ಗೊರಕೆಯ ತೊಂದರೆ ಇದು ನಿನ್ನೆ ಮೊನ್ನೆಯದ್ದಲ್ಲ ಅನಾಧಿಕಾಲದಿಂದಲೂ ಇದೆ. ಕುಂಬಖರ್ಣ ನ ಗೊರಕೆಯ ಸಡ್ಡು ಮೈಲುಗಟ್ಟಲೆ ದೂರ ಕೇಳಿಸುತ್ತಿತ್ತು ಎಂದು ರಾಮಾಯಣದಲ್ಲೇ ಉಲ್ಲೇಖವಿದೆ. ಒಬ್ಬರ ಸುಖ ನಿದ್ದೆಗೆ ಕಾರಣ ಆಗುವ ಗೊರಕೆ ಇನ್ನೊಬ್ಬರ ನಿದ್ದೆಯನ್ನು ಕೆಡಿಸಬಹುದು. ಅಷ್ಟೇ ಅಲ್ಲದೇ ಗೊರಕೆಯ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯಲು ಬರುವ ಮಹಿಳೆಯರ ಸಂಖ್ಯೆ ಏನೂ ಕಡಿಮೆ ಇಲ್ಲ. ವೈದ್ಯಕೀಯ ಸಮೀಕ್ಷೆಯ ಪ್ರಕಾರ ಶೇಖಡಾ 50 ರಷ್ಟು ವಯಸ್ಕರು ಗೊರಕೆ ಹೊಡೆಯುತ್ತಾರೆ. ಆದರೆ ಪ್ರಮಾಣ ಹೆಚ್ಚು ಕಡಿಮೆ ಇರತ್ತೆ. ಆದರೆ ಕೆಲವರ ಗೊರಕೆಯ ಪ್ರಮಾಣ ಅಂತೂ ಬಸ್ಸಿನ ಎಂಜಿನ್ ಶಬ್ಧಕ್ಕಿಂತಲೂ ಭೀಕರವಾಗಿದ್ದು, ಇದರಿಂದ ಮತ್ತೊಬ್ಬರಿಗೆ ಕಿರಿ ಕಿರಿ ಉಂಟಾಗತ್ತೆ.

ಸಾಮಾನ್ಯವಾಗಿ ನಮ್ಮ ಮೂಗಿನ ಹಿಂದೆ ಮತ್ತು ಗಂಟಲು ಮೇಲ್ಭಾಗದ ರಚನೆಗಳು ತೆಳುವಾಗಿ ಪಟ್ಟಿಯಂತೆ ಇರತ್ತೆ. ನಾವು ಎಚ್ಚರ ಇದ್ದಷ್ಟು ಹೊತ್ತು ಇವು ಸೆಳತದಲ್ಲಿದ್ದು ವಾಯು ಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತದೆ. ಗೊರಕೆ ಹೊಡೆಯುವುದನ್ನ ನಿಲ್ಲಿಸುವುದೇ ಹೇಗೆ? ನಿದ್ದೆ ಬಂದ ನಂತರ ಈ ರಚನೆಗಳು ನಿಯಂತ್ರಣ ಕಳೆಸುಕೊಂಡು ಸಡಿಲ ಆಗುತ್ತೆ. ಉಸಿರಾಟದ ಗಾಳಿ ಈ ಪಟ್ಟಿಯನ್ನು ಹಾದು ಹೋಗುವಾಗ ಸಡಿಲವಾದ ಈ ಪಟ್ಟಿಯನ್ನು ಕಂಪಿಸುತ್ತವೆ ಇದೆ ಗೊರಕೆ. ಹಾಗಾದರೆ ಈ ಕರ್ಕಶವಾದ ಶಬ್ದವನ್ನು ನಿಯಂತ್ರಿಸುವುದು ಹೇಗೆ ಅಂತ ಆಲೋಚಿಸುತ್ತಾ ಇದ್ದೀರಾ??? ಚಿಂತೆ ಬೇಡ ಇದಕ್ಕೆ ಎಂದೇ ಇಲ್ಲಿ ಕೆಲವೊಂದಿಷ್ಟು ಸಲಹೆಗಳನ್ನು ಸೂಚಿಸುತ್ತೀವಿ ಇದನ್ನ ಪ್ರಯತ್ನಿಸಿ ನೋಡಿ. ತುಂಬಾ ಜನರ ದೊಡ್ಡ ಸಮಸ್ಯೆ ಎಂದರೆ ರಾತ್ರಿ ಮಲಗಿದಾಗ ಗೊರಕೆ ಹೊಡೆಯುವುದು. ಇದರಿಂದ ಪಕ್ಕದಲ್ಲಿ ಮಲಗಿರುವವರಿಗೆ ನಿದ್ರೆ ಇಲ್ಲದಂತೆ ಆಗುತ್ತದೆ. ನಿಮ್ಮ ಗೊರಕೆಯ ಶಬ್ದದಿಂದ ನಿದ್ರೆ ಬರುತ್ತಿಲ್ಲ ಎಂದು ಹೆಂಡತಿ, ಮಕ್ಕಳು ಹಾಗೂ ಸ್ನೇಹಿತರು ಹೇಳುತ್ತಾ ಇರುತ್ತಾರೆ. ಈ ಸಮಸ್ಯೆಯನ್ನ ಸುಲಭವಾಗಿ ಪರಿಹರಿಸುವುದು ಹೇಗೆ?

ಮಾನಸಿಕ ಒತ್ತಡ ಮತ್ತು ವಿಶ್ರಾಂತಿ ಇಲ್ಲದೇ ಇರುವುದು ತಡವಾಗಿ ಆಹಾರ ಸೇವನೆ ಮಾಡುವುದು ಹಾಗೂ ಆಹಾರ ಸೇವಿಸಿದ ತಕ್ಷಣವೇ ನಿದ್ರೆ ಮಾಡುವುದು ಹೀಗೆ ಹಲವಾರು ಕಾರಣಗಳಿಂದ ನಿದ್ರೆ ಬರತ್ತೆ. ಅದಕ್ಕಾಗಿ ಇಲ್ಲಿವೆ ಸುಲಭ ಪರಿಹಾರಗಳು. ಮೊದಲಿಗೆ, ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಗೊರಕೆ ಹೊಡೆಯುವುದು ದೂರ ಆಗತ್ತೆ. ಎರಡನೆಯದಾಗಿ ಒಂದು ಸ್ಪೂನ್ ಜೇನುತುಪ್ಪ ಹಾಗೂ ಒಂದು ಸ್ಪೂನ್ ಆಲಿವ್ ಆಯಿಲ್ ಬೆರಸಿ ಕುಡಿದರೆ ಗೊರಕೆ ಹೊಡೆಯದೆಯೇ ಆರಾವಾಗಿ ನಿದ್ರೆ ಮಾಡಬಹುದು. ಮೂರನೆಯದಾಗಿ, ಗೊರಕೆ ಸಮಸ್ಯೆ ಇರುವವರು ಮುಖ ಮೇಲೆ ಮಾಡಿ ಮಲಗುವ ಬದಲು ಎಡಕ್ಕೆ ಅಥವಾ ಬಲಕ್ಕೆ ತಿರುಗಿ ಮಲಗಿಕೊಂಡರೆ ಗೊರಕೆ ಹೊಡೆಯುವುದು ಕಡಿಮೆ ಆಗತ್ತೆ. ಸ್ವಲ್ಪ ಎತ್ತರದ ದಿಂಬನ್ನು ಬಳಸುವುದರಿಂದಲೂ ಸಹ ಗೊರಕೆ ಕಡಿಮೆ ಆಗತ್ತೆ.

ಮಲಗುವ ಮುನ್ನ ಸ್ವಲ್ಪ ಅವಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಂಡು ಅಗೆದರೆ ಗೊರಕೆ ಬರುವುದಿಲ್ಲ. ಮಲಗುವ ಮುನ್ನ ಕಾಫಿ ಅಥವಾ ಟೀ ಕುಡಿದರೂ ಸಹ ಗೊರಕೆ ಬರುವುದನ್ನು ತಡೆಗಟ್ಟಬಹುದು. ಆದರೂ ಈ ಮನೆಮದ್ದುಗಳನ್ನು ಪ್ರಯೋಗಿಸುವ ಮೊದಲು ನಿಮ್ಮ ನಿಮ್ಮ ಫ್ಯಾಮಿಲಿ ಡಾಕ್ಟರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.

By

Leave a Reply

Your email address will not be published. Required fields are marked *