ಈರುಳ್ಳಿ ಚಿಕನ್ ಫ್ರೈ ಮಾಡುವ ಅತಿ ಸುಲಭ ವಿಧಾನ ಒಮ್ಮೆ ಟ್ರೈ ಮಾಡಿ

0 11

ರುಚಿಯಾದ ಈರುಳ್ಳಿ ಚಿಕನ್ ಫ್ರೈ ರೆಸಿಪಿ ಒಂದೇ ರೀತಿ ಚಿಕನ್ ಫ್ರೈ ಮಾಡಿ ತಿಂದು ಬೇಜಾರು ಬಂದಿದ್ರೆ ಈ ರೀತಿಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ಈ ಲೇಖನದಲ್ಲಿ ಈರುಳ್ಳಿ ಚಿಕನ್ ಫ್ರೈ ಹೇಗೆ ಮಾಡೋದು ಅನ್ನೋದನ್ನ ತಿಳಿಸಿಕೊಡ್ತೀವಿ.

ಬೇಕಾಗುವ ಸಾಮಗ್ರಿಗಳು :– ಚಿಕನ್ 1ಕೆಜಿ, ಈರುಳ್ಳಿ ೧೦, ಟೊಮ್ಯಾಟೋ ೨, ಕೊತ್ತಂಬರಿ ಸೊಪ್ಪು, ಚಕ್ಕೆ 2 ಇಂಚು, ಲವಂಗ ೪, ಏಲಕ್ಕಿ ೨, ಕಾಳು ಮೆಣಸು 8/೧೦, ಕೊತ್ತಂಬರಿ ಬೀಜ 1 ಟಿ ಸ್ಪೂನ್, ಸೋಂಪು ಹಾಗೂ ಜೀರಿಗೆ ತಲಾ 1 ಟೀ ಸ್ಪೂನ್, ಕೆಂಪು ಮೆಣಸಿನ ಕಾಯಿ ೧೦, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್,
ಕೆಂಪು ಮೆಣಸಿನ ಪುಡಿ 1 ವರೆ ಟೀ ಸ್ಪೂನ್, ಗರಂ ಮಸಾಲ ಅರ್ಧ ಟೀ ಸ್ಪೂನ್, ಧನಿಯಾ ಪುಡಿ ಅರ್ಧ ಟಿ ಸ್ಪೂನ್, ನಿಂಬೆ ಹಣ್ಣು ೧, ಉಪ್ಪು, ಎಣ್ಣೆ.

ಮಾಡುವ ವಿಧಾನ :- ಮೊದಲು ಒಂದು ಪಾತ್ರೆಯಲ್ಲಿ ತೊಳೆದ ಚಿಕನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ, ಅರ್ಧ ಟಿ ಸ್ಪೂನ್ ಧನಿಯಾ ಪುಡಿ , ಅರ್ಧ ಟೀ ಸ್ಪೂನ್ ಗರಂ ಮಸಾಲ, ಎರಡು ಟಿ ಸ್ಪೂನ್ ಅಷ್ಟು ಕೆಂಪು ಮೆಣಸಿನ ಪುಡಿ , ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಕ್ಕದಾಗಿ ಕತ್ತರಿಸಿದ ಸ್ವಲ್ಪ ಈರುಳ್ಳಿ, ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಕಲಸಿಕೊಳ್ಳಬೇಕು. ನಂತರ ಇದಕ್ಕೊಂದು ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಹಾಗೇ ಬಿಡಬೇಕು.

ನಂತರ ಸ್ಟೋವ್ ಮೇಲೆ ಒಂದು ಪ್ಯಾನ್ ಇತ್ತು ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಬೀಜ ಹಾಗೂ ಒಣಮೆಣಸಿನಕಾಯಿ ಇವೆಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ತಣ್ಣಗಾಗಲು ಬಿಟ್ಟು ನಂತರ ಮಿಕ್ಸಿ ಜಾರಿಯಲ್ಲಿ ನೈಸ್ ಆಗಿ ಪೌಡರ್ ಮಾಡಿಕೊಳ್ಳಬೇಕು.

ನಂತರ ಒಂದು ಪಾತ್ರೆಯನ್ನ ಸ್ಟೋವ್ ಮೇಲೆ ಇಟ್ಟು ಬಿಸಿ ಆದ ಮೇಲೆ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ 2 ಇಂಚು ಚಕ್ಕೆ, ಕಟ್ ಮಾಡಿಕೊಂಡ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿಕೊಳ್ಳಬೇಕು. ನಂತರ ಟೊಮೇಟೋ ಹಾಕಿ ಫ್ರೈ ಮಾಡಿ ಸಣ್ಣ ಉರಿಯಲ್ಲೂ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಬೇಕು. ನಂತರ ಮೊದಲೇ ರೆಡಿ ಮಾಡಿಟ್ಟುಕೊಂಡ ಚಿಕನ್ ಹಾಕಿ ಮಿಕ್ಸ್ ಮಾಡಿಕೊಂಡು ಮಧ್ಯಮ ಉರಿಯಲ್ಲಿ 8-10 ನಿಮಿಷ ಸರಿಯಾಗಿ ಬೇಯಿಸಿಕೊಳ್ಳಬೇಕು. ನಂತರ ಮೊದಲೇ ಮಾಡಿಟ್ಟುಕೊಂಡ ಪೌಡರ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೆ 10 ನಿಮಿ ಮುಚ್ಚಳ ಮುಚ್ಚಿಷ ಬೇಯಿಸಿ. ನಂತರ ಸ್ಟೋವ್ ಆಫ್ ಮಾಡಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದ್ರೆ ಈರುಳ್ಳಿ ಚಿಕನ್ ಫ್ರೈ ರೆಡಿ. ಇದನ್ನ ನೀವು ಚಪಾತಿ, ರೊಟ್ಟಿ ಹಾಗೂ ಅನ್ನದ ಜೊತೆಗೂ ತಿನ್ನಬಹುದು.

Leave A Reply

Your email address will not be published.