ಈಗಾಗಲೇ ಜಗತ್ತಿನಲ್ಲಿ “ಕೋರೋನ” ಎಂಬ ಮಹಾ ಮಾರಿ ಆರ್ಭಟಿಸುತ್ತ ಇರುವುದು ಎಲ್ಲರಿಗೂ ತಿಳಿದೇ ಇದೆ. ಎಲ್ಲರೂ ಈಗ ಎಲ್ಲ ಕೆಲಸವನ್ನೂ ಬಿಟ್ಟು ಮನೆಯಲ್ಲಿಯೇ ಕುಳಿತಿರುವ ಪರಿಸ್ಥಿತಿ. ಕೆಲವರ ಮಾತಿನ ಪ್ರಕಾರ ಕೋರೋನ ವೈರಾಣುವಿನ ಬಗ್ಗೆ ಮೊದಲೇ ನಮ್ಮ ಪೂರ್ವಜರು ಈ ಸಮಯದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸುತ್ತವೆ ಎಂದು ಉಲ್ಲೇಖಿಸಿದ್ದರಂತೆ. ಇದರಂತೆಯೇ ಇದಕ್ಕೆ ಸಾಕ್ಷಿಯಾಗಿ ಈಗ ನಡೆಯುತ್ತಿರುವ ಸಾವುಗಳು ಕಣ್ಣಿಗೆ ಕಾಣುತ್ತಲೇ ಇದೆ. ಆದರೆ ಒಂದು ಗಮನದಲ್ಲಿ ಇಡಬೇಕಾದ ವಿಷಯ ಏನು ಅಂದರೆ, ಮುಟ್ಟಿದ್ದೆಲ್ಲಾ ಚಿನ್ನ ಆಗೋಕೆ ಸಾಧ್ಯ ಇಲ್ಲ ಅನ್ನೋ ಹಾಗೆ ಈಗ ನಮ್ಮ ದೇಶದಲ್ಲಿ ಆಗಿರೋ ಸಾವು ಎಲ್ಲವೂ ಕೂಡ ಈ ಕೊರೋನ ಇಂದಲೇ ಎಂಬುದು ಕೂಡಾ ಅಲ್ಲ. ಕೊರೋನ ಇಂದ ಎಲ್ಲೋ ಕೇವಲ ಬೆರಳೆಣಿಕೆಯಷ್ಟು ಜನ ಸಾವನ್ನಪ್ಪಿರಬಹುದು ಇನ್ನೂ ಕೆಲವು ಜನ ಅವರವ ವಯಕ್ತಿಕ ಅನಾರೋಗ್ಯದಿಂದಾಗಿ ಅಥವಾ ವಯಸ್ಸಾದ ಕಾರಣಗಳಿಂದಲೂ ಮರಣ ಹೊಂದಿರಬಹುದು.

ಬಿಸಿಲಿನ ಝಳಕ್ಕೆ ಈ ಕೊರೋನ ವೈರಾಣು ಸಾಯತ್ತಾ? ಬಿಸಿಲಿನಲ್ಲಿ ಎಷ್ಟು ಸಮಯ ಇದಕ್ಕೆ ಜೀವ ಇರತ್ತೆ ಇದರ ಬಗ್ಗೆ ವೈದ್ಯಕೀಯ ಸಂಶೋಧನೆಗಳು ಏನು ಹೇಳುತ್ತೆ ಅನ್ನೋದನ್ನ ನೋಡೋಣ.

56ಸಾವಿರ ಜನರ ಪರಾಮರ್ಶೆ ಬಳಿಕ ಈ ಕೊರೋನ ಸೋಂಕಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದಿದೆ. ಚೀನಾದ ಕೊರೋನ ಪೀಡಿತ ರೋಗಿಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಅದರಿಂದ ಹೆಚ್ಚು ಮಾಹಿತಿಯನ್ನು ಕಲೆಹಾಕಲಾಗಿದೆ. ತೀವ್ರ ಅಥವಾ ಗಂಭೀರ ರೋಗಿಗಳನ್ನು ನೋಡಿಕೊಳ್ಳಲು ಮೂಲ ಸೌಕರ್ಯಗಳು ಕಡಿಮೆ ಇರುವ ಭಾರತದಂಥ ರಾಷ್ಟ್ರಗಳಲ್ಲಿ ಕೋವಿಡ್ 19 ಈ ವೈರಾಣು ಹರಡದಂತೆ ತಡೆಯುವುದು ಮುಖ್ಯವಾಗಿದೆ. ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೊರೋನ ವೈರಾಣು ಹೇಗೆ ಹರಡುತ್ತದೆ ಯಾರಿಂದ ಹರಡುತ್ತದೆ ಎಂಬ ಯಾವುದೇ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದರೆ ಈಗ ಚೀನಾದಲ್ಲಿ ಐವತ್ತಾರು ಸಾವಿರ ಸೋಂಕಿತ ವ್ಯಕ್ತಿಗಳನ್ನು ಪರಾಮರ್ಶಿಸಿದಾಗ
ಒಂದಿಷ್ಟು ಸತ್ಯಾಂಶಗಳು ದೊರಕಿವೆ.

ಚೀನಾದಲ್ಲಿ ಈ ಕೊರೋನ ಪ್ರಕರಣಗಳು ಹೆಚ್ಚು ಕಂಡಾಗ ಕಡಿಮೆಯಿಂದ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಉದಾಹರಣೆಗೆ, ಜ್ವರ, ಒಣಕೆಮ್ಮು ಆಯಾಸ. ಈ ಸೋಂಕು ಶ್ವಾಸೆಯಿಂದ್ರಿಯಕ್ಕೆ ಮಾತ್ರ ಸಂಬಂಧಿಸಿದ್ದರೆ ಅಂದರೆ ಮೂಗು ಮತ್ತು ಗಂಟಲಿಗೆ ಮಾತ್ರ ಅಂಟಿಕೊಂಡಿದ್ದರೆ ಇದರ ಲಕ್ಷಣಗಳನ್ನು ಕಾಣಬಹುದು. ಆದರೆ ಈ ಸೋಂಕು ಶ್ವಾಸ ಕೋಶದಿಂದ ಕೆಳಗೆ ಹೋದರೆ ಆಗ ಅದು ಅಪಾಯದ ಮಟ್ಟಕ್ಕೆ ಏರಿದೆ ಅಂದು ಅರ್ಥ ಎಂಬ ವಿಷಯವನ್ನು ವೈದ್ಯರು ತಿಳಿದುಕೊಂಡಿದ್ದಾರೆ.

ಮಾನವನ ಕೆಳ ಭಾಗ ಶ್ವಾಸೆಂದ್ರಿಯ, ಶ್ವಾಸಕೋಶ, ಶ್ವಾಸನಾಳ ಮತ್ತು ಆಮ್ಲಜನಕವನ್ನು ವಿನಿಮಯ ಮಾಡುವ ಸಾಧನಗಳನ್ನು ಒಳಗೊಂಡಿರುತ್ತದೆ. ಈ ಇಡೀ ವ್ಯವಸ್ಥೆಯು ಮೇಲ್ಭಾಗದ ಶ್ವಾಸೆಂದ್ರಿಯದಿಂದ ಶ್ವಾಸವನ್ನು ತೆಗೆದುಕೊಂಡು ರಕ್ತದಲ್ಲಿ ಆಮ್ಲಜನಕ ಸೇರುವುಂತೆ ಮಾಡುತ್ತದೆ ಮತ್ತು ಇಂಗಾಲದ ಡೈ ಆಕ್ಸೈಡನ್ನು ಹೊರ ಹಾಕುತ್ತವೆ.

ಕೋವಿಡ್ 19 ಪ್ರಕರಣವನ್ನು ಕೂಲಂಕುಷವಾಗಿ ವಿಮರ್ಶಿಸಿದಾಗ ಒಟ್ಟೂ ಗಂಭೀರ ಮತ್ತು ಮಾರಣಾಂತಿಕ ಪ್ರಕರಣಗಳು ಶೇಕಡಾ 16 ರಷ್ಟು ಕಂಡು ಬಂದಿದೆ. ವೈರಾಣುವಿನಿಂದ ಉಂಟಾದ ಸೋಂಕಿನಿಂದ ಶ್ವಾಸಕೋಶಗಳು ಹಾನಿಗೆ ಒಳಗಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ಈ ಹಂತದಲ್ಲಿ ರೋಗಿಯು ಜೋರಾಗಿ ಉಸಿರಾಡಲು ಆರಂಭಿಸುತ್ತಾನೆ ಅದು ನಿಮಿಷಕ್ಕೆ 30ಬಾರಿಗೂ ಹೆಚ್ಚು. ಇದರಿಂದಾಗಿ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ.

ಒಂದುವೇಳೆ ಸೋಂಕು ಶ್ವಾಸ ಕೋಶದ ಅರ್ಧ ಭಾಗಕ್ಕೂ ಹೆಚ್ಚು ಆವರಿಸಿದ್ದರೆ, ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆಯ ಸಾಮರ್ಥ್ಯ ಕುಸಿಯುತ್ತದೆ. ಕ್ರಮೇಣ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಆಗತ್ತೆ. ಆಮ್ಲಜನಕದ ಕೊರತೆಯೂ ನಿಧಾನವಾಗಿ ಮೆದುಳು, ಹೃದಯ ಮತ್ತು ದೇಹದ ಇತರೆ ಭಾಗಗಳಿಗೂ ಪೂರೈಕೆ ಆಗುವುದು ಕಡಿಮೆ ಆಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಚೀನಾ ಜಂಟಿ ಸಭೆಯ ಪ್ರಕಾರ, ಒಟ್ಟೂ ಪ್ರಕರಣಗಳ ಪೈಕಿ ಶೇಕಡಾ 13.8 ರಷ್ಟು ತೀವ್ರವಾದ ಸೋಂಕು ತಗುಲಿದ ಮತ್ತು ಶೇಕಡಾ 6.1ರಷ್ಟು ಗಂಭೀರ ಪ್ರಕರಣಗಳು ಕಂಡುಬಂದಿವೆ. ತೀವ್ರವಾಗಿ ಸೋಂಕಿಗೆ ಒಳಪಟ್ಟು ಸತ್ತ ವ್ಯಕ್ತಿಗಳು 60 ವರ್ಷಕ್ಕೂ ಮೇಲ್ಪಟ್ಟು ಸತ್ತ ವ್ಯಕ್ತಿಗಳು ರಕ್ತದ ಒತ್ತಡದಿಂದ, ಶ್ವಾಸಕೋಶದ ಸಮಸ್ಯೆ, ಕ್ಯಾನ್ಸರ್ ನಿಂದ ಸತ್ತವರು ಇದ್ದರೆ ಎಂದು ವರದಿ ಆಗಿದೆ. ಬೇರೆ ಯಾವುದೇ ರೋಗದ ಲಕ್ಷಣ ಇಲ್ಲದೆ ಇರುವವರು ತೀವ್ರ ತರದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಬೇಗ ಗುಣಮುಖರಾಗುತ್ತಾರೆ.

ಈಗ ಬೇಸಿಗೆ ಆಗಿರುವುದರಿಂದ ಕೊರೋನ ವೈರಾಣು ಚೆಚ್ಚಾಗಿ ಸಾರ್ವಜನಿಕವಾಗಿ ಹರಡಲ್ಲ ಅಂತ ಹೇಳ್ತಾರೆ ಆದರೆ ಇದು ಸುಳ್ಳು ಅಂತ ತಜ್ಞರು ಹೇಳುತ್ತಾರೆ. ಕೋವಿಡ್ 19 ಹರಡುವುದಕ್ಕೆ ಮತ್ತು ವಾತಾವರಣದ ಬದಲಾವಣೆಗೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ. ಮಾನವ ಸಂಪರ್ಕದಿಂದ ಮಾತ್ರ ಈ ವೈರಾಣು ಹರಡುತ್ತದೆ. ತಾಪಮಾನ ಹೆಚ್ಚಾದರೆ ವೈರಾಣು ಸಾಯುತ್ತೆ ಎಂದು ನಂಬಬಾರದು ಎಂದು ವೈದ್ಯರು ತಿಳಿಸುತ್ತಾರೆ.

ಬಿಸಿ ವಾತಾವರಣ ಹೊಂದಿರುವ ಸಿಂಗಾಪುರ ಕೂಡಾ ಈ ಕೊರೋನ ಸೋಂಕಿನಿಂದ ಬಳಲುತ್ತಿದೆ. ತಾಪಮಾನದಲ್ಲಿ ಏರಿಕೆ ಇಳಿಕೆಗು ಕೊರೋನ ವೈರಾಣು ಹರಡುವಿಕೆಗು ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಜನರು ತಿಳಿಯಬೇಕು ಎನ್ನುತ್ತೆ ವೈದ್ಯಕೀಯ ಲೋಕ. ಅದೇನೇ ಇರಲಿ ನಮ್ಮ ದೇಶದಲ್ಲಿ ಕೊರೋನ ಸೋಂಕಿನ ವಿರುದ್ಧ ಹೋರಾಡುವುದು ನಮ್ಮೆಲ್ಲರಿಗೂ ಮುಖ್ಯ. ಮಾನ್ಯ ಪ್ರಧಾನ ಮಂತ್ರಿಗಳ ಸೂಚನೆಯಂತೆ ಇನ್ನೂ 14 ದಿನ ಎಲ್ಲರೂ ಮನೆಯಲ್ಲಿಯೇ ಇದ್ದು ನಮ್ಮನ್ನ ನಾವೇ ಕಾಪಾಡಿಕೊಳ್ಳೋಣ. ಮನೆಯಲ್ಲಿ ಇರದೆ ಹೊರಗೆ ಬಂದು ನೀವು ಸೋಂಕು ಹಿಡಿಸಿಕೊಂಡು ಇತರರಿಗೂ ಸೋಂಕು ಹರದಿಸದೆ ನೀವು ಬದುಕಿ ಉಳಿದವರಿಗೂ ಬದುಕಲು ಬಿಡಿ.

By

Leave a Reply

Your email address will not be published. Required fields are marked *