ಹೊಟ್ಟೆ ಕರಗಿಸಲು ತೆಂಗಿನ ಎಣ್ಣೆ ಒಂದೊಳ್ಳೆ ಮದ್ದು ಗೊತ್ತೇ.

0 143

ಹೊಟ್ಟೆಯ ಕೊಬ್ಬು ಇಳಿಯಲು ಯಾವುದೇ ಫಾರ್ಮುಲಾ ಇರುವುದಿಲ್ಲ. ಆದರೆ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಮತ್ತು ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿರುವ ಒಳ್ಳೆಯ ಆಹಾರಗಳನ್ನು ಸೇವಿಸುವುದರ ಮೂಲಕ ಹೊಟ್ಟೆಯ ಕೊಬ್ಬನ್ನು ಇಳಿಸಿಕೊಳ್ಳಬಹುದು. ಬೊಜ್ಜು ಎನ್ನುವುದು ವ್ಯಕ್ತಿಯ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳು ಮಾಡುತ್ತದೆ. ಅದರಲ್ಲಿಯೂ ಹೊಟ್ಟೆ, ಸೊಂಟ ಹಾಗೂ ತೊಡೆಯ ಭಾಗದಲ್ಲಿ ಶೇಖರಗೊಂಡ ಕೊಬ್ಬನ್ನು ಕರಗಿಸುವುದು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸವುದರ ಮೂಲಕ ದೇಹದ ಕೊಬ್ಬನ್ನು ಕರಗಿಸಬಹುದು. ಜೊತೆಗೆ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಅಂತಹ ಅದ್ಭುತ ಉತ್ಪನ್ನಗಳಲ್ಲಿ ತೆಂಗಿನೆಣ್ಣೆಯು ಒಂದು. ಹಾಗಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ತೆಂಗಿನೆಣ್ಣೆಯನ್ನು ಬಳಸುವುದು ಉತ್ತಮ. ಹೀಗಿದ್ದಾಗ ​ತೆಂಗಿನೆಣ್ಣೆಯ ಔಷಧೀಯ ಗುಣಗಳು ಏನು? ಇದು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತೆಂಗಿನ ಎಣ್ಣೆಯಲ್ಲಿ ಇರುವ ಸ್ಯಾಚುರೇಟೆಡ್ ಗುಣವು ಮಾನವ ಆರೋಗ್ಯಕ್ಕೆ ಉತ್ತಮವಾದುದ್ದು. ಇದರಲ್ಲಿ ಇರುವ ವಿಟಮಿನ್ ಹಾಗೂ ಪೋಷಕಾಂಶದ ಗುಣವು ಚರ್ಮ ಆರೋಗ್ಯವನ್ನು ಕಾಪಾಡುವುದು. ಜೊತೆಗೆ ಜೀರ್ಣ ಕ್ರಿಯೆಯನ್ನು ಸುಲಭ ಗೊಳಿಸುವುದು. ದೇಹದ ಕೊಬ್ಬನ್ನು ಕರಗಿಸಲು ಮತ್ತು ಕಲ್ಮಶಗಳನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯ ಮಿತವಾದ ಸೇವನೆಯು ದೇಹದ ತೂಕವನ್ನು ಕರಗಿಸಲು ಸಹಾಯ ಮಾಡುವುದು. ಅದೇ ರೀತಿ ಅತಿಯಾಗಿ ಸೇವಿಸಿದರೆ ದೇಹದ ತೂಕ ಹೆಚ್ಚುವುದು. ಹಾಗಾಗಿ ತೆಂಗಿನ ಎಣ್ಣೆಯನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು? ಎನ್ನುವುದನ್ನು ತಿಳಿದಿರಬೇಕು. ತೆಂಗಿನ ಎಣ್ಣೆ , ತೆಂಗಿನ ಕಾಯಿ ಹಾಲು ಮತ್ತು ಕಚ್ಚಾ ತೆಂಗಿನ ಕಾಯಿ ಇವುಗಳೆಲ್ಲ ಒಮೆಗಾ3 ಕೊಬ್ಬಿನ ಆಮ್ಲದಿಂದ ಸಮೃದ್ಧವಾಗಿ ಇರುತ್ತದೆ. ಇದು ಚಯಾಪಚಯ ಕ್ರಿಯೆಗೆ ನೆರವಾಗಿ ಯಾವುದೇ ಅಡ್ಡಪರಿಣಾಮ ಇಲ್ಲದೆಯೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯಕಾರಿ ಆಗಿರುತ್ತದೆ.

ಸ್ಯಾಚುರೇಟೆಡ್ ಕೊಬ್ಬಿನ ಆಮ್ಲ ಆರೋಗ್ಯಕ್ಕೆ ಹಿತವಾದುದ್ದು. ಕೆಲವು ಸಂಶೋಧನೆ ಹಾಗೂ ಅಧ್ಯಯನವು ಸ್ಯಾಚುರೇಟೆಡ್ ಆಮ್ಲ ತೆಂಗಿನ ಎಣ್ಣೆಯಲ್ಲಿ ಅಧಿಕ ಪ್ರಮಾಣದಲ್ಲಿ ಇದೆ ಎನ್ನುವುದನ್ನು ತಿಳಿಸಿದೆ. ಅಧಿಕ ಶಾಖಕ್ಕೆ ಒಳಗಾದರೂ ಆಕ್ಸಿಡೀಕರಣಕ್ಕೆ ಒಳಗಾಗದು. ಆದ್ದರಿಂದ ಹುರಿಯುವಂತಹ ಆಹಾರಗಳಿಗೆ ತೆಂಗಿನೆಣ್ಣೆ ಅತ್ಯುತ್ತಮವಾದುದ್ದು. ತೆಂಗಿನ ಎಣ್ಣೆಯ ಲಾರಿಕ್ ಆಮ್ಲವು ಉತ್ತಮ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ನೀಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುವುದು. ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದರ ಜೊತಗೆ ಅನಗತ್ಯ ಕೊಬ್ಬನ್ನು ಸುಲಭವಾಗಿ ಕರಿಸುವುದು.

ಹೊಟ್ಟೆಯ ಕೊಬ್ಬನ್ನು ಒಳಾಂಗದ ಕೊಬ್ಬು ಎಂದು ಕರೆಯುತ್ತಾರೆ. ಈ ಕೊಬ್ಬು ವ್ಯಕ್ತಿಯ ಹೃದಯ ರೋಗ ಮತ್ತು ಮಧುಮೇಹದಂತಹ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇಂತಹ ಸಮಸ್ಯೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಒಂದು ಅಧ್ಯಯನದ ಪ್ರಕಾರ ಹೊಟ್ಟೆ ಭಾಗದಲ್ಲಿ ಅಧಿಕ ಕೊಬ್ಬನ್ನು ಹೊಂದಿರುವ ಮಹಿಳೆಯರಿಗೆ ದಿನಕ್ಕೆ 2 ಟೀ ಚಮಚ (30ml) ತೆಂಗಿನ ಎಣ್ಣೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಲಾಯಿತು. 12 ವಾರಗಳ ನಂತರ ಸೋಯಾ ಬೀನ್ ಎಣ್ಣೆಯನ್ನು ಸೇವಿಸಿದವರಿಗೆ ಹೋಲಿಸಿದಾಗ ಸೊಂಟದ ಸುತ್ತಳತೆ ಗಮನಾರ್ಹವಾಗಿ ಕಡಿಮೆ ಆಗಿರುವುದು ಕಂಡು ಬಂದಿತು. ​ಪುರುಷರಲ್ಲಿ ಪರೀಕ್ಷೆ ಮಾಡಿದಾಗ ಕೆಲವು ಪುರುಷರಿಗೆ 4 ವಾರಗಳ ಅಧ್ಯಯನಕ್ಕೆ ಒಳ ಪಡಿಸಲಾಯಿತು. ಬೊಜ್ಜನ್ನು ಹೊಂದಿರುವ ಪುರುಷರಿಗೆ ದಿನಕ್ಕೆ 2 ಟೀ ಚಮಚದಂತೆ (30ml) ತೆಂಗಿನ ಎಣ್ಣೆಯನ್ನು ನೀಡಲಾಯಿತು. ನಾಲ್ಕು ವಾರಗಳ ನಂತರ ಅವರ ಸೊಂಟದ ಸುತ್ತಳತೆಯಲ್ಲಿ 1 ಇಂಚು ಕಳೆದುಕೊಂಡಿರುವುದು ತಿಳಿಯಿತು.

ಇನ್ನು ​ತೆಂಗಿನೆಣ್ಣೆಯನ್ನು ಬಳಸುವ ಮಾರ್ಗ ಹೇಗೆ? ಎಂದು ನೋಡುವುದಾದರೆ , ಬಿಸಿ ನೀರು ಅಥವಾ ಗಿಡಮೂಲಿಕೆಯ ಚಹಾಕ್ಕೆ ಒಂದು ಟೀ ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ, ಬೆಳಿಗ್ಗೆ ಕುಡಿಯಬೇಕು. ತೆಂಗಿನ ಎಣ್ಣೆಯಲ್ಲಿ ಆಹಾರವನ್ನು ತಯಾರಿಸಲು ಇಷ್ಟವಾಗದೆ ಇದ್ದರೆ ಕರಿದ ಆಹಾರ ಅಥವಾ ಸಿಹಿ ತಿಂಡಿಯನ್ನು ತಯಾರಿಸಲು ಬೆಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಬಳಸುವ ಬದಲು ತೆಂಗಿನ ಎಣ್ಣೆಯನ್ನು ಬಳಸಬೇಕು. ಸಲಾಡ್‍ಗಳಿಗೆ ತೆಂಗಿನ ಎಣ್ಣೆಯನ್ನು ಸೇರಿಸಿ ಸವಿಯಬಹುದು. ಇದು ಉತ್ತಮ ರುಚಿ ಹಾಗೂ ಆರೋಗ್ಯವನ್ನು ನೀಡುವುದು. ಊಟಕ್ಕೆ 20 ನಿಮಿಷಗಳ ಮೊದಲು ತೆಂಗಿನೆಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ತೃಪ್ತಿಯ ಭಾವನೆ ನೀಡುವುದು. ಹಸಿವನ್ನು ನಿಯಂತ್ರಣದಲ್ಲಿ ಇಟ್ಟು ತೂಕ ಇಳಿಸಲು ಸಹಾಯ ಮಾಡುವುದು.

Leave A Reply

Your email address will not be published.