟ್ಟಿಗೆ ಸ್ವಚ್ಛವಾಗಿ ಇದೆ. ಜನ ಈಗ ಎಷ್ಟರ ಮಟ್ಟಿಗೆ ಸ್ವಚ್ಛವಾಗಿ ಇರಲು ಕಲಿತಿದ್ದಾರೆ ಎಂದರೆ, ಏನೇ ಒಂದು ವಸ್ತುವನ್ನು ಮುಟ್ಟಿದರು ಅಥವಾ ಮುಟ್ಟುವುದಕ್ಕು ಮೊದಲು ಸ್ವಚ್ಛವಾಗಿ ಕೈ ತೊಳೆಯಬೇಕು ಹಾಗೆ ಆಗಿದೆ. ಸ್ವಚ್ಛತೆ ಹೆಚ್ಚಾದಂತೆ ಸೇನಿಟೈಸರ್ ಇವುಗಳ ಪೂರೈಕೆ ಸಹ ಹೆಚ್ಚು ಆಗ್ತಾ ಇದೆ ಆದ್ರೆ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಪೂರೈಕೆ ಮಾಡುವಷ್ಟು ಹ್ಯಾಂಡ್ ವಾಶ್ ಗಳು ಸೇನಿಟೈಸರ್ ಗಳು ಲಭ್ಯ ಇಲ್ಲ. ಅಥವಾ ಬೆಳೆಗಳು ಕೂಡ ಹೆಚ್ಚು ಆಗಿರಬಹುದು. ಅದೂ ಅಲ್ಲದೆ ಕೆಲವರ ದೇಹ ಪ್ರಕೃತಿಗೆ ಇವುಗಳಲ್ಲಿ ಇರುವ ಕೆಮಿಕಲ್ ಗಳು ಆಗದೆ ಸಹ ಇರಬಹುದು.

ಪ್ರತಿ ಸಲ ಕೈ ತೊಳೆಯುವಾಗ ಈ ಸೇನಿಟೈಸರ್ ಗಳ ಬಳಕೆ ಮಾಡಿದಾಗಲೂ ಒಬ್ಬರಿಗೆ ಕೈ ಒಣಗಿದಂತೆ ಅನುಭವ ಆಗಬಹುದು ಇನ್ನೊಬ್ಬರಿಗೆ ಚರ್ಮಗಳು ಸುಲಿಯಬಹುದು. ಹಾಗಾದ್ರೆ ಇಷ್ಟೆಲ್ಲಾ ಅನುಭವಿಸದೆ ನಾವು ನಮ್ಮ ಕೈಗಳನ್ನ ಸ್ವಚ್ಛವಾಗಿ ಇಟ್ಟುಕೊಳ್ಳೇಕು ಅದೂ ಹೇಗೆ? ಅದನ್ನ ನಾವು ತಿಳಿಸಿಕೊಡ್ತೀವಿ. ಈಗ ನಾವು ಕೇವಲ ಕಡಿಮೆ ವಸ್ತುಗಳನ್ನ ಬಳಸಿ ಮನೆಯಲ್ಲಿಯೇ ಹೇಗೆ ಸುಲಭವಾಗಿ ಸೇನಿಟೈಸರ್ ತಯಾರಿಸೋದು ಅಂತ ತಿಳಿಸಿಕೊಡ್ತೀವಿ. ಈ ಸೇನಿಟೈಸರ್ ಮಾಡೋದು ತುಂಬಾ ಸುಲಭ ಇದರಿಂದ ಬೇರೆ ಯಾವುದೇ ಅಡ್ಡ ಪರಿಣಾಮ ಇರಲ್ಲ. ಇದನ್ನ ಮಾಡೋಕೆ ಬೇಕಾಗಿರೋದು ಎರಡು ಮುಷ್ಟಿ ಕಹಿ ಬೇವಿನ ಸೊಪ್ಪು/ಎಲೆ, ಇಂದು ಮುಷ್ಟಿ ಅಷ್ಟು ತುಳಸಿ ಎಲೆ, ಅರಿಶಿಣ ಕಾಳು ಮೆಣಸು.

ಒಂದು ಪಾತ್ರೆಗೆ ಮುಕ್ಕಾಲು ಭಾಗ ನೀರನ್ನು ಹಾಕಿ ಅದಕ್ಕೆ 5/6 ಕಾಳು ಮೆಣಸು ಮತ್ತು ಒಂದು ಸ್ಪೂನ್ ಅಷ್ಟು ಅರಿಶಿಣ ಹಾಕಿ ನಂತರ ಎರಡು ಮುಷ್ಟಿ ಕಹಿಬೇವಿನ ಸೊಪ್ಪು ಮತ್ತು ಒಂದು ಮುಷ್ಟಿ ತುಳಸಿ ಎಲೆ ಇವನ್ನು ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಅರ್ಧ ಭಾಗದಷ್ಟು ನೀರನ್ನ ಕುದಿಸಬೇಕು. ನಂತರ ಅದನ್ನು ಸೋಸಿಕೊಳ್ಳಬೇಕು .

ನಂತರ ಇದಕ್ಕೆ ಆಲಂ/ ಸ್ಫಟಿಕ ಅಥವಾ ಫಟಿಕ ಇದನ್ನ ಒಂದರಿಂದ ಒಂದೂವರೆ ಚಮಚದಷ್ಟು ಕುಟ್ಟಿ ಪುಡಿ ಮಾಡಿ ಮೊದಲೇ ತಯಾರಿಸಿಕೊಂಡ ನೀರಿಗೆ ಸೇರಿಸಬೇಕು. ಇದು ಸಿಗದೆ ಇದ್ದರೆ ತಿಂದರೆ ಏನು ಇಲ್ಲ ಸ್ಕಿಪ್ ಮಾಡಿ. ನಂತರ ಇದಕ್ಕೆ 2 ಸ್ಪೂನ್ ಅಲೋವೆರಾ ಜೆಲ್, 2 ಸ್ಪೂನ್ ಡೆಟಾಲ್, 2ಸ್ಪೂನ್ ಗ್ಲಿಸರಿನ್ ( ಗ್ಲಿಸರಿನ್ ಬಳಕೆಯಿಂದ ಕೈ ಒಣಗುವುದನ್ನ ತಡೆಯುತ್ತದೆ.) ನಂತರ ಒಂದೆರಡು ಹನಿ ಎಸ್ಸೆನಶಿಯಲ್ ಆಯಿಲ್(ಇದ್ದರೆ) ಪರಿಮಳಕ್ಕಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಎರಡು ಸ್ಪೂನ್ ಬೇಬಿ ಶಾಂಪೂ ಅಥವಾ ಫೇಸ್ ವಾಶ್ ಹಾಕಿ ಮಿಕ್ಸ್ ಮಾಡಿ ಇದನ್ನ ಯಾವುದೇ ಬಾಟಲ್ ಗಳಲ್ಲಿ ತುಂಬಿಸಿ ಇಟ್ಟುಕೊಳ್ಳಬಹುದು. ಇದನ್ನು ಹದಿನೈದರಿಂದ ಇಪ್ಪತ್ತು ದಿನದವರೆಗೆ ಬಳಸಬಹುದು. ಇದನ್ನ ಬಳಸಿ ಕೈಗಳನ್ನ ತೊಳೆಯುವುದರಿಂದ ಕೈಗಳಿಗೂ ಸಹ ಯಾವುದೇ ಅದ್ದ ಪರಿಣಾಮ ಇರಲ್ಲ

ಇದರಲ್ಲಿ ಬೇವಿನ ಎಲೆ ತುಳಸಿ ಎಲೆ ಅರಿಶಿಣ ಎಲ್ಲ ಇರುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳೂ ಇರಲ್ಲ ಮತ್ತೆ ಈ ಮೂರು ವಸ್ತುಗಳು ನಮ್ಮ ಚರ್ಮಕ್ಕೂ ಒಳ್ಳೆಯದು. ಮನೆಯಲ್ಲಿ ಒಮ್ಮೆ ಮಾಡಿ ನೋಡಿ. ಆದಷ್ಟು ನಮ್ಮನ್ನ ಹಾಗೂ ನಮ್ಮ ಸುತ್ತ ಮುತ್ತಲು ಇರುವವರನ್ನು ಸ್ವಚವಾಗಿ ಇರುವಂತೆ ಮಾಡಿ ಕರೋನ ದಿಂದ ಆದಷ್ಟು ಬೇಗ ಮುಕ್ತರಾಗೋಣ

Leave a Reply

Your email address will not be published. Required fields are marked *

error: Content is protected !!