ಒಂದು ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸುತ್ತೆ ಈ ಮನೆಮದ್ದು

0 31

ಮನುಷ್ಯನ ಜೀರ್ಣಕ್ರಿಯೆಯೂ ಇಡೀ ದೇಹದ ಸ್ಥಿತಿಯನ್ನು ಸಮತೋಲನದಲ್ಲಿರುವ ಮುಖ್ಯ ಭಾಗವಾಗಿದೆ. ಮನುಷ್ಯನ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ, ಅಥವಾ ಬೊಜ್ಜು ಸಮಸ್ಯೆಯು ಈಗಿನ ಜೀವನಶೈಲಿಯಲ್ಲಿ ಎಲ್ಲ ಜನರಿಗೂ ಸರ್ವೇಸಾಮಾನ್ಯವಾದ ರೋಗವಾಗಿದೆ. ದೇಹದ ಬೊಜ್ಜನ್ನು ಕರಗಿಸಲು ಅನೇಕರು ಅನೇಕ ತರಹದ ವೈದ್ಯಕೀಯ ಔಷಧವನ್ನು ಮಾಡುತ್ತಾರೆ. ಈ ಬೊಜ್ಜನ್ನು ನಿವಾರಿಸಲು ಸರಳವಾದ ಮನೆ ಮದ್ದುಕೂಡ ಇದೆ. ಅದರ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಮನೆಮದ್ದಿಗೆ ಮುಖ್ಯವಾಗಿ ಜೀರಿಗೆ ಮತ್ತು ದಾಲ್ಚಿನ್ನಿಯನ್ನು ತೆಗೆದುಕೊಳ್ಳಬೇಕು. ಜೀರಿಗೆಯನ್ನು ಬಾಣಲೆಯಲ್ಲಿ ಸರಿಯಾಗಿ ಹುರಿದುಕೊಳ್ಳಬೇಕು. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಹಾಗೆಯೇ ದಾಲ್ಚಿನ್ನಿಯನ್ನು ಕೂಡ ಸರಿಯಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ಇವೆರಡನ್ನು ಬೇರೆಬೇರೆಯಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಜೀರಿಗೆ ಮತ್ತು ದಾಲ್ಚಿನಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಜೀರಿಗೆಯಿಂದ ಜೀರ್ಣಶಕ್ತಿಯು ಹೆಚ್ಚುತ್ತದೆ ಮತ್ತು ದೇಹದಲ್ಲಿರುವ ಮೆಟಬಾಲಿಕ್ ಅಂಶವು ಹೆಚ್ಚುತ್ತದೆ. ದೇಹದಲ್ಲಿರುವ ಕ್ಯಾಲೋರಿ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಇದರಿಂದಾಗಿ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಗ್ಯಾಸ್ಟ್ರಿಕ್, ಎಸಿಡಿಟಿ ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ದಾಲ್ಚಿನಿಯು ನಮ್ಮ ದೇಹದಲ್ಲಿರುವ ಗ್ಲುಕೋಸ್ ಮೆಟಬಾಲಿಸಂ ಅಂಶವನ್ನು 20% ಹೆಚ್ಚು ಮಾಡುವಲ್ಲಿ ಸಹಕರಿಸುತ್ತದೆ. ಇನ್ಸುಲಿನ್ ಫಂಕ್ಷನ್ ಹೆಚ್ಚಾಗುತ್ತದೆ. ಬಿಸಿ ನೀರಿಗೆ 1 ಚಮಚ ಜೀರಿಗೆ ಪುಡಿ ಮತ್ತು ದಾಲ್ಚಿನ್ನಿ ಪುಡಿಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಸೇವಿಸಬೇಕು. ಜೀರಿಗೆ ಮತ್ತು ದಾಲ್ಚಿನ್ನಿ ಪುಡಿ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಅತ್ಯುತ್ತಮ ಪರಿಣಾಮವನ್ನು ಕಾಣಬಹುದು.

ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಆಹಾರಸೇವನೆಗಿಂತ ಮುಂಚಿತವಾಗಿ ಸೇವಿಸಬೇಕು. ರಾತ್ರಿ ಊಟವಾದ ಅರ್ಧ ತಾಸಿನ ನಂತರ ಈ ಮಿಶ್ರಣವನ್ನು ಸೇವಿಸಬೇಕು. ಈ ಮಿಶ್ರಣವನ್ನು ಪ್ರತಿನಿತ್ಯ ಸೇವಿಸುವುದರಿಂದ ಏಳೇ ದಿನದಲ್ಲಿ ಉತ್ತಮ ಪರಿಣಾಮಗಳು ಕಂಡುಬರುತ್ತದೆ..ಈ ರೀತಿ ಮಾಡುವುದರಿಂದ ಹೊಟ್ಟೆಯ ಬೊಜ್ಜು, ಗ್ಯಾಸ್ಟ್ರಿಕ್, ಅಜೀರ್ಣತೆ ನಿವಾರಿಸಿಕೊಳ್ಳಬಹುದು. ಬಿಪಿ, ಶುಗರ್ ಇರುವವರೂ ಕೂಡ ಇದನ್ನು ಸೇವಿಸಬಹುದಾಗಿದೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗಲು ಸಹಕರಿಯಾದೆ. ಇಂತಹ ಸರಳವಾದ ಮನೆಮದ್ದನ್ನು ಬಳಸಿ ಬೊಜ್ಜಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

Leave A Reply

Your email address will not be published.