Ultimate magazine theme for WordPress.

ಮಹಿಳೆಯರಿಗೆ ಅನುಕೂಲವಾಗುವ ಸುಲಭವಾದ ಅಡುಗೆ ಮನೆ ಟಿಪ್ಸ್

0 5

ಮಹಿಳೆಯರಿಗಾಗಿ ಕೆಲವು ಸುಲಭವಾದ ಅಡುಗೆ ಮನೆಯ ಬಗ್ಗೆ ಅಡುಗೆ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳೋಕೆ ಕೆಲವು ಟಿಪ್ಸ್ ಹಾಗೂ ಟ್ರಿಕ್ಸ್ ಗಳನ್ನು ಇಲ್ಲಿ ತಿಳಿಸಿದ್ದೇವೆ. ಬಟ್ಟೆಯ ಮೇಲೇ ಆಗುವಂತಹ ಪೆನ್ ಅಥವಾ ಪೆನ್ಸಿಲ್ ನ ಮಾರ್ಕ್ ಅನ್ನು ಹೇಗೆ ತೆಗೆಯೋದು ಅನ್ನೋದನ್ನ ನೋಡೋಣ. ಈ ತರ ಮಾರ್ಕ್ ಆದಾಗ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ತೆಗೆಯಬಹುದು. ಪೆನ್ ಇಂದ ಮಾರ್ಕ್ ಆದ ಬಟ್ಟೆಯ ಮೇಲೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಒಂದು ಒಣಗಿದ ಬಟ್ಟೆಯಿಂದ ಒರೆಸಿದರೆ ಮಾರ್ಕ್ ಗಳು ಹೋಗತ್ತೇ.

ಫ್ರಿಡ್ಜ್ ಮೇಲೆ ಆಗಿರುವ ಒದ್ದೆ ಕೈ ಇಂದ ಮುಟ್ಟಿದ ಕಲೆ ಇರಬಹುದು ಅಥವಾ ಎಣ್ಣೆಯ ಕಲೆ ಇವನ್ನೆಲ್ಲ ಹೇಗೆ ತೆಗಿಯೋದು ಅನ್ನೋದನ್ನ ನೋಡೋಣ. ಒಂದೋ ಬೌಲ್ ಗೆ ಇಂದು ಟೀ ಸ್ಪೂನ್ ಅಡುಗೆ ಸೋಡಾ ಹಾಗೂ ಒಂದೂವರೆ ಸ್ಪೂನ್ ಅಷ್ಟು ವಿನೆಗರ್ ಹಾಕಿ ಮಿಕ್ಸ್ ಮಾಡಿ, ಒಂದು ಸ್ಕ್ರಬರ್ ನಿಂದ ವಿನೆಗರ್ ಸೋಡಾ ಮಿಶ್ರಣವನ್ನು ಹಚ್ಚಿ ನಂತರ ಒದ್ದೆ ಬಟ್ಟೆ ಇಂದ ಒರೆಸಿ ನಂತರ ಒಣಗಿದ ಬಟ್ಟೆಯಿಂದ ಇರೆಸಿದ್ರೆ ಕ್ಲೀನ್ ಆಗತ್ತೆ. ಈ ರೀತಿ ವಾರಕ್ಕೆ ಒಮ್ಮೆ ಆದರೂ ಮಾಡುವುದರಿಂದ ಫ್ರಿಡ್ಜ್ ಮೇಲೆ ಕಲೆಗಳು ಆಗಲ್ಲ.

ಬಾಚಣಿಗೆಯಲ್ಲಿ ಇರುವಂತಹ ಕೊಳೆಯನ್ನ ತೆಗಿಯೋದು ತುಂಬಾ ಕಿರಿಕಿರಿ. ಸೂಜಿ ಅಥವಾ ಪಿನ್ ತಗೊಂಡು ಒಂದೊಂದೇ ಹಲ್ಲಿನಲ್ಲಿ ಕೆಸರನ್ನ ತೆಗಿಯೋಕೆ ಬೇಜಾರು ಅಂದ್ರೆ ಹೀಗೆ ಮಾಡಿ ಒಂದು ಟಬ್ ನಲ್ಲಿ ನೀರು ಹಾಕಿ ಬಾಚಣಿಕೆಯನ್ನ ಇಟ್ಟು ಸ್ವಲ್ಪ ವಿಮ್ ಜೆಲ್ ಅಥವಾ ಬಟ್ಟೆ ಸೋಪು ಏನಾದರೂ ಬಳಸಿಕೊಂಡು ಬಟ್ಟೆ ತಿಕ್ಕುವ ಬ್ರಶ್ ನಿಂದ ತಿಕ್ಕಿದರೆ ಒಮ್ಮೆಗೆ ಬಾಚಣಿಗೆಯಲ್ಲಿನ ಕೆಸರು ಹೋಗತ್ತೆ ಎಣ್ಣೆಯ ಜಿಡ್ಡೂ ಕೂಡಾ ಹೋಗತ್ತೆ.

ಇನ್ನೂ ಕೆಲವೊಮ್ಮೆ ಅಡುಗೆ ಮನೆಯಲ್ಲಿ ಎಣ್ಣೆ ಜಿಡ್ಡು ಎಲ್ಲವೂ ಸೇರಿ ಟೈಲ್ಸ್ ಕೂಡಾ ಕಲೆ ಆಗಿರತ್ತೆ. ಹಾಗಾಗಿ ಸೋಡಾ ಮತ್ತೆ ವಿನೆಗರ್ ಅನ್ನು ಮಿಕ್ಸ್ ಮಾಡಿ ಸ್ಕ್ರಬರ್ ನಿಂದ ಟೈಲ್ಸ್ ಮೇಲೆ ಹಚ್ಚಿ ಸ್ವಚ್ಛ ಮಾಡುವುದರಿಂದ ಕಲೆಗಳು ಹೋಗತ್ತೆ. ನಂತರ ಒಂದು ಬಟ್ಟೆಯಿಂದ ಒರೆಸಬೇಕು. ಇನ್ನು ಅಡುಗೆಮನೆಯ ಸಿಂಕ್ ಅಲ್ಲಿ ಕೆಟ್ಟ ವಾಸನೆ ಅಥವಾ ಏನಾದರೂ ಕಟ್ಟಿ ನೀರು ಸರಿಯಾಗಿ ಹೋಗ್ತಾ ಇರಲ್ಲ. ಆಗ ಅದಕ್ಕೆ ಸಿಂಕ್ ಅಲ್ಲಿ ಒಂದು ಸ್ಪೂನ್ ಉಪ್ಪು, ಒಂದು ಸ್ಪೂನ್ ಅಡುಗೆ ಸೋಡಾ ಹಾಗೂ ಕಾಲು ಕಪ್ ಅಷ್ಟು ವಿನೆಗರ್ ಅನ್ನು ಹಾಕಬೇಕು ಇದರಿಂದ ಪೈಪ್ ನಲ್ಲಿ ಏನಾದರೂ ಬ್ಲಾಕ್ ಆಗಿದ್ದರೂ ಸಹ ಹೋಗತ್ತೆ. ನಂತರ ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರನ್ನ ಮೇಲಿನಿಂದ ಸುರಿಯಬೇಕು.

ಅಡುಗೆ ಮನೆಯ ಟೈಲ್ಸ್, ಗ್ಯಾಸ್ ಸ್ಟೋವ್, ಮನೆಯ ಕಪಾಟ್ ಇವುಗಳ ಮೇಲೆ ನೊಣಗಳು ಕುಳಿತಿರತ್ತೆ ಇದಕ್ಕೆ ಒಂದು ಬೌಲ್ ಗೆ ಎರಡು ಸ್ಪೂನ್ ವಿನೆಗರ್ ಮತ್ತು ಒಂದು ಸ್ಪೂನ್ ಉಪ್ಪು ಸೇರಿಸಿ ಆ ಲಿಕ್ವಿಡ್ ಅನ್ನು ಈ ಎಲ್ಲಾ ಕಡೆ ಹಚ್ಚುವುದರಿಂದ ಮನೆಯಲ್ಲಿ ಇರುವೆಗಳು ಅಥವಾ ನೊಣಗಳು ಬಂದು ಕೂರಲ್ಲ. ಸಾಮಾನ್ಯವಾಗಿ ಎಲ್ಲರೂ ಒಣ ಮೆಣಸಿನಕಾಯಿಯನ್ನ ತಂದು ಇಟ್ಟುಕೊಂಡಿರುತ್ತೇವೆ. ಆದರೆ ಇದು ಹಾಗೆ ಇಟ್ಟಾಗ ಮೇಲಿಂದ ಸ್ವಲ್ಪ ಬೂಸ್ಟ್ ಬಂದ ಹಾಗೆ ಆಗತ್ತೆ. ಅದಕ್ಕೆ ಮೆಣಸಿನಕಾಯಿಯನ್ನ 4ರಿಂದ 5 ಬಿಸಿಲು ಸರಿಯಾಗಿ ಒಣಗಿಸಿ ನಂತತ ಅಡತ ಚೊಟ್ಟು ತೆಗೆಯದೇ ಹಾಗೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಇದರಿಂದ ಮೆಣಸಿನಕಾಯಿ ಹಾಲು ಆಗಲ್ಲ ಹುಳ ಕೂಡ ಆಗಲ್ಲ.

ಇನ್ನೂ ಸಾಂಬಾರ್ ಪೌಡರ್ ನ ಜಾಸ್ತಿ ಮಾಡಿಟ್ಟುಕೊಂಡರೆ ಬೇಗ ಹಾಳು ಆಗತ್ತೆ ಅನ್ನೋ ಚಿಂತೆ ಇದ್ರೆ, ಒಂದು ಸಾಂಬಾರ್ ಪುಡಿ ಮಾಡಬೇಕಾದರೆ ಅದಕ್ಕೆ ಅರಿಷಿನವನ್ನು ಸೇರಿಸಿಕೊಳ್ಳಬೇಕು ಇಲ್ಲವಾದಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಇಟ್ಟರೆ ಹಾಳಾಗದೆ ಇರತ್ತೆ. ಹೊಸದಾದ ಸ್ಟೀಲ್ ಪಾತ್ರೆಯ ಮೇಕೆ ಸ್ಟಿಕರ್ ಇರತ್ತೆ ಕೆಲವೊಮ್ಮೆ ಅದನ್ನ ಹಾಗೆಯೇ ತೆಗಿಯೋಕೆ ಹೋದ್ರೆ ಸರಿಯಾಗಿ ಕಿತ್ತು ಬರಲ್ಲ ಹಾಗಾಗಿ ಆ ಸ್ಟಿಕರ್ ಮೇಲೆ ಕೋಬ್ವರಿ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆಯನ್ನು ಹಚ್ಚಿ ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಕಿ ಒಂದೆರಡು ನಿಮಿಷ ಕಾಯಿಸಿದರೆ ಸ್ಟಿಕರ್ ಪೂರ್ತಿಯಾಗಿ ಕಿತ್ತು ಬರತ್ತೆ.

ಇನ್ನೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಕಟ್ ಮಾಡಿದಾಗ ಕೈ ವಾಸನೆ ಬರುತ್ತಾ ಇರತ್ತೆ ಆಗ ನಿಂಬೆ ಹಣ್ಣಿನ ರಸವನ್ನು ಕೈ ಗೆ ಎಲ್ಲ ಕಡೆ ಹಚ್ಚಿಕೊಳ್ಳುವುದರಿಂದ ಕೈ ವಾಸನೆ ಹೋಗತ್ತೆ. ಫ್ರಿಡ್ಜ್ ಇಲ್ಲದೆ ಇರುವವರು ಮೊಸರನ್ನು ಹುಳಿ ಬರದ ಹಾಗೆ ಹೇಗೆ ಇಡೋದು ಅಂತ ಚಿಂತೆ ಮಾಡ್ತಾ ಇರ್ತಾರೆ. ಅದಕ್ಕೆ ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರು ಹಾಕಿ ಅದರಲ್ಲಿ ಮೊಸರನ್ನ ಇಟ್ಟು ಮುಚ್ಚಿ ಇಡಬೇಕು. ಇದರಿಂದ ಮೊಸರು ಹುಳಿ ಬರಲ್ಲ. ಗೋಡೆಯ ಮೇಲೆ ಮಕ್ಕಳು ತಬಾ ಗೀಚುವುದು ಬರೆಯುವುದು ಮಾಡುತ್ತಾರೆ ಅದಕ್ಕೆ ನೈಲ್ ಪಾಲಿಶ್ ರಿಮೂವರ್ ಇಂದ ಒರೆಸಿದರೆ ಹೋಗತ್ತೆ.

ಬಟ್ಟೆಯ ಮೇಲೆ ಎಣ್ಣೆ ಕಲೆ ಅಥವಾ ಏನಾದರೂ ಸೊನೆ ತಾಗಿ ಕಲೆ ಆಗಿದ್ದರೆ ಅದಕ್ಕೂ ಕೂಡಾ ನೈಲ್ ಪಾಲಿಶ್ ರಿಮೂವರ್ ಹಾಕಿ ಹಚ್ಚಿ ನಂತರ ಸೋಪ್ ಬಳಸಿ ಬ್ರಶ್ ಮಾಡುವುದರಿಂದ ಹೋಗತ್ತೆ.
ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಉರತ್ತೆ. ನೈಲ್ ಪಾಲಿಶ್ ತಂದು ತುಂಬಾ ದಿನ ಆಗಿದ್ರೆ ಹಾಗೇ ಗಟ್ಟಿ ಆಗತ್ತೆ ಅದಕ್ಕೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಸ್ವಲ್ಪ ಶೇಕ್ ಮಾಡಿದ್ರೆ ಸರಿ ಆಗತ್ತೆ. ಒಮ್ಮೊಮ್ಮೆ ಅಡುಗೆ ಮನೆಯಲ್ಲಿ ಸಿಹಿ ಪದಾರ್ಥಗಳು ಬಿದ್ದು ಇರುವೆ ಬರತ್ತೆ ಆಗ 5/6 ಪುಡಿ ಮಾಡಿದ ಕರ್ಪೂರ, ಒಂದು ಸ್ಪೂನ್ ಅರಿಶಿನ ಹಾಗೂ ಅರ್ಧ ಸ್ಪೂನ್ ಉಪ್ಪು ಮೂರನ್ನೂ ಮಿಕ್ಸ್ ಮಾಡಿ, ಇರುವೆ ಬಂದ ಜಾಗಕ್ಕೆ ಹಾಕಿದ್ರೆ ಇರುವೆ ಹಾಗೂ ಜಿರಳೆಗಳೂ ಸಹ ಹೋಗತ್ತೆ.ತುಂಬಾ ಸುಲಭವಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಈ ರೀತಿಯಾಗಿ ಪೂರ್ತಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.

Leave A Reply

Your email address will not be published.