ಮನುಷ್ಯನಿಗೆ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ, ಅದರಿಂದ ಪರಿಹಾರ ಕಂಡುಕೊಳ್ಳಲಿ ಇಂಗ್ಲಿಷ್ ಔಷಧಿಗಳನ್ನು ಹೆಚ್ಚಾಗಿ ಬಳಸುವುದರಿಂದ ಅಡ್ಡ ಪರಿಣಾಮ ಬೀರಬಹುದು ಆದ್ದರಿಂದ ಯಾವುದೇ ಅಡ್ಡ ಪರಿಣಾಮ ಬೀರದಂತೆ ಪರಿಹಾರ ಕಂಡುಕೊಳ್ಳಲು ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿ ಸಸ್ಯ, ಗಿಡಗಳನ್ನು ಬಳಸಿ ಪರಿಹಾರ ಕಾಣುವುದು ಸೂಕ್ತವಾಗಿದೆ.

ಶುಂಠಿ ಯಾವೆಲ್ಲ ಸಮಸ್ಯೆಗಳಿಗೆ ಹೇಗೆ ಪರಿಹಾರ ಒದಗಿಸುತ್ತದೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ, ಶುಂಠಿಯಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತ ಆರೋಗ್ಯಕರ ಅಂಶಗಳನ್ನು ಕಾಣಬಹುದು ಅಲ್ಲದೆ ಇದು ದೈಹಿಕ ಸಮಸ್ಯೆಗಳಿಗೆ ಔಷಧಿಯಾಗಿ ಕೂಡ ಕೆಲಸ ಮಾಡುತ್ತದೆ.

ನಿಮಗೆ ಗಂಟಲು ಕಟ್ಟುವಿಕೆ ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಹೇಗೆ ಅನ್ನೋದನ್ನ ನೋಡುವುದಾದರೆ ಹಸಿ ಶುಂಠಿ ಹಾಗು ಲವಂಗ ಮತ್ತು ಅಡುಗೆಗೆ ಬಳಸುವಂತ ಉಪ್ಪನ್ನು ಸ್ವಲ್ಪ ಪ್ರಮಾಣದಲ್ಲಿ ತಗೆದುಕೊಂಡು ಅವುಗಳನ್ನು ಬಾಯಲ್ಲಿ ಹಾಕಿಕೊಂಡು ಚಪ್ಪರಿಸುವುದರಿಂದ ಗಂಟಲುಕಟ್ಟುವಿಕೆ ಸಮಸ್ಯೆ ನಿವಾರಣೆಯಾಗುವುದು.

ಜ್ವರ ನೆಗಡಿ ನಿಮ್ಮನ್ನು ಕಾಡುತ್ತಿದ್ದರೆ ಶುಂಠಿ ಕಷಾಯವನ್ನು ಮಾಡಿ ಕುಡಿಯೋದ್ರಿಂದ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಶುಂಠಿ ಕಷಾಯವನ್ನು ಮಾಡಿ ದಿನಕ್ಕೆ ೨ ರಿಂದ ೩ ಬಾರಿ ಸೇವನೆ ಮಾಡಬೇಕು.

ಮನುಷ್ಯ ಅಂದ್ರೆ ಹಲವು ದುಶ್ಚಟಗಳು ಇರುತ್ತವೆ ಆದ್ರೆ ಕೆಲವರು ಯಾವುದೇ ಚಟಗಳನ್ನು ಮಾಡದೇ ಇರುವಂತವರ ಬಾಯಿ ಹೆಚ್ಚಾಗಿ ವಾಸನೆ ಬರುತ್ತದೆ ಅಂತವರು ಶುಂಠಿಯನ್ನು ಹೀಗೆ ಬಳಸಿ ಬಾಯಿ ವಾಸನೆ ಬರದಂತೆ ಮಾಡಿಕೊಳ್ಳಬಹುದಾಗಿದೆ. ಶುಂಠಿಯನ್ನು ಸುಟ್ಟು ಬೂಧಿ ಮಾಡಿಟ್ಟುಕೊಂಡು, ಅದಕ್ಕೆ ಸ್ವಲ್ಪ ಉಪ್ಪು ಬೆರಸಿಕೊಂಡು ಹಲ್ಲು ಉಜ್ಜಿದರೆ ಬಾಯಿ ವಾಸನೆ ಬಾ ಅಂದ್ರು ಬರೋದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!