ಬೊಜ್ಜು ಅಥವಾ ಒಬೆಸಿಟಿ ಇದು ಇಂದು ಪ್ರಪಂಚದಲ್ಲೇ ಅತೀ ದೊಡ್ಡ ಮಾರಕ ಪಿಡುಗಿನಂತೆ ಕಾಡುತ್ತಾ ಇದೆ. ಮುಂದುವರೆದ ದೇಶಗಳಲ್ಲಿ ಅಂತೂ ಚಿಕ್ಕವರು ದೊಡ್ಡವರು ಎಂಬ ಬೇಧ ಭಾವ ಇಲ್ಲದೇ ಮೈ ಕರಗಿಸುವುದೆ ಒಂದು ದೊಡ್ಡ ಸಮಸ್ಯೆ ಆಗಿದೆ. ಹಿಂದಿನ ಕಾಲದಲ್ಲಿ ಎಷ್ಟೋ ವಯಸ್ಸು ಆದಮೇಲೆ ಊರಿನ ಯಾವುದೋ ಒಬ್ಬ ಶ್ರೀಮಂತನಿಗೆ ಬೊಜ್ಜು ಬರುತ್ತಿತ್ತು. ಎಲ್ಲರೂ ಸ್ಲಿಮ್ ಆಗಿ ಇರ್ತಾ ಇದ್ರು ಆದ್ರೆ ಈಗ…. ಅದಕ್ಕೆ ತದ್ವಿರುದ್ಧವಾಗಿ ಎಲ್ಲರೂ ಬೊಜ್ಜನ್ನು ಹೊಂದಿರುತ್ತಾ ಇದ್ದಾರೆ. ಬಹಳಷ್ಟು ಜನರು ಬೊಜ್ಜನ್ನು ಕರಗಿಸುವ ಸಲುವಾಗಿ ಯಾವ ಯಾವುದೋ ಡಾಕ್ಟರ್ ಗಳನ್ನ ಭೇಟಿ ಆಗ್ತಾರೆ ಟಿವಿ, ಪೇಪರ್ ಗಳಲ್ಲಿ ನೋಡಿದ ಔಷಧಿಗಳನ್ನು ಸಹ ಪ್ರಯೋಗ ಮಾಡಿನೋಡುತ್ತಾರೆ. ಆದರೆ ಅವೆಲ್ಲದರಲ್ಲು ಇರುವ ಒಂದು ಮುಖ್ಯವಾದ ಅಂಶ ಎಂದರೆ ಬೊಜ್ಜು ಹೆಚ್ಚು ಆಗೋಕೆ ಅಥವಾ ತೂಕ ಜಾಸ್ತಿ ಆಗೋಕೆ ಕಾರಣ ಏನು?? ಅನ್ನೋದು. ಕೆಲವರು ಹೇಳ್ತಾರೆ ಜಾಸ್ತಿ ತಿನ್ನೋದರರಿಂದ, ಜಂಕ್ ಫುಡ್ ತಿನ್ನುವುದರಿಂದ ಅಥವಾ ಎಕ್ಸಸೈಸ್ ಇಲ್ಲದೇ ಇರುವುದರಿಂದ ತೂಕ ಹೆಚ್ಚು ಆಗತ್ತೆ ಅಂತ,, ಇನ್ನೂ ಕೆಲವರು ಅತಿಯಾಗಿ ನಿದ್ದೆ ಮಾಡುವುದರಿಂದ ಅಂತ ಇನ್ನೂ ಕೆಲವರು ಅನುವಂಶೀಯತೆಯಿಂದ ತೂಕ ಹೆಚ್ಚು ಆಗತ್ತೆ ಅಂತ ಹೇಳ್ತಾರೆ. ಆದರೆ ಇವರೆಲ್ಲ ಹೇಳುತ್ತಾ ಇರುವುದು ನಿಜವಾಗಲೂ ನಿಜಾನಾ??? ನಿಜ. ಪೂರ್ತಿ ಸತ್ಯ ಅಲ್ಲದೇ ಹೋದರೂ ಸ್ವಲ್ಪ ಮಟ್ಟಿಗೆ ಅಂತೂ ಈ ಎಲ್ಲಾ ಮಾತುಗಳೂ ಸತ್ಯವೇ.

ಸಂಪೂರ್ಣ ಸತ್ಯ ಇಲ್ಲಿದೆ ನೋಡಿ. ನಮ್ಮ ಆಯುರ್ವೇದ ಸಿದ್ಧಾಂತದ ಪ್ರಕಾರ, ತೂಕ ಹೆಚ್ಚು ಆಗಲು ಮೂಲ ಕಾರಣ ಏನು ಅಂದ್ರೆ ಅಗ್ನಿ ಮಾಂದ್ಯ. ಇದಕ್ಕೆ ಕಾರಣ ಏನು ಅಗ್ನಿ ಮಾಂದ್ಯದಿಂದ ಹೊರಗೆ ಬರೋದು ಹೇಗೆ? ಅದನ್ನ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಅನ್ನೋದನ್ನ ನೋಡೋಣ.

ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ದೇವರು ನಮ್ಮ ದೇಹವನ್ನು ಸೃಷ್ಟಿ ಮಾಡಿದ್ದು ಆಹಾರವನ್ನು ನಾವು ತಿಂದ ಮೇಲೆ ಹೊಟ್ಟೆಗೆ ಹೋಗಿ, ಅಗ್ನಿ ದೀಪ್ತಿ ಆಗಬೇಕು ಅದರಿಂದ ನಾವು ತಿಂದ ಆಹಾರ ಎರಡು ಭಾಗ ಆಗಬೇಕು. ಒಂದು ಸಾರ ಭಾಗ ಹಾಗೂ ಇನ್ನೊಂದು ಕೆಟ್ಟ ಭಾಗ. ಸಾರಾ ಭಾಗ ಇದು ರಕ್ತಕ್ಕೆ ಸೇರಬೇಕು. ಇದು ರಕ್ತದಲ್ಲಿ ಸೇರಿ ಪ್ರತಿಯೊಂದು ಧಾತುವಿಗೂ ಶಕ್ತಿಯನ್ನು ನೀಡಬೇಕು. ಇನ್ನೊಂದು ಕೆಟ್ಟ ಭಾಗವು ಬೇಡವಾದ ಪದಾರ್ಥ ಆಗಿದ್ದು ಇದು ಮಲದ ರೂಪದಲ್ಲಿ ತ್ಯಾಜ್ಯ ವಸ್ತುವಾಗಿ ದೇಹದಿಂದ ಹೊರ ಹೋಗಬೇಕು. ಈ ತರ ನಮ್ಮ ದೇಹವನ್ನು ದೇವರು ಸೃಷ್ಟಿ ಮಾಡಿದ್ದಾರೆ.

ಒಂದು ವೇಳೆ ನಮ್ಮ ದೇಹದಲ್ಲಿ ಜಠರಾಗ್ನಿ ಸರಿಯಾಗಿ ಕಾರ್ಯ ನಿರ್ವಹಿಸದೇ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೇ ಇದ್ದರೆ ಒಂದು ಕಡೆ ಸಾರಾ ಭಾಗವೂ ಉತ್ಪತ್ತಿ ಆಗಲ್ಲ ಹಾಗೇ ಕಿಟ್ಟ ಭಾಗವೂ ಉತ್ಪತ್ತಿ ಆಗುವುದಿಲ್ಲ. ಹೀಗೆ ಸಾರಾ ಭಾಗವೂ ಆಗದೇ ಕಿಟ್ಟ ಭಾಗವೂ ಆಗದೇ ಇರುವ ಅಂಶವನ್ನು ಆಮ ಎನ್ನುತ್ತೇವೆ. ಹೀಗೆ ಆದಾಗ ದೇಹ ಬೇಕಾದ ಅಂಶಗಳನ್ನು ರಕ್ತಕ್ಕೂ ಬೇಡವಾದ ವಸ್ತುಗಳನ್ನು ಮಲದ ರೂಪದಲ್ಲಿ ಹೊರಗೆ ಹಾಕುವುದಕ್ಕೆ ಹೊಂದಿಕೊಂಡು ಇರತ್ತೆ ಹೀಗೆ ಆದಾಗ ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತದೆ. ಎಲ್ಲಿ ಯಾವುದಕ್ಕೆ ಕಳುಹಿಸಬೇಕು ಎಂದು ತಿಳಿಯದೇ ಅರ್ಧ ಜೀರ್ಣವಾದ ಆಹಾರವನ್ನು ದೇಹದಲ್ಲಿ ಹಾಗೆಯೇ ಲಿವರ್ ನಲ್ಲಿ ಶೇಖರಿಸುತ್ತಾ ಹೋಗುತ್ತದೆ. ಲಿವರ್ ನಲ್ಲಿ ಶೇಖರಿಸಿ ತುಂಬಿದ ನಂತರ ದೇಹದ ಉಳಿದೆಲ್ಲ ಭಾಗಗಳಿಗೂ ಕೂಡಾ ಈ ಅರ್ಧ ಜೀರ್ಣ ಆದ ಆಹಾರವನ್ನು ಶೇಖರಣೆ ಮಾಡುತ್ತಾ ಹೋಗುತ್ತದೆ. ನಾವು ತೆಗೆದುಕೊಂಡ ಆಹಾರ ಜೀರ್ಣ ಆಗಿ ಮತ್ತೆ ಹೊರಗೆ ಹೋಗಲೇಬೇಕು. ಕ್ಯಾಲೋರಿ ಆಗಿ ಪರಿವರ್ತನೆ ಆಗಬೇಕು. ಆಮ ನಮ್ಮ ದೇಹದಲ್ಲಿ ಎಲ್ಲ ಕಡೆ ಶೇಖರಣೆ ಆಗುತ್ತಾ ಹೋಗಿ ಅದೇ ಕೊನೆಗೆ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಆಗಿ ಏರುತ್ತಾ ಹೋಗುತ್ತದೆ. ಆಗ ನಮ್ಮ ದೇಹದ ತೂಕ ನಾವು ಯಾವುದೇ ಆಹಾರವನ್ನು ಸೇವನೆ ಮಾಡದೇ ಹೋದರೂ ಸಹ ದೇಹದ ತೂಕ ಹೆಚ್ಚುತ್ತದೆ. ಹಾಗಾಗಿ ಎಷ್ಟೇ ಏನೇ ತಿಂದರೂ ದೇಹದ ತೂಕ ಹೆಚ್ಚು ಆಗೋದು ಅನ್ನೋ ಮಾತು ಸುಳ್ಳು ಆಯಿತು. ಅನುವಂಶೀಯತೆಯಿಂದಲೂ ಸಹ ನಮ್ಮ ದೇಹದ ತೂಕ ಹೆಚ್ಚುತ್ತದೆ ಎನ್ನುವುದೂ ಕೂಡಾ ಸುಳ್ಳು.

ಮುಖ್ಯವಾಗಿ ಬೇಕಾಗಿರುವುದು ಜಠರಾಗ್ನಿ ಯಾವಾಗ ಜಠರಾಗ್ನಿ ಮಂದ ಆಗುತ್ತದೆಯೋ ಆಗ ಶೇಖರಿಸಲ್ಪಟ್ಟ ಶಕ್ತಿಯೂ ಹೆಚ್ಚುತ್ತದೆಯೋ ಆಗೆಲ್ಲ ನಮ್ಮ ದೇಹದ ತೂಕ ಹೆಚ್ಚುತ್ತದೆ. ಹಾಗಾದ್ರೆ ಇದನ್ನ ಕಡಿಮೆ ಮಾಡೋದು ಹೇಗೆ? ಇದಕ್ಕೆ ಒಂದು ಶ್ಲೋಕ ಇದೆ.

ಭೋಜನಾಗ್ರೆ ಆರ್ದ್ರಕ ಸೈಂದವ ಉಜ್ಯತೇ ಅಂದರೆ ಭೋಜನದ ಮೊದಲು ಹಸಿ ಶುಂಠಿಯನ್ನು ಸಣ್ಣ ಭಾಗದಷ್ಟು ಕಟ್ ಮಾಡಿ ಅದರ ಮೇಲೆ ಸೈಂಧವ ಲವಣವನ್ನು ಇಟ್ಟು ಅದನ್ನ ನಾಲಿಗೆಯ ಮೇಲೆ ಇಟ್ಟುಕೊಂಡು ಚಪ್ಪರಿಸಿ ತಿನ್ನಬೇಕು. ಇದರಿಂದ ದೇಹದ ಜಠರಾಗ್ನಿ ದೀಪ್ತಿ ಆಗತ್ತೆ. ಒಮ್ಮೆ ಇದನ್ನ ಪ್ರಯತ್ನಿಸಿ ನೀಡಿದರೆ ಅನುಭವಕ್ಕೆ ಬರತ್ತೆ ನಾಲಿಗೆಯ ಮೇಲೆ ಶುಂಠಿ ಮತ್ತೆ ಸೈಂಧವ ಲವಣ ವನ್ನು ಸೇರಿಸಿ ಇಟ್ಟಾಗ ಆಗುವ ಹಸಿವು. ಯಾವಾಗ ನಾವು ತಿ ದ ಆಹಾರ ಸರಿಯಾಗಿ ಜೀರ್ಣ ಆಗತ್ತೋ ಆಗ ಸಾರಾ ಭಾಗ ಮತ್ತು ಕಿಟ್ಟ ಭಾಗ ಬೇರೆ ಬೇರೆ ಆಗತ್ತೆ. ಸಾರಾ ಭಾಗ ಪೂರ್ತಿ ರಕ್ತದಲ್ಲಿ ಸೇರತ್ತೆ ಹಾಗೇ ಕಿಟ್ಟ ಭಾಗ ಸಂಪೂರ್ಣವಾಗಿ ಮಲದ ರೂಪದಲ್ಲಿ ತ್ಯಾಜ್ಯವಾಗಿ ಹೊರಗೆ ಹೋಗುತ್ತದೆ. ಆಗ ನಮ್ಮ ದೇಹವೂ ಸರಿಯಾಗಿ ಇರತ್ತೆ. ಆಗ ದೇಹದಲ್ಲಿ ಆಮಾ ಉತ್ಪತ್ತಿ ಕೂಡಾ ಆಗಲ್ಲ. ಕೆಟ್ಟ ಕೊಬ್ಬಿನ ಅಂಶ ಕೂಡಾ ಉತ್ಪತ್ತಿ ಆಗಲ್ಲ. ಯಾವಾಗ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಉತ್ಪತ್ತಿ ಆಗದೇ ಸರಿಯಾಗಿ ಜೀರ್ಣ ಆಗತ್ತೊ ಆಗ ಬೊಜ್ಜಿನ ಅಂಶ ಕೂಡ ನಮ್ಮ ದೇಹಕ್ಕೆ ಬಂದು ಸೇರಲ್ಲ.

ಹಾಗಾಗಿ ನಮ್ಮ ಶಕ್ತಿ ಮೀರಿ ವ್ಯಾಯಾಮ ಮಾಡಿ ಮೂಳೆ ಸವೆಸುವುದಕ್ಕಿಂತಲೂ , ಉಪವಾಸ ಮಾಡಿ ಬೇರೆ ಬೇರೆ ಖಾಯಿಲೆಗಳಿಗೆ ಆಹ್ವಾನ ನೀಡುವುದಕ್ಕಿಂತಲೂ ಊಟದ ಮೊದಲು ಸ್ವಲ್ಪ ಶುಂಠಿ ಚೂರಿನ ಮೇಲೆ ಸ್ವಲ್ಪ ಸೈಂಧವ ಕವನವನ್ನು ಇಟ್ಟುಕೊಂಡು ತಿನ್ನುವುದು ಒಳ್ಳೆಯದು. ಇದರಿಂದ ನಾವು ಕಳೆದುಕೊಳ್ಳುವುದು ಏನೂ ಇರಲ್ಲ. ನಮ್ಮ ದೇಹದ ಜೀರ್ಣ ಶಕ್ತಿ ಸರಿಯಾಗಿ ಆಗುತ್ತದೆ. ಕೆಲವೊಂದು ಸಮಯದಲ್ಲಿ ನಮ್ಮ ದೇಹದ ತೂಕ ಹೆಚ್ಚು ಆಗಲು ನಮ್ಮ ದೇಹದ ಥೈರಾಯಿಡ್ ಸಮಸ್ಯೆ ಕೂಡಾ ಮುಖ್ಯಾವಾಗಿ ಇರಬಹುದು. ಹಾಗಾಗಿ ಈ ಮನೆ ಮದ್ದನ್ನು ಮಾಡಿದ್ರೂ ಕಡಿಮೆ ಆಗದೇ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *