ಅಡುಗೆ ಅನ್ನೋದು ಒಂದು ವಿಶೇಷವಾದ ವಿಶಿಷ್ಟವಾದ ಅದ್ಭುತವಾದ ಕಲೆ. ಅಡುಗೆಯನ್ನು ಯಾರ್ ಬೇಕಿದ್ರು ಮಾಡಬಹುದು ಹಾಗೆ ಅಡುಗೆಯ ರುಚಿ ಕೂಡ ಅಡುಗೆ ಮಾಡುವವರ ಮೇಲೆ ನಿರ್ಧಾರ ಆಗಿರುತ್ತೆ. ಉಪ್ಪು ಖಾರ ಹುಳಿ ಎಲ್ಲವೂ ಸರಿಯಾಗಿ ರುಚಿಯಾಗಿ ಇದ್ದರೆ ಅದು ನಳಪಾಕವೆ ಸರಿ. ಎಲ್ಲರೂ ಕೂಡ ರುಚಿಯಾದ ಅಡುಗೆಯನ್ನು ತಿನ್ನಬೇಕು ಅಂತ ಇಷ್ಟ ಪಡ್ತಾರೆ ಹೋಟೆಲ್ಗಳಲ್ಲಿ ಮಾಡುವ ಅಡುಗೆ ಎಲ್ಲರಿಗೂ ಬಹಳ ಅಚ್ಚು ಮೆಚ್ಚು ಆದರೆ ಆರೋಗ್ಯದ ವಿಷಯದ ಬಗ್ಗೆ ಬಂದಾಗ ಹೋಟೆಲ್ ಗಳಲ್ಲಿ ಮಾಡುವ ಅದುಗೆಗಿಂತ ನಾವು ಮನೆಯಲ್ಲಿಯೇ ಮಾಡಿ ತಿನ್ನುವುದು ಉತ್ತಮ. ಇವತ್ತು ನಾವು ರುಚಿಯಾದ ಎಗ್ ಮಸಾಲ ಕರಿ ಹೇಗೆ ಮಾಡೋದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಅದಕ್ಕೆ ಬೇಕಾಗುವ ಸಾಮಗ್ರಿಗಳು:- ಈರುಳ್ಳಿ ೨, ಲವಂಗ ೩, ಚಕ್ಕೆ ೨, ಏಲಕ್ಕಿ ೩, ಎಣ್ಣೆ 2ಸ್ಪೂನ್, ಮೊಟ್ಟೆ4, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಸ್ಪೂನ್, ಟೊಮೆಟೊ 1 ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಮೆಣಸಿನ ಪುಡಿ 1ಸ್ಪೂನ್, ಧನಿಯಾ ಪುಡಿ 1 ಸ್ಪೂನ್, ಜೀರಿಗೆ ಪುಡಿ ಅರ್ಧ ಸ್ಪೂನ್, ಮೊಸರು ಕಾಲು ಕಪ್ ಗರಂ ಮಸಾಲ ಅರ್ಧ ಸ್ಪೂನ್, ಕಸ್ತೂರಿ ಮೆತಿ ಅರ್ಧ ಸ್ಪೂನ್.

ಮಾಡುವ ವಿಧಾನ:- ಮೊದಲು 2 ಮಧ್ಯಮ ಗಾತ್ರದ ಈರುಳ್ಳಿಯನ್ನು ಹುರಿದುಕೊಂಡು ಮಿಕ್ಸ್ ಜಾರ್ ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಲು ಬಿಡಿ. ಎಣ್ಣೆ ಕಾದ ಮೇಲೆ ಅದಕ್ಕೆ 3ಲವಂಗ, 3ಏಲಕ್ಕಿ, 2ಚಕ್ಕೆ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಅದಕ್ಕೆ ಒಂದು ಸ್ಪೂನ್ ಶುಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಒಂದು ಟೊಮೆಟೊ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2/3 ನಿಮಿಷ ಫ್ರೈ ಮಾಡಿ.

ನಂತರ ಟೊಮೆಟೊ ಬಾಡಿದ ನಂತರ ಅದಕ್ಕೆ 1ಸ್ಪೂನ್/ ಖಾರಕ್ಕೆ ತಕ್ಕಷ್ಟು ಕೆಂಪು ಮೆಣಸಿನ ಪುಡಿ, 1 ಸ್ಪೂನ್ ಧನಿಯಾ ಹಾಗೂ ಅರ್ಧ ಸ್ಪೂನ್ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ನಂತರ ಇದಕ್ಕೆ ಕಾಲು ಕಪ್ ಮೊಸರು ಹಾಕಿ ಗ್ಯಾಸ್ ಆಫ್ ಮಾಡಿ ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಮತ್ತೆ ಗ್ಯಾಸ್ ಆನ್ ಮಾಡಿ ಮತ್ತೆ ಒಂದು ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ಅದಕ್ಕೆ ಈರುಳ್ಳಿ ಪುಡಿಯನ್ನು ಸೇರಿಸಿ 2ನಿಮಿಷ ಮಿಕ್ಸ್ ಮಾಡಿ. ನಂತರ ಅರ್ಧ ಸ್ಪೂನ್ ಗರಂ ಮಸಾಲ ಪುಡಿ ಹಾಗೂ ಕಸೂರಿ ಮೇತಿ ಹಾಕಿ ಸಣ್ಣ ಉರಿಯಲ್ಲಿ 3 ನಿಮಿಷ ಕುದಿಸಿ. ಗಟ್ಟಿ ಆಗಿ ಎಣ್ಣೆ ಬಿಟ್ಟ ನಂತರ ಒಂದು ಕಪ್ ಅಷ್ಟು ನೀರನ್ನು ಹಾಕಿ ಗ್ರೆವಿ ಹದ ನೋಡಿಕೊಳ್ಳಿ 5 ನಿಮಿಷ ಕುದಿಸಿ ಆದ ಬಳಿಕ ಅದಕ್ಕೆ ಬೇಯಿಸಿ ಕಟ್ ಮಾಡಿದ ಮೊಟ್ಟೆಯ ಹಳದಿ ಭಾಗ ಕೆಳಗೆ ಬರುವಂತೆಆಡಿ ಹಾಕಿ ಸ್ವಲ್ಪ ಹೊತ್ತು ಬಿಡಿ ನಂತರ ಮತ್ತೆ ಮೊಟ್ಟೆಯ ಭಾಗವನ್ನು ತಿರುಗಿಸಿ ಹಾಕಿ 3ನಿಮಿಷ ಕುದಿಸಿದರೆ ಎಗ್ ಮಸಾಲ ಕರಿ ರೆಡೀ.

By

Leave a Reply

Your email address will not be published. Required fields are marked *