ಎಲ್ಲರಿಗೂ ಕಾಳುಗಳ ಬಗ್ಗೆ ತಿಳಿದಿದೆ. ಪ್ರತಿಯೊಂದು ಕಾಳುಗಳು ಅದರದ್ದೇ ಆದ ವಿಶೇಷವಾದ ಪೌಷ್ಟಿಕತೆಯನ್ನು ಮನುಷ್ಯನಿಗೆ ನೀಡುತ್ತವೆ. ಹಾಗೆಯೇ ಮೊಳಕೆಕಾಳು ತಿನ್ನಲು ರುಚಿಯಾಗಿರುತ್ತದೆ. ಅಷ್ಟೇ ಮನುಷ್ಯನ ಆರೋಗ್ಯ ವೃದ್ಧಿಸುತ್ತದೆ. ಕಾಳುಗಳು ಒಂದೋ ಎರಡೋ ಅಲ್ಲ. ಅದರಲ್ಲಿ ಬಹಳ ವಿಧಗಳಿವೆ. ನವಣೆ, ರಾಗಿ, ವಟಾಣಿ ಹೀಗೆ ಹಲವಾರು ಇವೆ. ಅದರಲ್ಲಿ ಹುರುಳಿಯೂ ಒಂದು. ಈಗ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹುರುಳಿ ಕಾಳಿಗೆ ಆಂಗ್ಲ ಭಾಷೆಯಲ್ಲಿ ಹೋರ್ಸ್ ಗ್ರಾಮ್ ಎನ್ನುತ್ತಾರೆ. ಕುದುರೆಗೆ ಯಥೇಚ್ಛವಾಗಿ ತಿನ್ನಲು ಇದನ್ನು ನೀಡಲಾಗುತ್ತದೆ. ಆದ್ದರಿಂದ “ಹೋರ್ಸ್ ಗ್ರಾಮ್” ಎಂದು ಹುರುಳಿಕಾಳನ್ನು ಕರೆಯುತ್ತಾರೆ. ಕುದುರೆ ಯಾವಾಗಲೂ ಕುಳಿತುಕೊಳ್ಳುವಿದಿಲ್ಲ. ಕುಳಿತುಕೊಳ್ಳುವುದು ಬಹಳ ಕಡಿಮೆ. ಅದಕ್ಕೆ ಆ ಶಕ್ತಿಯು ಸಿಗುವುದು ಹುರುಳಿಕಾಳಿನಿಂದ. ಹಳೆಯ ಕಾಲದಲ್ಲಿ ಈ ಕಾಳನ್ನು ದನಗಳು ತಿನ್ನುತ್ತಿದ್ದವು. ಮನುಷ್ಯರು ತಿನ್ನುತ್ತಿರಲ್ಲಿಲ್ಲ. ಮನೆಯಲ್ಲಿ ಸಾಕುಪ್ರಾಣಿಗಳಿ ಗೆ ಕೊಡುತ್ತಿದ್ದರು.

ಹುರುಳಿಕಾಳನ್ನು ನಾವು ಯಥೇಚ್ಛವಾಗಿ ಬಳಕೆ ಮಾಡುವುದರಿಂದ ನವಚೈತನ್ಯ, ಹುಮ್ಮಸ್ಸು, ಉತ್ಸಾಹ ಹೆಚ್ಚುತ್ತದೆ. ಹಾಗೆಯೇ ನಡೆಯಲು ಶಕ್ತಿಯನ್ನು ನೀಡುತ್ತದೆ. ಕುದುರೆಯ ತರ ಶಕ್ತಿಯನ್ನು ಹೊಂದಬಹುದು. ದೇಹದಲ್ಲಿ ಕಾರಂಜಿಯ ತರ ಚಿಮ್ಮುವ ಶಕ್ತಿಯನ್ನು ನೀಡುತ್ತದೆ.

ಇದು ದೇಹಕ್ಕೆ ಉಷ್ಣವನ್ನು ನೀಡುವ ಕಾಳು. ಇದನ್ನು ಶೀತ ಪ್ರಕೃತಿಯ ದೇಹವಳ್ಳವರು ಬಳಸಿದರೆ ತುಂಬಾ ಒಳ್ಳೆಯದು. ಶೀತ ಪ್ರಕೃತಿ ಅಂದರೆ ಕಫ ಉಳ್ಳವರು. ಪದೇ ಪದೇ ಖಫ, ಶೀತ, ನೆಗಡಿ, ಶುಗರ್, ಬಿಪಿ ಉಳ್ಳವರು ಹುರುಳಿಕಾಳನ್ನು ಬಳಕೆ ಮಾಡುವುದರಿಂದ ತುಂಬಾ ಒಳ್ಳೆಯದು.

ಮಳೆಗಾಲದಲ್ಲಿ ಹುರುಳಿಕಾಳನ್ನು ಹುರಿದು ಜೇಬಿನಲ್ಲಿ ಇಟ್ಟುಕೊಂಡು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಸಮಯ ಕಳೆದದ್ದೂ ತಿಳಿಯುವುದಿಲ್ಲ. ಮಳೆಯಲ್ಲಿ ನೆನೆದು ಮೈ ಬಿಸಿಮಾಡಿಕೊಳ್ಳಲು ಚಳಿ ತೊಲಗಿಸಿಕೊಳ್ಳಲು ಕೆಲವರು ಬೀಡಿ ಹಾಗೂ ಸಿಗರೇಟು ಸೇದುತ್ತಾರೆ. ಇನ್ನು ಕೆಲವರು ಟೀ ಅಥವಾ ಕಾಫಿಯನ್ನು ಮಾಡಿಕೊಂಡು ಕುಡಿಯುತ್ತಾರೆ. ಅದರ ಬದಲು ಹುರುಳಿಕಾಳನ್ನು ಹುರಿದು ಸ್ವಲ್ಪ ಉಪ್ಪು ಖಾರ ಹಾಕಿ ತಿನ್ನುಬಹುದು. ಕಫ ಶಮನ ಆಗುತ್ತದೆ. ಶೀತ, ಕೆಮ್ಮು ಆಗುವುದಿಲ್ಲ. ಇದರಲ್ಲಿ ಕ್ಯಾಲ್ಸಿಯಂ, ಮಿನರಲ್ಸ್, ಖನಿಜ ಪದಾರ್ಥಗಳು ಇರುತ್ತವೆ. ದೇಹವನ್ನು ಸಶಕ್ತರಾಗಿ ಇಡುವ ಶಕ್ತಿ ಹುರುಳಿಕಾಳಿಗಿದೆ.

ಇದನ್ನು ಯಾವುದೇ ರೀತಿಯಲ್ಲೂ ಬಳಕೆ ಮಾಡಬಹುದು. ಪದಾರ್ಥಗಳನ್ನು ಮಾಡಿ ತಿನ್ನಬಹುದು. ಸಾರು, ಪಲ್ಯ, ಕುಸುಂಬ್ರಿ ಹೇಗಾದರೂ ಸೇವಿಸಬಹುದು. ಮೊಳಕೆ ತರಿಸಿ ತಿಂದರೆ ಮತ್ತು ಒಳ್ಳೆಯದು.

ಹಾಗೆಯೇ ಹುರುಳಿಕಾಳನ್ನು ಹುರಿದು ಒಣಗಿಸಿ ಪುಡಿಮಾಡಿ ಅದಕ್ಕೆ ಬೆಲ್ಲ ಹಾಕಿ ಉಂಡೆ ಮಾಡಿ ತಿನ್ನಬಹುದು. ಮಕ್ಕಳಿಗೆ ಇದನ್ನು ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ. ಇದರ ಜೊತೆ ಮಕ್ಕಳ ಕಫ ಕಡಿಮೆಯಾಗುತ್ತದೆ. ಇದನ್ನು ವೃದ್ಧರಿಗೆ ನೀಡುವುದರಿಂದ ಕಾಲು ನೋವು ನಿವಾರಣೆ ಆಗುತ್ತದೆ.ಆದ್ದರಿಂದ ದಿನ ನಿತ್ಯ ಯಾವುದೇ ರೂಪದಲ್ಲಿ ಸೇವಿಸುವುದರಿಂದ ನೂರು ಕಾಲ ಆರೋಗ್ಯವಂತರಾಗಿ ಕುದುರೆಯ ಶಕ್ತಿಯನ್ನು ಹೊಂದಿ ಬದುಕಬಹುದು.

By

Leave a Reply

Your email address will not be published. Required fields are marked *