ಸಾಮಾನ್ಯವಾಗಿ ಪಪ್ಪಾಯ ಹಣ್ಣು ಅಂದ್ರೆ ಬಳಹಷ್ಟು ಜನಕ್ಕೆ ಇಷ್ಟವಾಗುವಂಥ ಹಣ್ಣಾಗಿದೆ. ಈ ಹಣ್ಣಿನಲ್ಲಿ ಹತ್ತಾರು ಆರೋಗ್ಯಕಾರಿ ಅಂಶಗಳನ್ನು ಕಾಣಬಹುದು ಪಪ್ಪಾಯ ಹಣ್ಣು ಅಷ್ಟೇ ಅಲಲ್ದೆ ಇದರ ಬೀಜ ಎಲೆ ಕೂಡ ಔಷದಿ ಗುಣಗಳನ್ನು ಹೊಂದಿದೆ. ಬಾಯಿಯ ರುಚಿಗೆ ನಾನಾ ರೀತಿಯ ಜಂಕ್ ಫುಡ್ ಸೇವನೆ ಮಾಡುವ ಬದಲು ನೈಸರ್ಗಿಕ್ವಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದು ಅತಿ ಸೂಕ್ತ.

ಪಪ್ಪಾಯಹಣ್ಣು ದೇಹಕ್ಕೆ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸುವ ಜೊತೆಗೆ ಪುರುಷರಲ್ಲಿ ಕಾಡುವಂತ ನಾರಾ ದೌರ್ಬಲ್ಯ ಮುಂತಾದ ಸಮಸ್ಯೆ ನಿವಾರಿಸುವಂತ ಗುಣಗಳನ್ನು ಪಪ್ಪಾಯ ಹಣ್ಣಿನಲ್ಲಿ ಕಾಣಬಹುದಾಗಿದೆ. ಇನ್ನು ಇದರ ಬೀಜ ಕೂಡ ಔಷಧಿಯ ಗುಣಗಳನ್ನು ಹೊಂದಿದೆ.

ತಿಂಗಳ ಮುಟ್ಟಿನ ಸಮಯದಲ್ಲಿ ಆಗುವಂತ ನೋವು ನಿವಾರಿಸುತ್ತದೆ ಈ ಪಪ್ಪಾಯ ಬೀಜ ಹೌದು ಪಪ್ಪಾಯ ಬೀಜವನ್ನು ಸೇವನೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಹಾಗು ಸ್ನಾಯು ಸೆಳೆತ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಪಪ್ಪಾಯ ಹಣ್ಣಿನ ಬೀಜಗಳಲ್ಲಿ ಇರುವ ಪ್ರೋಟಿಯೋಲಿಟಿಕ್ ಎಂಜೈಮ್ ಕರುಳಿನ ಆರೋಗ್ಯ ಕಾಪಾಡುವ ಜೊತೆಗೆ ಕರುಳಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ, ಪ್ಯಾರಾಸೈಟ್‌ಗಳನ್ನು ದೇಹದಿಂದ ಹೊರ ಹಾಕಿ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ.

ಇನ್ನು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಕಾಯಿಲೆಗಳಿಂದ ದೂರ ಮಾಡುತ್ತದೆ. ದೇಹದ ತೂಕ ಇಳಿಸುವಲ್ಲಿ ಪಪ್ಪಾಯ ಉತ್ತಮ ಹಣ್ಣಾಗಿದೆ ಅನ್ನೋದನ್ನ ತಿಳಿಯಲಾಗಿದೆ. ಪುರುಷರಲ್ಲಿ ಪಲವತ್ತತೆ ಹೆಚ್ಚಿಸುವಲ್ಲಿ ಪಪ್ಪಾಯ ಉಪಯೋಗಕಾರಿ. ಪಪ್ಪಾಯ ಹಣ್ಣು ಸೇವನೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಮುಂದಾಗಿದೆ ಇದರ ಬೀಜಗಳು ಕೂಡ ಔಷಧಿಯ ಗುಣಗಳನ್ನು ಹೊಂದಿದೆ.

ಕೊನೆಯದಾಗಿ ಹೇಳುವುದಾದರೆ ಪಪ್ಪಾಯ ಬೀಜಗಳನ್ನು ನೇರವಾಗಿ ತಿನ್ನಲು ಆಗೋದಿಲ್ಲ, ಯಾಕೆಂದರೆ ಅಷ್ಟೊಂದು ಬೀಜಗಳನ್ನು ತಿನ್ನೋದ್ರಿಂದ ಕಹಿ ಅಂಶ ಮೂಡುತ್ತದೆ ಆದ್ದರಿಂದ ಪಪ್ಪಾಯ ಬೀಜಗಳನ್ನು ಮಿಕ್ಸರ್‌ನಲ್ಲಿ ಬ್ಲೆಂಡ್ ಮಾಡಿ ಜ್ಯೂಸ್, ಸ್ಮೂತೀಸ್ ಜೊತೆ ಸೇರಿಸಿ ಸೇವಿಸಬಹುದು. ಕಹಿಯನ್ನು ಹೊಡೆಯಲು ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು. ಇಲ್ಲದಿದ್ದಲ್ಲಿ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ರೊಟ್ಟಿ, ಚಪಾತಿ, ಕಷಾಯ ಮೂಲಕ ಸೇವನೆ ಮಾಡಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!