ಇವತ್ತಿನ ಕಾಲದಲ್ಲಿ ಯುವಕ ಯುವತಿಯರಿಗೆ ಯಾರಿಗೆ ತಾನೇ ಸುಂದರವಾಗಿ ಕಾಣೋಕೆ ಇಷ್ಟ ಆಗಲ್ಲ ಹೇಳಿ. ತಾನು ಸುಂದರವಾಗಿ ಕಾಣಬೇಕು ಅಂತ ಮಾಡದೆ ಇರುವ ಔಷಧಗಳು ಇಲ್ಲ ಚಿಕಿತ್ಸೆಗಳು ಇಲ್ಲಾ. ಮನುಷ್ಯ ಅಂತ ಹುಟ್ಟಿದ ಎಲ್ಲರಲ್ಲೂ ಈ ರೀತಿಯ ಭಾವನೆ ಇರುವುದು ಸಹಜ. ಹಾಗಾಗಿ ಇವತ್ತು ತಿಳಿಸಿಕೊಡುತ್ತಾ ಇರುವ ವಿಷಯ ಏನಪ್ಪಾ ಅಂದ್ರೆ, ಡಾರ್ಕ್ ಸರ್ಕಲ್. ಕಪ್ಪು ಕಲೆಗಳು ಹಾಗಂದ್ರೆ ಏನೂ ಈ ಕಪ್ಪು ಕಲೆಗಳು ಹೇಗೆ ಮತ್ತೆ ಯಾಕೆ ಆಗತ್ತೆ ಇದಕ್ಕೆ ಪರಿಹಾರ ಏನು ಅನ್ನೋದನ್ನ ನೋಡೋಣ.

ಕಣ್ಣಿನ ಕೆಳಗಡೆಯ ಚರ್ಮ ಕಪ್ಪಗೆ ಆಗುವುದನ್ನು ಡಾರ್ಕ್ ಸರ್ಕಲ್ ಅಂತ ಕರೀತೆವೆ ಇದು ಎಲ್ಲರಿಗೂ ಗೊತ್ತಿರುವುದೇ. ಹಾಗಾದ್ರೆ ಇದು ಯಾಕೆ ಆಗತ್ತೆ? ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆ ಆದಾಗ, ಸರಿಯಾದ ನಿದ್ದೆ ಆಗದೇ ಇರುವುದರಿಂದ, ಅವಶ್ಯಕಥೆಗಿಂತ ಹೆಚ್ಚು ಕೆಲಸ ಮಾಡು ಸುಸ್ತು ಮಾಡಿಕೊಳ್ಳುವುದರಿಂದ, ದೇಹಕ್ಕೆ ಸಾಕಷ್ಟು ನೀರಿನ ಅಂಶವನ್ನು ಒದಗಿಸದೆ ಇರುವುದು ಮತ್ತು ದೇಹಕ್ಕೆ ಬೇಕಾದ ಸಾಕಷ್ಟು ಪ್ರಮಾಣದ ಪ್ರೊಟೀನ್ ಮತ್ತು ಜೀವಸತ್ವಗಳನ್ನು ಒದಗಿಸದೆ ಇರುವುದು. ಈ ಎಲ್ಲಾ ಕಾರಣಗಳಿಂದ ನಮ್ಮ ಕಣ್ಣಿನ ಕೆಳ ಭಾಗದಲ್ಲಿ ಡಾರ್ಕ್ ಸರ್ಕಲ್ ಆಗತ್ತೆ. ಇವಲ್ಲದೆ ಇನ್ನೂ ಕೆಲವು ಮುಖ್ಯ ಅಂಶಗಳು ಎಂದರೆ, ಗೊತ್ತಿಲ್ಲದೆ ಅನಾವಶ್ಯವಕವಾಗಿ ಪ್ರತೀ ದಿನ ಸೌಂದರ್ಯ ವರ್ಧಕಗಳನ್ನು ಬಳಸುವುದು ಇದು ಒಂದು ಮುಖ್ಯ ಕಾರಣ. ಇವಿಷ್ಟು ಕಾರಣಗಳನ್ನು ನೋಡಿ ಆಯ್ತು ಆದ್ರೆ ವಿಚಿತ್ರ ಏನಪ್ಪಾ ಅಂದ್ರೆ ನಾವು ಡಾರ್ಕ್ ಸರ್ಕಲ್ ಗಳನ್ನ ಕಡಿಮೆ ಮಾಡಿಕೊಳ್ಳೋಕೆ ಅಂತ ಬೇರೆ ಔಷಧಿಗಳ ಮೊರೆ ಹೋಗಬೇಕಾಗಿಲ್ಲ. ಈ ಮೇಲಿನ ಕಾರಣಗಳಲ್ಲೇ ಮದ್ದು ಕೂಡಾ ಇದೆ. ಕಾರಣಗಳನ್ನ ಸರಿಯಾಗಿ ನೋಡಿಕೊಂಡು ಅವುಗಳನ್ನ ಬಿಡುತ್ತಾ ಬಂದರೆ ಡಾರ್ಕ್ ಸರ್ಕಲ್ ಕಡಿಮೆ ಆಗತ್ತೆ.

ಇದರ ಲಕ್ಷಣ ಏನು ಅಂತ ನೋಡೋದಾದ್ರೆ, ಹೆಸರೇ ಹೇಳತ್ತೆ ಡಾರ್ಕ್ ಸರ್ಕಲ್. ಕಣ್ಣಿನ ಕೆಲ ಭಾಗದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಕಪ್ಪಗೆ ಆಗುವುದು. ಕೆಲವೊಬ್ಬರಿಗೆ ಕೆಲವು ಸಂದರ್ಭಗಳಲ್ಲಿ ಇದು ಕಡಿತ, ಉರಿ ಕೂಡಾ ಉಂಟಾಗತ್ತೆ. ಕೆಲವು ಸಂದರ್ಭಗಳಲ್ಲಿ ಡಾರ್ಕ್ ಸರ್ಕಲ್ ಇರುವ ಚರ್ಮ ಮೃದುತ್ವ ಕಳೆದುಕೊಂಡು ಗಟ್ಟಿ ಆಗತ್ತೆ. ಇವು ಡಾರ್ಕ್ ಸರ್ಕಲ್ ನ ಲಕ್ಷಣಗಳು. ಹಾಗಾದ್ರೆ ಇದಕ್ಕೆ ಪರಿಹಾರ ಏನು? ಅಂತಾ ನೋಡೋದಾದ್ರೆ.

ಸುಲಭವಾದ ಮನೆ ಮದ್ದು ಇದು. ಯಾವಾಗಲು ಪ್ರಸನ್ನ ಚಿತ್ತರಾಗಿ ನಗು ಮುಖದಿಂದ ಇರಬೇಕು. ಆಗ ದೇಹದಲ್ಲಿ ಪ್ರೊಟೊಮೈನ್ ಹಾಗೂ ಸೇರೋಟಿನ್ ಎಂಬ ಹಾರ್ಮೋನುಗಳು ಉತ್ಪತ್ತಿ ಆಗುತ್ತವೆ. ಈ ತರದ ಹಾರ್ಮೋನುಗಳು ಉತ್ಪತ್ತಿ ಆದಲ್ಲಿ ಚರ್ಮದ ಆರೋಗ್ಯ ಒಳ್ಳೆಯದಾಗಿ ಇರತ್ತೆ. ಮಾನಸಿಕಾವಾಗಿ ಎಲ್ಲರೂ ಮಾಡಬಹುದಾದ ಒಂದು ಪರಿಹಾರ ಇದು. ಇನ್ನೂ ಆಹಾರ ಚಿಕಿತ್ಸೆಯನ್ನ ನೋಡುವುದಾದರೆ, ನಾವು ತೆಗೆದುಕೊಳ್ಳುವ ಆಹಾರದಲ್ಲಿ ದ್ರವ ಅಂಶ ಜಾಸ್ತಿ ಇರಬೇಕು. ಉಷ್ಣವನ್ನು ಕಡಿಮೆ ಮಾಡುವ ಆಹಾರವನ್ನು ಜಾಸ್ತಿ ತೆಗೆದುಕೊಳ್ಳಬೇಕು. ಸೌತೆಕಾಯಿ, ಕ್ಯಾರೆಟ್, ಬೀಟ್ರೂಟ್ ಮುಂತಾದ ಆಹಾರಗಳನ್ನು ಸೇವಸಬೇಕು. ಇನ್ನು ವಿಹಾರ ಚಿಕಿತ್ಸೆ ನೋಡುವುದಾದರೆ. ಬಿಸಿಲಿಗೆ ಜಾಸ್ತಿ ಮುಖವನ್ನು ಬಿಟ್ಟು ತಿರುಗಬಾರದು. ಇನ್ನೂ ಬಿಸಿಲಿಗೆ ಹೋಗದೆ ಇದ್ರೆ ಆಗೋದೇ ಇಲ್ಲ ನಾವು ವಿಸಿಲಲ್ಲೇ ಕೆಲಸ ಮಾಡೋದು ಅಂತ ಇದ್ರೆ ಅಂತವರು ಕಣ್ಣಿನ ಕೆಳಗೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಹೋಗಬೇಕು. ದೇಹದಲ್ಲಿ ಇರುವ ನೀರಿನ ಅಂಶ ಹೊರಗಡೆ ಹೋದಾಗ ಚರ್ಮ ಒಣಗುತ್ತೆ. ಇದರಿಂದ ಚರ್ಮ ಬಿಸಿಲಿಗೆ ಸುಟ್ಟು ಕಪ್ಪಗೆ ಆಗತ್ತೆ. ಹಾಗಾಗಿ ಎಣ್ಣೆ ಹಚ್ಚಿಕೊಂಡರೆ ನೀರಿನ ಅಂಶ ಹೊರಗಡೆ ಹೋಗೋಕೆ ಬಿಡಲ್ಲ. ಉದಾಹರಣೆಗೆ. ಎರಡು ಗಾಜಿನ ಲೋಟದಲ್ಲಿ ಒಂದೇ ಸಮಕ್ಕೆ ನೀರನ್ನ ಹಾಕಿ ಅರ್ಧ ಗಂಟೆ ಬಿಸಲಲ್ಲಿ ಇಟ್ಟು ಒಂದು ಲೋಟಕ್ಕೆ ನಾಲ್ಕೈದು ಹನಿ ಕೊಬ್ಬರಿ ಎಣ್ಣೆಯನ್ನ ಹಾಕಬೇಕು ಇನ್ನೊಂದು ಲೋಟಕ್ಕೆ ಎಣ್ಣೆ ಹಾಕಬಾರದು. ಅರ್ಧ ಗಂಟೆಯ ನಂತರ ಎರಡೂ ಲೋಟಗಳನ್ನೂ ಗಮನಿಸಿದರೆ, ಎಣ್ಣೆ ಹಾಕಿರದ ಲೋಟದ ನೀರು ಬಿಸಿಲಿನ ತಾಪಕ್ಕೆ ಆವಿಯಾಗಿ ಹೋಗಿರತ್ತೆ. ಎಣ್ಣೆ ಹಾಕಿದ ಲೋಟದಲ್ಲಿ ನೀರು ಹಾಗೇ ಇರತ್ತೆ ಆವಿ ಆಗಲ್ಲ. ಅದೇ ರೀತಿ ನಾವು ಚರ್ಮಕ್ಕೆ ಎಣ್ಣೆ ಹಚ್ಚಿದಾಗಲೂ ಕೂಡಾ ಒಳಗೆ ಇರುವ ಮೊಯಿಸ್ಚರ್ ಆವಿಯಾಗಿ ಹೋಗಲ್ಲ. ಆಗ ಚರ್ಮದ ಆರೋಗ್ಯ ಯಥಾ ಸ್ಥಿತಿಯಲ್ಲಿ ಇರತ್ತೆ. ಪ್ರತೀ ದಿನ ಕೆಮಿಕಲ್ಸ್ ಇರುವ ಮಾಯಿಶ್ಚರೈಸರ್ ಹಚ್ಚುವ ಬದಲು ಮನೆಯಲ್ಲೇ ಸಿಗುವ ನೈಸರ್ಗಿಕವಾದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ಬಹಳ ಉತ್ತಮ.

ಇನ್ನೊಂದು ಮನೆ ಮದ್ದು ಏನು ಅಂದರೆ, ಸೌತೆಕಾಯಿಯನ್ನು ಕಟ್ ಮಾಡಿಕೊಂಡು ಕಣ್ಣಿನ ಮೇಲೆ ಇಟ್ಟುಕೊಂಡು ಅರ್ಧ ಗಂಟೆ ಹಾಗೇ ಮಲಗಬೇಕು. ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯಬೇಕು. ಇದರಿಂದಲೂ ಕೂಡ ಡಾರ್ಕ್ ಸರ್ಕಲ್ ಕಡಿಮೆ ಆಗತ್ತೆ. ಟೊಮೆಟೊ ರಸವನ್ನು ಕಣ್ಣಿನ ಕೆಳ ಭಾಗದಲ್ಲಿ ಹಚ್ಚುವುದರಿಂದ ಸಹ ಹಂತ ಹಂತವಾಗಿ ಡಾರ್ಕ್ ಸರ್ಕಲ್ ಕಡಿಮೆ ಆಗತ್ತೆ. ಇದರ ಜೊತೆ ಜೊತೆಗೆ ಕಬ್ಬಿಣದ ಅಂಶ ಹೆಚ್ಚು ಇರುವ ಪದಾರ್ಥಗಳು, ಸೊಪ್ಪು, ಬೀಟ್ರೂಟ್ , ಕ್ಯಾರೆಟ್, ಕರಿಬೇವು ಇವುಗಳನ್ನು ಯಥೇಚ್ಛವಾಗಿ ಆಹಾರದ ರುಪದಲ್ಲಿ ತೆಗೆದುಕೊಳ್ಳುವುದರಿಂದ ಡಾರ್ಕ್ ಸರ್ಕಲ್ ಹಂತ ಹಂತವಾಗಿ ಕಡಿಮೆ ಆಗುತ್ತವೆ. ಈ ಎಲ್ಲಾ ಮನೆ ಮದ್ದುಗಳೂ ಕೂಡ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ.

By

Leave a Reply

Your email address will not be published. Required fields are marked *