ನಾವಿಂದು ಯಾವ ಏಲಕ್ಕಿ ಇಂದ ಯಾವ ರೀತಿಯ ಆರೋಗ್ಯಕಾರಿ ಪ್ರಯೋಜನಗಳು ಸಿಗುತ್ತವೆ ಎಂಬುದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಏಲಕ್ಕಿಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ ಹೆಮ್ಮೆಯ ವಿಚಾರ ಏನೆಂದರೆ ಏಲಕ್ಕಿ ಹುಟ್ಟಿದ್ದು ಭಾರತದಲ್ಲಿ. ಆದರೆ ಈಗ ಇದು ಪ್ರಪಂಚದ ಎಲ್ಲ ಕಡೆಗಳಲ್ಲಿ ಸಿಗುತ್ತದೆ ಭಾರತದ ಮಸಾಲೆ ಪದಾರ್ಥಗಳಲ್ಲಿ ಏಲಕ್ಕೆ ಕೂಡ ಒಂದಾಗಿದೆ. ಏಲಕ್ಕಿ ಒಳಗೊಂಡಿರುವ ಪೋಷಕಾಂಶಗಳ ಬಗ್ಗೆ ನೋಡುವುದಾದರೆ ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಪಾಸ್ಪರಸ್ ಕಬ್ಬಿಣ ಅಂಶ ಕಾರ್ಬೋಹೈಡ್ರೇಟ್ ಫೈಬರ್ ಮತ್ತು ಪ್ರೊಟೀನ್ ಅಂಶಗಳು ಹೇರಳವಾಗಿವೆ. ಈ ಎಲ್ಲಾ ಅಂಶಗಳು ಇದರಲ್ಲಿ ಇರುವುದರಿಂದ ಇದನ್ನು ಕೇವಲ ಆಹಾರ ಪದಾರ್ಥವನ್ನಾಗಿ ಮಾತ್ರ ಬಳಸದೆ ಆಯುರ್ವೇದದಲ್ಲಿ ಇದನ್ನು ಔಷಧೀಯ ವಸ್ತುವನ್ನಾಗಿ ಬಳಸುತ್ತಾರೆ.

ಏಲಕ್ಕಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ನೋಡುವುದಾದರೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ನಮ್ಮ ಹೃದಯಕ್ಕೆ ಸಂಬಂಧಿಸಿದ ಆರೋಗ್ಯವನ್ನು ಕಾಪಾಡುತ್ತದೆ. ಹೈಬಿಪಿ ಅಥವಾ ಅಧಿಕ ರಕ್ತದೊತ್ತಡ ಇರುವವರು ತಮ್ಮ ಆಹಾರದಲ್ಲಿ ಆಗಾಗ ಏಲಕ್ಕಿ ಸೇವಿಸಬೇಕು ಇದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಅದು ನಿಯಂತ್ರಣಕ್ಕೆ ಬರುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಹೆಚ್ಚುತ್ತದೆ ಮತ್ತು ಮಧುಮೇಹ ಮತ್ತು ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಏಲಕ್ಕಿ ಸೇವನೆ ಆರೋಗ್ಯಕರವಾಗಿದೆ.

ಏಲಕ್ಕಿ ಸೇವನೆಯಿಂದ ಇನ್ಸುಲಿನ್ ಕಾರ್ಯಗಳು ವೃದ್ಧಿಯಾಗುತ್ತದೆ ಇನ್ಸುಲಿನ್ ಕೆಲಸವೇ ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದು ಏಲಕ್ಕಿ ಸೇವನೆಯಿಂದ ನಮ್ಮ ದೇಹದ ರಕ್ತದ ಪ್ರಮಾಣ ಸರಿಯಾಗಿರುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಏಲಕ್ಕಿಯನ್ನು ಸೇವಿಸುವುದು ಬಹಳ ಒಳ್ಳೆಯದು. ಏಲಕ್ಕಿ ಸೇವನೆಯಿಂದ ನಮ್ಮ ಲಿವರ್ ನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.

ಏಲಕ್ಕಿಯಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿರ್ಮೂಲನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮತ್ತು ಇದರ ಸೇವನೆ ನಾವು ಉದ್ವೇಗಕ್ಕೆ ಒಳಗಾಗುವುದನ್ನು ಕಡಿಮೆಮಾಡುತ್ತದೆ. ಏಲಕ್ಕಿ ಒಂದುರೀತಿಯ ಸುಗಂಧಭರಿತ ಮಸಾಲೆ ಪದಾರ್ಥ ಇದರ ಸೇವನೆಯಿಂದ ಬಾಯಿಯಲ್ಲಿರುವ ದುರ್ಗಂಧ ಕಡಿಮೆಯಾಗುತ್ತದೆ ಜೊತೆಗೆ ಹಲ್ಲಿಗೆ ಸಂಬಂಧಿಸಿದ ಆರೋಗ್ಯ ಉತ್ತಮವಾಗಿರುತ್ತದೆ ಅಷ್ಟೇ ಅಲ್ಲದೆ ಇದು ಉಸಿರಾಟಕ್ಕೆ ಸಂಬಂಧಿಸಿದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಅಸ್ತಮಾ ಕಾಯಿಲೆ ಇರುವವರು ಆಗಾಗ ಏಲಕ್ಕಿಯನ್ನು ಸೇವಿಸಬೇಕು. ಇದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಹೆಚ್ಚುತ್ತದೆ. ಏಲಕ್ಕಿ ನಮ್ಮ ರಕ್ತವನ್ನು ಶುದ್ಧೀಕರಿಸುವುದಕ್ಕೆ ಸಹಾಯಮಾಡುತ್ತದೆ. ಏಲಕ್ಕಿ ಸೇವನೆಯಿಂದ ಉಂಟಾಗುವ ಪ್ರಮುಖವಾದ ಲಾಭವು ಯಾವುದು ಎಂದರೆ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯವನ್ನು ಹೆಚ್ಚಿಸುವುದು ಅದರಲ್ಲಿಯೂ ಅಜೀರ್ಣ ಅಲ್ಸರ್ ವಾಕರಿಕೆ ವಾಂತಿ ಈ ಸಮಸ್ಯೆಗಳನ್ನು ಗುಣಪಡಿಸುವುದಕ್ಕೆ ಏಲಕ್ಕಿ ಸೇವನೆ ಉತ್ತಮವಾಗಿದೆ.

ಏಲಕ್ಕಿ ಬಳಸಿ ಚಹಾ ಮಾಡಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ವೃದ್ಧಿಯಾಗುತ್ತದೆ. ಏಲಕ್ಕಿಯಲ್ಲಿರುವ ಪೌಷ್ಟಿಕಾಂಶಗಳು ಮತ್ತು ಕೆಮಿಕಲ್ಸ್ ನಾವು ಸೇವಿಸುವ ಆಹಾರವನ್ನು ಆರೋಗ್ಯಕರವಾಗಿ ಜೀರ್ಣವಾಗುವಂತೆ ಮಾಡಿ ಸಣ್ಣ ಕರುಳಿಗೆ ಸರಾಗವಾಗಿ ಕಳಿಸಿಕೊಡುತ್ತದೆ. ಹಾಗೂ ಏಲಕ್ಕಿಯಲ್ಲಿ ಆಂಟಿ ಇನ್ಪ್ಲಾಮೇಟರಿ ಗುಣಗಳಿವೆ ಇದರಿಂದ ದೇಹದ ಅಂಗಾಂಗಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಏಲಕ್ಕಿ ಸೇವನೆಯಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ. ಅದರಲ್ಲೂ ಬಾಯಿಹುಣ್ಣು ಗಂಟಲಲ್ಲಿ ಉರಿಯುತ ಇವುಗಳ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕು ಏಲಕ್ಕಿ ಒಳ್ಳೆಯದು ಎಂದು ಹೇಳಬಹುದು. ನಿದ್ರಾಹೀನತೆ ಸಮಸ್ಯೆಯನ್ನು ಗುಣಪಡಿಸಿಕೊಳ್ಳುವುದಕ್ಕೂ ಏಲಕ್ಕಿಯನ್ನು ಬಳಸಿಕೊಳ್ಳಬಹುದು. ಅತಿಯಾಗಿ ದೇಹದ ತೂಕವನ್ನು ಹೊಂದಿರುವವರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಏಲಕ್ಕಿಯನ್ನು ಸೇವಿಸಬೇಕು.

ಏಲಕ್ಕಿ ಸೇವನೆಯಿಂದ ಕೆಟ್ಟ ಕೊಬ್ಬು ಬೇಗ ಕರಗುತ್ತದೆ. ಏಲಕ್ಕಿಯಲ್ಲಿಯೂ ಸಹ ಕ್ಯಾನ್ಸರ್ ಗೆ ಸಂಬಂಧಿಸಿದ ಜೀವಕೋಶಗಳನ್ನು ನಿರ್ಮೂಲನೆ ಮಾಡುವ ಗುಣ ಇದೆ. ಇನ್ನು ಏಲಕ್ಕಿಯನ್ನು ಹೇಗೆ ಸೇರಿಸಬೇಕು ಎಂದರೆ ಏಲಕ್ಕಿಯನ್ನು ಸಿಪ್ಪೆ ಸಹಿತ ತಿಂದರೆ ಒಳ್ಳೆಯದು ಮಾರುಕಟ್ಟೆಯಲ್ಲಿ ಏಲಕ್ಕಿ ತುಂಬಾ ದುಬಾರಿ ಹಾಗಾಗಿ ಇದರಿಂದ ತುಂಬಾ ಪ್ರಯೋಜನ ಇರುವುದರಿಂದ ಸಿಪ್ಪೆಯನ್ನು ಬಿಡುವುದು ಬೇಡ. ಏಲಕ್ಕಿಯ ಸಿಪ್ಪೆ ಮತ್ತು ಬೀಜ ಎರಡು ತಿನ್ನುವುದಕ್ಕೆ ಯೋಗ್ಯವಾದವುಗಳು.

ಪಿತ್ತಕೋಶದಲ್ಲಿ ಕಲ್ಲಿನ ಸಮಸ್ಯೆ ಇರುವವರು ಏಲಕ್ಕಿ ಸೇವನೆಯನ್ನು ಮಾಡಬಾರದು ಎಂದು ಹೇಳುತ್ತಾರೆ. ಜೊತೆಗೆ ಗರ್ಭಿಣಿ ಮಹಿಳೆಯರು ಏಲಕ್ಕಿಯನ್ನು ಆದಷ್ಟು ಕಡಿಮೆ ಸೇವಿಸುವುದು ಒಳ್ಳೆಯದು ಇನ್ನು ಏಲಕ್ಕಿಯನ್ನು ಒಂದು ದಿನಕ್ಕೆ ಐದುನೂರು ಮಿಲಿ ಗ್ರಾಂಗಿಂತ ಹೆಚ್ಚು ಸೇವನೆ ಮಾಡಬಾರದು. ಯಾವುದೂ ಕೂಡ ಅತಿಯಾಗಬಾರದು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಏಲಕ್ಕಿಯನ್ನು ಸೇರಿಸಿಕೊಳ್ಳಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *