ನೈಸರ್ಗಿಕವಾಗಿ ಸಿಗುವಂತ ಹತ್ತಾರು ಹಣ್ಣು ತರಕಾರಿ ಮಸಾಲೆ ಪದಾರ್ಥಗಳು ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುತ್ತವೆ, ಅಷ್ಟೇ ಅಲ್ಲದೆ ದೇಹಾ ಬೆಳವಣಿಗೆಗೆ ಹಾಗೂ ಅರೋಗ್ಯ ವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಅದೇ ನಿಟ್ಟಿನಲ್ಲಿ ಏಲಕ್ಕಿ ಅಡುಗೆಗೆ ಅಷ್ಟೇ ಅಲ್ಲದೆ ಇನ್ನು ಹಲವು ಉಪಯೋಗಗಳನ್ನು ಹೊಂದಿದೆ ಹಾಗೂ ಸಾಮಾನ್ಯವಾಗಿ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಾಡುವಂತ ನಿಶ್ಯಕ್ತಿ ನಿವಾರಣೆಗೆ ಏಲಕ್ಕಿ ಪೂರಕವಾಗಿ ಕೆಲಸ ಮಾಡುತ್ತದೆ ಅದು ಹೇಗೆ ಅನ್ನೋದನ್ನ ಇಲ್ಲಿ ನೋಡಿ.

ಅಜೀರ್ಣತೆ ನಿವಾರಿಸುವ ಏಲಕ್ಕಿ: ಸೇವನೆ ಮಾಡುವಂತ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ರೆ ಹತ್ತಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಊಟದ ನಂತರ ಒಂದೆರಡು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಜಗೆದು ತಿನ್ನುವುದರಿಂದ ಅಜೀರ್ಣತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ರಾತ್ರಿ ಮಲಗುವ ಮುನ್ನ ಒಂದೆರಡು ಏಲಕ್ಕಿ ಜಗಿದು ತಿಂದು ಮಲಗುವುದರಿಂದ ಸುಖವಾದ ನಿದ್ರೆ ನಿಮ್ಮದಾಗುತ್ತದೆ.

ಪ್ರತಿದಿನ ಒಂದೆರಡು ಏಲಕ್ಕಿಯನ್ನು ಬೆಳಗ್ಗೆ ಸಮಯದಲ್ಲಿ ಬಾಯಲ್ಲಿ ಹಾಕಿಕೊಳ್ಳುವುದರಿಂದ ಇಡೀ ದಿನ ಲವಲವಿಕೆಯಿಂದಿರಲು ಸಹಾಯಕವಾಗುತ್ತದೆ. ಒತ್ತಡ ನಿವಾರಣೆಯಾಗುತ್ತದೆ. ಇನ್ನು ಏಲಕ್ಕಿಯನ್ನು ನಿಶ್ಯಕ್ತಿ ನಿವಾರಣೆಗೆ ಹೇಗೆ ಬಳಸಬೇಕು ಅನ್ನೋದನ್ನ ನೋಡುವುದಾದರೆ

ಬಿಸಿಹಾಲಿನಲ್ಲಿ ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಅರಿಶಿನ ಪುಡಿ ಬೆರಸಿ ಸೇವನೆ ಮಾಡಿದ್ರೆ ನಿಶಕ್ತಿ ನಿವಾರಣೆಯಾಗುತ್ತದೆ. ಇದನ್ನು ಪ್ರತಿದಿನ ಮಾಡುವುದರಿಂದ ಫಲಿತಾಂಶ ಕಾಣಬಹುದು. ಹೀಗೆ ಹತ್ತಾರು ಲಾಭಗಳನ್ನು ಮಸಾಲೆ ಪದಾರ್ಥವಾದ ಏಲಕ್ಕಿಯಿಂದ ಪಡೆಯಬಹುದಾಗಿದೆ.

By

Leave a Reply

Your email address will not be published. Required fields are marked *