ಮಾರುಕಟ್ಟೆಗೆ ಹೋದರೆ ಎಲ್ಲ ತರಕಾರಿಗಳ ಮಧ್ಯದಲ್ಲಿ ಒಂದಷ್ಟು ಕ್ಯಾಪ್ಸಿಕಂ ಅಥವಾ ದಪ್ಪಮೆಣಸಿನಕಾಯಿ ರಾಶಿ ಕಾಣಸಿಗುತ್ತದೆ ಚಳಿಗಾಲದಲ್ಲಿ ದಪ್ಪಮೆಣಸಿನಕಾಯಿಗೆ ತುಂಬಾ ಬೇಡಿಕೆ ಇದೆಯಂತೆ. ಇದನ್ನು ಬಳಸುವುದಕ್ಕೆ ಮುಖ್ಯ ಕಾರಣ ಇದನ್ನು ಬಳಸುವುದರಿಂದ ಅಡುಗೆಯ ಸ್ವಾದ ಹೆಚ್ಚಾಗುತ್ತದೆ ಎನ್ನುವುದು ಒಂದು ಕಾರಣವಾದರೆ ವಿಟಮಿನ್ ಸಿ ಸಿಗುತ್ತದೆ ಎನ್ನುವುದು ಇನ್ನೊಂದು ಕಾರಣ. ಈ ತರಕಾರಿ ಸ್ವಲ್ಪ ದುಬಾರಿಯಾದರೂ ಪರವಾಗಿಲ್ಲ ಆರೋಗ್ಯಕ್ಕೆ ಬೇಕಾಗುವಂತಹ ಗುಣಗಳನ್ನು ಹೊಂದಿರುವುದರಿಂದ ಜನರು ಇದನ್ನು ಖರೀದಿಸುತ್ತಾರೆ. ಹೀಗಾಗಿ ದಪ್ಪಮೆಣಸಿನಕಾಯಿ ಪ್ರತಿಯೊಬ್ಬರ ಆಯ್ಕೆಯ ತರಕಾರಿಯಲ್ಲಿ ಮೊದಲ ಸ್ಥಾನದಲ್ಲಿದೆ. ದಪ್ಪ ಮೆಣಸಿನಕಾಯಿಯನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯದಾಯಕ ಲಾಭಗಳು ಉಂಟಾಗುತ್ತದೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಬಹುಶಹ ದಪ್ಪಮೆಣಸಿನಕಾಯಿ ಎಂದರೆ ಯಾರು ಮುಖವನ್ನು ಸಿಂಡರಿಸುವುದಿಲ್ಲ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇದೊಂದು ಆರೋಗ್ಯಕಾರಿ ತರಕಾರಿ ಎಂಬ ನಂಬಿಕೆ ಎಲ್ಲರಲ್ಲಿಯೂ ಇದೆ ದಪ್ಪ ಮೆಣಸಿನಕಾಯಿ ಸಹ ಈ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳಬಹುದು. ಏಕೆಂದರೆ ಸ್ವತಹ ಆರೋಗ್ಯ ತಜ್ಞರು ಹೇಳುವಂತೆ ದಪ್ಪಮೆಣಸಿನಕಾಯಿಯಲ್ಲಿ ಇರುವ ಆರೋಗ್ಯಕಾರಿ ಪ್ರಯೋಜನಗಳು ಒಂದೆರಡಲ್ಲ.

ದಪ್ಪಮೆಣಸಿನಕಾಯಿಯಿಂದ ಅಪಾರ ಪ್ರಮಾಣದ ಪೌಷ್ಟಿಕಾಂಶಗಳು ವಿಟಮಿನ್ ಅಂಶಗಳು ಖನಿಜಾಂಶಗಳು ಸಿಗುತ್ತವೆ. ದಪ್ಪಮೆಣಸಿನಕಾಯಿ ಒಂದೊಂದು ಬಣ್ಣದಲ್ಲಿ ಬರುವುದರಿಂದ ಪ್ರತಿಯೊಂದು ಬಣ್ಣದ ಕ್ಯಾಪ್ಸಿಕಂ ತನ್ನದೇ ಆದ ಗುಣವನ್ನು ಹೊಂದಿರುತ್ತದೆ. ಕೆಂಪು ಬಣ್ಣದ ಟೊಮೇಟೊ ಹಾಗೆ ಕಾಣಿಸುವ ಕೆಂಪು ಕ್ಯಾಪ್ಸಿಕಂ ತನ್ನಲ್ಲಿ ಲೈಕೋಪಿನ್ ಅಂಶ ವನ್ನು ಹೊಂದಿದೆ ಇದು ಮನುಷ್ಯನಲ್ಲಿ ಕ್ಯಾನ್ಸರ್ ಸಮಸ್ಯೆ ನಿಯಂತ್ರಣದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ.

ಹಸಿರು ಬಣ್ಣದ ಕ್ಯಾಪ್ಸಿಕಂ ಸಿಲಿಕಾನ್ ಅಂಶವನ್ನು ಒಳಗೊಂಡಿದೆ ಇದು ತಲೆ ಕೂದಲು ಹಾಗೂ ಉಗುರುಗಳ ಬೆಳವಣಿಗೆಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಅದೇ ರೀತಿಯಾಗಿ ಹಳದಿ ಬಣ್ಣದ ಕ್ಯಾಪ್ಸಿಕಂ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲ್ಯೂಟನ್ ಅಂಶವನ್ನು ಹೊಂದಿದೆ. ಹೆಚ್ಚಿನವರಿಗೆ ತರಕಾರಿಗಳ ಸಾಂಬಾರ್ ಪಲ್ಲೆ ಎಂದರೆ ಇಷ್ಟವಾಗುವುದಿಲ್ಲ ಸರಿಯಾಗಿ ಊಟವನ್ನು ಕೂಡ ಮಾಡುವುದಿಲ್ಲ. ಅದೇ ಮಾಂಸದ ಅಡುಗೆ ಇದ್ದರೆ ಚೆನ್ನಾಗಿ ತಿನ್ನುತ್ತಾರೆ ಇದೇ ಕಾರಣಕ್ಕೆ ಕೆಲವೊಂದು ಸಮಸ್ಯೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ.

ಅದರಲ್ಲಿ ಬೊಜ್ಜು ಹಾಗೂ ಮಧುಮೇಹ ಸಮಸ್ಯೆ ಕೂಡ ಒಂದು. ಬೊಜ್ಜು ಸಮಸ್ಯೆ ಇದ್ದರೆ ಅಥವಾ ಕುಟುಂಬದಲ್ಲಿ ಯಾರಿಗಾರು ಮಧುಮೇಹದ ಸಮಸ್ಯೆ ಇದ್ದರೆ ಅಂಥವರು ದಪ್ಪ ಮೆಣಸಿನಕಾಯಿಯನ್ನು ಸೇವನೆ ಮಾಡುವುದರಿಂದ ಅದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಜೊತೆಗೆ ಮಧುಮೇಹವನ್ನು ಕಡಿಮೆ ಮಾಡುತ್ತದೆ ಇದು ಕೊಬ್ಬು ಕರಗಿಸುವ ಪ್ರಕ್ರಿಯೆಯನ್ನು ಉತ್ತೇಜಿಸುವುದು ಮತ್ತು ಚಯಾಪಚಯವನ್ನು ವೃದ್ಧಿಸುವುದು. ಹೀಗಾಗಿ ಬೋಜ್ಜನ ನಿಯಂತ್ರಿಸಬಹುದು ಜೊತೆಗೆ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಹಸಿರು ಬಣ್ಣದ ಕ್ಯಾಪ್ಸಿಕಂ ಗಿಂತ ಹಳದಿ ಬಣ್ಣದ ಕ್ಯಾಪ್ಸಿಕಂ ಉತ್ತಮ ಎಂದು ಅಧ್ಯಯನವು ಹೇಳುತ್ತವೆ. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು ಮಧುಮೇಹಿಗಳು ಬೇಯಿಸಿದ ಕ್ಯಾಪ್ಸಿಕಂ ಸೇವನೆಗಿಂತ ಹಸಿಯಾದ ಕ್ಯಾಪ್ಸಿಕಂ ಸೇವನೆ ಮಾಡುವುದು ಒಳ್ಳೆಯದು. ದೇಹದಲ್ಲಿ ನೋವು ಅಥವಾ ಸೆಳೆತ ಇದ್ದರೆ ಆಗ ನೀವು ಕ್ಯಾಪ್ಸಿಕಂನ್ನು ಸೇವನೆ ಮಾಡುವುದರಿಂದ ಅದು ನಿಮ್ಮ ದೇಹದಲ್ಲಿರುವ ನೋವನ್ನು ಬೆನ್ನುಹುರಿ ತಲುಪುವುದಕ್ಕೆ ಬಿಡುವುದಿಲ್ಲ ಇದು ದೇಹಕ್ಕೆ ಯಾವುದೇ ಹಾನಿ ಮಾಡದೆ ನೋವುನಿವಾರಕ ದಂತೆ ಕೆಲಸ ಮಾಡುತ್ತದೆ.

ಈ ರೀತಿಯಾಗಿ ಕ್ಯಾಪ್ಸಿಕಂ ತನ್ನಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳನ್ನು ಹೊಂದಿದ್ದು ಮನುಷ್ಯನ ದೇಹಕ್ಕೆ ಬೇಕಾಗುವಂತಹ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ನೀವು ಕೂಡ ನಿಮ್ಮ ಆಹಾರ ಪದ್ಧತಿಯಲ್ಲಿ ಕ್ಯಾಪ್ಸಿಕಂ ಬಳಕೆಯನ್ನು ಮಾಡಿ ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

Leave a Reply

Your email address will not be published. Required fields are marked *