ಈಗಿನ ಕಾಲದಲ್ಲಿ ನಾವು ಏನೇ ಸಣ್ಣ ಕಾಯಿಲೆ ಎಂದು ಆಸ್ಪತ್ರೆಗೆ ಹೋದರೂ ಸಹ ವೈದ್ಯರು ಏನೋ ಮಹಾನ್ ಕಾಯಿಲೆ ಇದೆ ಎಂದು ಸಣ್ಣ ಪುಟ್ಟ ವಿಷಯಕ್ಕೂ ಸ್ಕ್ಯಾನಿಂಗ್ ಎಕ್ಸರೇ ಎಂದೆಲ್ಲ ಹೇಳಿ ದೊಡ್ಡ ಬಿಲ್ ಮಾಡುತ್ತಾರೆ. ಇನ್ನು ಸ್ಕ್ಯಾನಿಂಗ್ ಎಂದು ಹೋದರೆ, ನಾವು ಯಾವುದೇ ಖಾಸಗಿ ಆಸ್ಪತ್ರೆಗೆ ಹೋಗಿ MRI ಅಥವಾ ಸಿಟಿ ಸ್ಕ್ಯಾನ್ ಮಾಡಬೇಕಾದರೆ, 5 ರಿಂದ 10 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅದರ ಜೊತೆಗೆ ಬೇರೆ ಬೇರೆ ಹೆಚ್ಚಿನ ಶುಲ್ಕಗಳೂ ಇರುತ್ತವೆ. ಈ ಕಾರಣಕ್ಕಾಗಿ ನಾವು ಸರ್ಕಾರಿ ಆಸ್ಪತ್ರೆಗೆ ಹೋದರೆ, ಅಲ್ಲಿ ಹಣ ಕಡಿಮೆಯಿರುತ್ತೆ ಆದರೆ ಸೂಕ್ತ ಸೌಲಭ್ಯಗಳಿರುವುದಿಲ್ಲ, ಒಂದು ವೇಳೆ ಇದ್ದರೂ ಹೆಚ್ಚಿನ ಜನ ರೋಗಿಗಳು ಅಲ್ಲಿಗೆ ಬರುವ ಕಾರಣ ಅಲ್ಲಿ ಸ್ಕ್ಯಾನ್ ಮಾಡಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಆದರೆ ಈ ಒಂದು ಜಾಗದಲ್ಲಿ ಮಾತ್ರ MRI ಮತ್ತು ಸಿಟಿ ಸ್ಕ್ಯಾನ್ ಗೆ ಅತೀ ಕಡಿಮೆ ಹಣವನ್ನು ತೆಗೆದುಕೊಳ್ಳುತ್ತಾರೆ. ಅದು ಎಲ್ಲಿ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನೀವು MRI ಅಥವಾ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವವರಾಗಿದ್ದರೆ, ನಿಮಗಾಗಿ ಒಂದು ಖುಷಿ ಸುದ್ದಿ ಇಲ್ಲಿದೆ. Only My Health ವೆಬ್‌ಸೈಟ್‌ನ ವರದಿಯ ಪ್ರಕಾರ, ಈ ಎರಡೂ ಸೌಲಭ್ಯಗಳು ಶೀಘ್ರದಲ್ಲೇ ನವದೆಹಲಿಯ ಗುರುದ್ವಾರ ಬಂಗ್ಲಾ ಸಾಹಿಬ್‌ನಲ್ಲಿ ಲಭ್ಯವಾಗಲಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇಲ್ಲಿ ನೀವು 5 ರಿಂದ 10 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗಿಲ್ಲ. ಕೇವಲ 20 ರಿಂದ 50 ರೂಪಾಯಿಗಳ ಸ್ಲಿಪ್ ಅನ್ನು ಪಡೆದುಕೊಳ್ಳುವ ಮೂಲಕ ಈ ಎರಡೂ ಪರೀಕ್ಷೆಗಳನ್ನ ಮಾಡಿಕೊಳ್ಳಬಹುದಾಗಿದೆ. ಗುರುದ್ವಾರಗಳಲ್ಲಿ ಈ ಸೌಲಭ್ಯವನ್ನು ನೀಡಿದ ಬಳಿಕ ಜನರು ಖಾಸಗಿ ಆಸ್ಪತ್ರೆಯಲ್ಲಿ ಪಡೆಯುವ ಸೌಲಭ್ಯವನ್ನ ಪಡೆಯಲಿದ್ದಾರೆ. ಈ ಎರಡೂ ಸೌಲಭ್ಯಗಳನ್ನು ಗುರುದ್ವಾರವು ಜನರಿಗೆ ಸೇವಾಭಾವದಿಂದ ನೀಡಲಾಗುವುದು.

ಗುರುದ್ವಾರ ಬಂಗ್ಲಾ ಸಾಹಿಬ್‌‌ನ ಹತ್ತಿರದಲ್ಲೇ ಗಂಗಾರಾಮ್, ಎಲ್‌ಎನ್‌ಜೆಪಿ ಮತ್ತು ಪಂತ್‌ನಂತಹ ಹಲವಾರು ದೊಡ್ಡ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದೇಶಾದ್ಯಂತ ಸಾವಿರಾರು ರೋಗಿಗಳು ಬರುತ್ತಾರೆ. ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ರೋಗಿಗಳು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಲವಾರು ದಿನಗಳವರೆಗೆ ಕಾಯಬೇಕಾಗುತ್ತದೆ. ಗುರುದ್ವಾರ ಬಂಗ್ಲಾ ಸಾಹಿಬ್‌ನಲ್ಲಿ ಕೇವಲ 20-50 ರೂ.ಗಳಿಗೆ ಈ ಸೌಲಭ್ಯಗಳನ್ನು ಪಡೆದರೆ ಜನರು ಸರ್ಕಾರಿ‌ ಆಸ್ಪತ್ರೆಗಳ ಜನದಟ್ಟಣೆಯಿಂದ ಮುಕ್ತಿ ಪಡೆಯಲಿದ್ದಾರೆ. ಗುರುದ್ವಾರ ಬಂಗ್ಲಾ ಸಾಹಿಬ್‌ನಲ್ಲಿ ರೋಗಿಯೊಂದಿಗೆ ಬಂದ ಸಂಬಂಧಿಕರಿಗೂ ಉಳಿದುಕೊಳ್ಳುವ ಸ್ಥಳವನ್ನೂ ನೀಡಲಾಗುವುದು. ಹಾಗಾಗಿ ರೋಗಿಗಳ ಸಂಬಂಧಿಕರು ಎಲ್ಲಿ ತಂಗಬೇಕು‌ ಎಂಬ ಚಿಂತೆಯೂ ಇರುವುದಿಲ್ಲ. ಇದಲ್ಲದೆ, ಮಧ್ಯಾಹ್ನ ಮತ್ತು ಸಂಜೆ ಗುರುದ್ವಾರದಲ್ಲಿ ಲಂಗಾರ್ ಅನ್ನು ಸಹ ನಡೆಸಲಾಗುತ್ತದೆ, ಇದು ರೋಗಿಗಳ ಊಟದ ಸಮಸ್ಯೆಯನ್ನೂ ನೀಗಿಸಲಿದೆ.

ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಯಂತ್ರಗಳನ್ನು ಗುರುದ್ವಾರ ಕ್ಯಾಂಪಸ್‌ನಲ್ಲಿ ಕಳೆದ 2 ವರ್ಷಗಳಿಂದ ಅಳವಡಿಸಲು ಪ್ರಸ್ತಾಪಿಸಲಾಗುತ್ತಿದೆ. ಆದರೆ ಸಮಿತಿಯ ಪ್ರಕಾರ, ಈ ವರ್ಷದ ಮುಂದಿನ ವರ್ಷದ ಆರಂಭದ ವೇಳೆಗೆ, ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಮತ್ತು ರೋಗಿಗಳು ಇಲ್ಲಿ ಈ ಸೌಲಭ್ಯಗಳನ್ನು ಪಡೆಯಬಹುದು ಎಂದು ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *