ಮಾನಸಿಕ ಸಮಸ್ಯೆ, ಒತ್ತಡ, ಮನಸ್ಸಿನ ಹಲವು ಗೊಂದಲಗಳಿಗೆ ಇಲ್ಲಿದೆ ಪರಿಹಾರ

0 7

ಇವತ್ತಿನ ವಿಷಯ ಮನಸ್ಸಿಗೆ ಸಂಬಂಧಿಸಿದ ಖಾಯಿಲೆಗಳು. ಉನ್ಮಾದ, ಅಪಸ್ಮಾರ, ಅನಿದ್ರತ ಅಥವಾ ಮಾನಸಿಕ ಖಿನ್ನತೆ ಮುಂತಾದ ಕಾಯಿಗಳೆಗಳಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕೆಲವು ಪರಿಹಾರಗಳನ್ನು ತಿಳಿಸಿಕೊಡುತ್ತೀವಿ.

ಮೊದಲಿಗೆ ಈ ಮಾನಸಿಕ ವ್ಯಾಧಿಗಳು ಯಾತಕ್ಕಾಗಿ ಬರತ್ತೆ ಅಂತ ನೋಡುವುದಾದರೆ ಇವು ನೆಗೆಟಿವಿಟಿ ಅಂದರೆ ನಕಾರಾತ್ಮಕ ಚಿಂತನೆ ಇವುಗಳಿಂದ ಬರತ್ತೆ. ಆಹಾರ ಅಂದರೆ ನಾವು ಬಾಯಿಯಿಂದ ತಿಂದು ದೇಹ ಸೇರುವುದನ್ನ ನಾವು ಆಹಾರ ಅಂತ ತಿಳಿದುಕೊಂಡಿದ್ದೇವೆ. ಆದರೆ ಇದು ಪೂರ್ಣ ಸತ್ಯ ಅಲ್ಲ ಅರ್ಧ ಸತ್ಯ. ಅಆಹಾರವನ್ನು ಕೇವಲ ಬಾಯಿಯಿಂದ ಮಾತ್ರ ಅಲ್ಲದೆ ಕಣ್ಣಿನಿಂದಲೂ ತಿನ್ನಬಹುದು, ಕಿವಿಯಿಂದ , ಚರ್ಮದಿಂದ ,ಮೂಗಿನಿಂದಲೂ ಕೂಡ ತಿನ್ನಬಹುದು. ಇದು ಕೇಳಿದ್ರೆ ತಮಾಷೆ ಅನ್ನಿಸಬಹುದು. ಆದರೆ ನಿಜವಾದ ಅರ್ಥದಲ್ಲಿ ಆಹಾರ ಎಂದರೆ ಹೊರಗಡೆಯಿಂದ ನಮ್ಮ ದೇಹದ ಒಳಗೆ ಹೋಗುವುದೆಲ್ಲವೂ ಆಹಾರವೇ. ನಾವು ನಮ್ಮ ಜ್ಞಾನವನ್ನು ಕೇವಲ ದೇಹಕ್ಕೆ ಮಾತ್ರ ಸೀಮಿತ ಗೊಳಿಸಿಕೊಂಡಿದ್ದೇವೆ. ದೇಹದ ದೃಷ್ಟಿಯಿಂದ ಮಾತ್ರ ನಾವು ನಮ್ಮನ್ನ ನೋಡುತ್ತೇವೆ. ನಮಗೆ ಈಗ ಹೊರಗಡೆ ಕಾಣುತ್ತ ಇರುವ ನಮ್ಮ ದೇಹ ಕೇವಲ ಒಂದು ಭೌತಿಕ ಶರೀರ ಆಗಿದ್ದು ಇದು ಒಂದು ಮನೆ ಅಥವಾ ಆಶ್ರಯ. ಇದರ ಒಳಗೆ ನಾನು ಎನ್ನುವ ಒಂದು ಚೈತನ್ಯ ಇದೆ. ನಮ್ಮ ದೇಹ ಒಂದು ರೀತಿಯ ಬಾಡಿಗೆ ಮನೆ ಇದ್ದಹಾಗೇ. ಒಂದುವೇಳೆ ಒಬ್ಬ ವ್ಯಕ್ತಿ ಮರಣ ಹೊಂದಿದರೇ ಅವನು ಸತ್ತು ಹೋದ ಅಂತ ಹೇಳ್ತೀವಿ ಅಥವಾ ದೇಹ ತ್ಯಾಗ ಮಾಡಿದ ಅಂತ ಹೇಳ್ತೀವಿ. ಹಾಗಂದರೆ ಏನು? ಇಲ್ಲಿ ಸತ್ತಿರುವುದಾದರೂ ಏನು? ಏನು ಎಲ್ಲಿಗೆ ಹೋಯಿತು? ನಮ್ಮ ದೇಹ ಸತ್ತ ಮೇಲೆ ಒಳಗಿರುವ ಆತ್ಮ ಹೋಯಿತು ಅಂತ ಅರ್ಥ. ಅಂದರೆ ಈ ಮಮೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಯಿತು. ಪುನರಪಿ ಜನನಂ ಪುನರಪಿ ಮರಣಂ. ಈ ತರದ ಆತ್ಮ ಮತ್ತು ಮನಸ್ಸು ಹೀಗೆ ಅರ್ಥ ಮಾಡಿಕೊಂಡಾಗ ಮಾತ್ರ ಮಾನಸಿಕ ವ್ಯಾಧಿಗಳು ಉನ್ಮಾದ, ಅಪಸ್ಮಾರ, ಅನಿದ್ರತ ಅಥವಾ ಮಾನಸಿಕ ಖಿನ್ನತೆ ಇವುಗಳನ್ನ ಅರ್ಥ ಮಾಡಿಕೊಳ್ಳೋಕೆ ಸಾಧ್ಯ. ನಾವು ಮನಸ್ಸು, ಆತ್ಮ ,ಚೈತನ್ಯ ಇವುಗಳನ್ನು ಅರ್ಥ ಮಾಡಿಕೊಳ್ಳದೆ ಮಾನಸಿಕ ವ್ಯಾಧಿಗಳನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಮಾನಸಿಕ ವ್ಯಾಧಿಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಇವುಗಳ ಬಗ್ಗೆ ಆಳವಾದ ಅಧ್ಯಯನ ಅವಶ್ಯಕ.

ಹಾಗಿದ್ರೆ ಮೊದಲಿಗೆ ಮಾನಸಿಕ ಖಿನ್ನತೆ ಅಂದರೆ ಏನು? ಅನ್ನೋದನ್ನ ನೋಡುವುದಾದರೆ, ಮೊದಲೇ ಆಹಾರದ ಬಗ್ಗೆ ಹೇಳಿದಾಗ, ನಾವು ನೋಡುವುದು, ಕೇಳುವುದು ಸ್ಪರ್ಶಿಸುವುದು, ತಿನ್ನುವುದು ಎಲ್ಲದೂ ಕೂಡಾ ನಮ್ಮ ಮನಸ್ಸಿಗೆ ಆಹಾರವೇ. ಒಂದುವೇಳೆ ನಾವು ಈಗ ನಮ್ಮ ದೇಹಕ್ಕೆ ಆಹಾರ ಅಂತ ಜಂಕ್ ಫುಡ್ಸ್, ನಾನ್ ವೆಜ್, ಆಲ್ಕೋಹಾಲ್ ಮುಂತಾದವುಗಳನ್ನ ಸೇವನೆ ಮಾಡಿದ್ರೆ ನಮ್ಮ ಆರೋಗ್ಯ ಕೆಡತ್ತೆ ಆಗ ನಾವು ಸಾತ್ವಿಕ ಆಹಾರ ಅಂದರೆ, ತರಕಾರಿ ಹಣ್ಣುಗಳನ್ನು ತಿನ್ನಿಕೆ ಆರಂಭಿಸುತ್ತೇವೆ. ಆಗ ನಮ್ಮ ಆರೋಗ್ಯ ಚೇತರಿಸಿಕೊಳ್ಳುತ್ತೇ. ಅದೇ ರೀತಿ ಮನಸ್ಸಿಗೂ ಕೂಡ. ನೀವು ಒಳ್ಳೆಯ ರೀತಿ ಯೋಚನೆ ಮಾಡಿದರೆ, ಒಳ್ಳೆಯ ಮಾತು ಕೇಳಿದರೆ, ನೋಡಿದರೆ ಮೂಸಿದರೆ, ಒಳ್ಳೆಯ ಎನರ್ಜಿ, ಒಳ್ಳೆಯ ಶಕ್ತಿ ಇದು ಮನಸ್ಸಿಗೆ ದೊರಕತ್ತೇ. ಆವಾಗ ಮನಸ್ಸು, ಆತ್ಮ ,ಇಂದ್ರಿಯಗಳು ಸಕಾರಾತ್ಮಕ ಗೊಳ್ಳುತ್ತವೆ. ಆಗ ಮಾನಸಿಕ ಸ್ಥೈರ್ಯ ಹಾಗೂ ಧೈರ್ಯ ಬರತ್ತೆ ಹಾಗೆ ಮಾನಸಿಕ ಸಾತ್ವಿಕತೆಯ ಕಡೆಗೆ ವಾಲುತ್ತದೆ. ಒಂದುವೇಳೆ ನಾವು ಆಡಬಾರದ ಮಾತಾಡಿ, ಕೆಟ್ಟದ್ದನ್ನು ಕೇಳಿ, ನೋಡಿದರೆ, ಇವೆಲ್ಲ ನಮ್ಮ ದೇಹಕ್ಕೆ ಜಂಕ್ ಫುಡ್ಸ್ ಹೇಗೋ ಇವೂ ಕೂಡಾ ನಮ್ಮ ಮನಸ್ಸಿಗೆ ಜಂಕ್ ಫುಡ್ಸ್ ತರ. ಜಂಕ್ ಫುಡ್ಸ್ ಹಾಕಿದ್ರೆ ಮನಸ್ಸಿನ ಆರೋಗ್ಯ ಕೆಡುವುದು ಖಂಡಿತ. ಹೀಗೆ ಮನಸ್ಸಿನ ಆರೋಗ್ಯ ಕೆಟ್ಟರೆ ಆಗ ಮಾನಸಿಕ ವ್ಯಾಧಿಗಳು, ಖಿನ್ನತೆ, ಎಲ್ಲಾ ಸೌಕರ್ಯ ಇದ್ದರೂ ಮನಸ್ಸಿಗೆ ಕಿರಿಕಿರಿ ಉಂಟಾಗತ್ತೆ.. ಯಾಕೆ? ಯಾಕಂದ್ರೆ ನಾವು ನೋಡುವುದು, ಕೇಳುವುದು ವಿಚಾರ ಮಾದುವುದು ಎಲ್ಲವೂ ಮನಸ್ಸಿಗೆ ಒಂದು ರೀತಿಯ ಜಂಕ್ ಫುಡ್ ಇದ್ದಹಾಗೇ.

ಇತ್ತೀಚಿನ ದಿನಗಳಲ್ಲಿ ಯಾಕೆ ನಾಗರೀಕರು ಎನಿಸಿಕೊಂಡ ನಮಗೆ ಮಾನಸಿಕ ಕಾಯಿಲೆಗಳು ಹೆಚ್ಚು ಆಗತ್ತೆ? ಇತ್ತೀಚಿನ ದಿನಗಳಲ್ಲಿ ಯಾಕೆ ನಿದ್ರೆ ಮಾತ್ರೆಗಳು ಅತಿಯಾಗಿ ಮಾರಾಟ ಆಗತ್ತೆ ಯಾಕೆ ಅಂತ ನೋಡುವುದಾದರೆ, ಮೂಲ ಸಮಸ್ಯೆ ನಮ್ಮ ಬಳಿಯೇ ಇರತ್ತೆ. ನೋಡಬಾರದ್ದನ್ನು ನೋಡಿ ಕೇಳಿ, ವಿಚಾರ ಮಾಡಿರುತ್ತೇವೆ. ಇದರಿಂದ ಮಾನಸಿಕ ಆರೋಗ್ಯ ಕೆಡತ್ತೆ. ಮಾನಸಿಕ ಆರೋಗ್ಯ ಕೆಟ್ಟರೆ ಮಮಸಲ್ಲಿ ಇಲ್ಲಸಲ್ಲದ ಬೇಡವಾದ ಯೋಚನೆಗಳು ಬರೋಕೆ ಆರಂಭ ಆಗತ್ತೆ. ನಕಾರಾತ್ಮಕ ಅಂಶಗಳು ತುಂಬಿಕೊಂಡು ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವುದೇ ಕಷ್ಟ ಆಗತ್ತೆ. ಮಾನಸಿಕ ವ್ಯವಸ್ಥೆ ಸರಿ ಇರಲ್ಲ ಆಗ ಈ ಎಲ್ಲಾ ಸಮಸ್ಯೆಗಳೂ ಬರತ್ತೆ.

ಹಿಂದೆಲ್ಲ ಕಾಡಿನಲ್ಲಿ ಋಷಿ ಮುನಿಗಳು ತಪಸ್ಸಿಗೆ ಕುಳಿತಾಗ ಅವರಿವೆ ಈಗ ಇರುವ ಹಾಗೆ ಯಾವುದೇ ಸೌಕರ್ಯಗಳೂ ಇರಲಿಲ್ಲ. ಅವರು ತಮ್ಮ ಇಂದ್ರಿಯಗಳನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತ ಇದ್ದರು. ಹಿರಾಗಿನ ಯಾವ ವಿಷಯಗಳಿಗೂ ಕಿವಿ ಗೊಡದೇ ಅಂತರ್ಮುಖಿಗಳು ಆಗಿರುತ್ತ ಇದ್ದರು. ತಮ್ಮ ತಮ್ಮ ಬಗ್ಗೆ ತಾವೇ ವಿಮರ್ಶೆ , ಪರಾಮರ್ಶೆ ಮಾಡಿಕೊಂಡು ತಮ್ಮ ತಮ್ಮ ಬಗ್ಗೆಯೇ ಯೋಚಿಸುವುದನ್ನ ಬಿಟ್ಟು ಇನ್ನೊಬ್ಬರ ನೋಡಿ ಅವರ ಬಗ್ಗೆ ಅವರುಂಡ ನೀಡಿ ಕಲಿಯಲು ಅವರು ಮಾಡಿದ ಹಾಗೆ ಮಾಡಲು ಹಿದರೆ ಅಲ್ಲಿಗೆ ನಮಗೆ ಮಾನಸಿಕ ಕಾಯಿಲೆಯ ಮೊದಲನೇ ಹಂತದಲ್ಲಿದ್ದೇವೆ ಎಂದು ಅರ್ಥ.

ಮಾನಸಿಕ ಕಾಯಿಲೆಗೆ ಕಾರಣ ಏನೋ ತಿಳಿಯಿತು ಆದರೆ ಇದಕ್ಕೆ ಪರಿಹಾರ? ಮೇಲಿನ ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಮಾನಸಿಕ ಕಾಯಿಲೆಗೆ ಅರ್ಧ ಪರಿಹಾರ ಅಲ್ಲೇ ಸಿಗತ್ತೆ. ಆದರೂ ಇದಕ್ಕೆ ಉತ್ತಮ ಪರಿಹಾರ ಎಂದರೆ ಅಂಗಾತ ಮಲಗಿ ಮೂಗಿನ ಎರಡೂ ಹೊಳ್ಳೆಗಳಲ್ಲಿ ಹಸುವಿನ ತುಪ್ಪವನ್ನು ಹಾಕಿಕೊಳ್ಳಬೇಕು. ಇದನ್ನ ಬೆಳಿಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮೂಗಿಗೆ ಹಸುವಿನ ತುಪ್ಪ ಹಾಕಿಕೊಂಡು, 10 ನಿಮಿಷ ನಿಧಾನ ಉಸಿರಾಟ ಮಾಡಬೇಕು. ಹೀಗೆ ಮಾಡಿದಲ್ಲಿ ಮನಸ್ಸಿಗೆ ಶಕ್ತಿಯನ್ನು ನೀಡುವ ಶಕ್ತಿ ಹಸುವಿನ ತುಪ್ಪದಲ್ಲಿ ಇದೆ. ಮನಸ್ಸಿನಲ್ಲಿ ಇಯುವ ದುಗುಡ, ದುಮ್ಮಾನ ಎಲ್ಲವೂ ಶಾಂತ ಆಗುತ್ತದೆ. ಇಷ್ಟು ಮಾಡಿದರೂ ನಿಮ್ಮ ಮಾನಸಿಕ ಕಾಯಿಕೆ ಕಡಿಮೆ ಆಗದೇ ಇದ್ದಲ್ಲಿ ನಿಮ್ಮ ಹತ್ತಿರದ ಆಯುರ್ವೇದ ವೈದ್ಯರನ್ನು ಕಡಿಮೆ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.