ಈ ಯೋಗ ಮುದ್ರೆ ಮಾಡಿದ್ರೆ ಶಕ್ತಿ ದ್ವಿಗುಣಗೊಳ್ಳುವ ಜೊತೆಗೆ ಕಾಯಿಲೆಗಳಿಂದ ದೂರ

0 12

ಈ ಯೋಗ ಮುದ್ರೆ ಮಾಡಿದ್ರೆ ಶಕ್ತಿ ದ್ವಿಗುಣಗೊಳ್ಳುವ ಜೊತೆಗೆ ಕಾಯಿಲೆಗಳಿಂದ ದೂರ ಸಂಶೋಧನೆಗಳು ಹೇಳುವ ಪ್ರಕಾರ ಯೋಗವು ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗದ ಅಭ್ಯಾಸದಿಂದ ಆರೋಗ್ಯ ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮ ಯೋಗಗಳಿಂದ ಎಷ್ಟೋ ಕಾಯಿಲೆಗಳಿಂದ ದೂರವಿರಬಹುದು. ಅಂತಹ ಕೆಲವು ಯೋಗ ಮುದ್ರೆಗಳ ಪರಿಚಯವನ್ನು ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಮುದ್ರೆಗಳನ್ನು ಪ್ರತಿನಿತ್ಯವೂ ಬಿಡದೆ ಮಾಡುತ್ತಾ ಬಂದಲ್ಲಿ ಆರೋಗ್ಯ ಹಾಗೂ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇಂತಹ ಕೈ ಮುದ್ರೆ ಹಾಗೂ ಯೋಗ ಮಾಡುತ್ತಾ ಬರುವುದರಿಂದ ದೇಹದ ಪ್ರತಿ ಭಾಗಗಳಲ್ಲೂ ಶಕ್ತಿ ಸಂಚಾರವಾಗುತ್ತದೆ. ಮೊದಲನೆಯದಾಗಿ ಜ್ಞಾನ ಮುದ್ರೆ. ಇದರ ಹೆಸರೆ ಹೇಳುವಂತೆ ಜ್ಞಾನ ವೃದ್ದಿಸುವ, ಜ್ಞಾನಕ್ಕೆ ಸಂಬಂಧಿಸಿದ ಮುದ್ರೆಯಾಗಿದೆ. ಇದರಿಂದ ನೆನಪಿನ ಶಕ್ತಿ, ಏಕಾಗ್ರತಾ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದು.

ಎರಡನೆಯದಾಗಿ ವಾಯು ಮುದ್ರೆ. ವಾಯು ಎಂದರೆ ಗಾಳಿ. ಇದು ಗಾಳಿಗೆ ಸಂಬಂಧಿಸಿದೆ. ವಾಯು ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಹೊಟ್ಟೆಯಲ್ಲಿ ಕಟ್ಟಿದ ಕೆಟ್ಟ ಗಾಳಿ ಅಥವಾ ಹೆಚ್ಚಿಗೆ ಶೇಖರಣೆ ಆದ ಗಾಳಿಯನ್ನು ಹೊರಹಾಕಲು ಇದು ಸಾಧ್ಯವಾಗುತ್ತದೆ.

ಮೂರನೆಯದಾಗಿ ಪೃಥ್ವಿ ಮುದ್ರೆ. ಪೃಥ್ವಿ ಎಂದರೆ ಭೂಮಿ. ಭೂಮಿಗೆ ಸಂಬಂಧಿಸಿದ ಮುದ್ರೆ ಇದು. ದೇಹದಲ್ಲಿನ ರಕ್ತ ಸಂಚಾರ ಸುಗಮಗೊಳಿಸಿ, ನಿಶ್ಯಕ್ತಿಯನ್ನು ದೂರಗೊಳಿಸಿ ಚಟುವಟಿಕೆಯಿಂದಿರಲು ಈ ಮುದ್ರೆ ಸಹಾಯ ಮಾಡುತ್ತದೆ.

ನಾಲ್ಕನೆಯದಾಗಿ ಅಗ್ನಿ ಮುದ್ರೆ. ಈ ಮುದ್ರೆಯು ಅಗ್ನಿ ತತ್ವವನ್ನು ಹೊಂದಿದೆ. ಈ ಮುದ್ರೆಯನ್ನು ನಿರಂತರವಾಗಿ ಮಾಡುವುದರಿಂದ ಥೈರಾಯ್ಡ್ ಗ್ರಂಥಿ ಉತ್ತಮವಾಗಿ ಕೆಲಸ ಮಾಡಲು, ಆತಂಕವನ್ನು ದೂರಮಾಡಿ ಜೀರ್ಣಕ್ರಿಯೆಯನ್ನು ದೂರಮಾಡುತ್ತದೆ.

ಐದನೆಯದಾಗಿ ವರುಣ ಮುದ್ರೆ. ಈ ಮುದ್ರೆ ನೀರಿಗೆ ಸಂಬಂಧಿಸಿದ್ದಾಗಿದೆ. ದೇಹದಲ್ಲಿನ ನೀರಿನಾಂಶಗಳ ಪ್ರಮಾಣವನ್ನು ನಿಯಂತ್ರಿಸುತ್ತದೆ. ಚರ್ಮದ ಕಾಂತಿಯನ್ನು ಹಾಗೂ ಆರೋಗ್ಯವನ್ನು ಕಾಪಾಡುತ್ತದೆ.

ಆರನೆಯದಾಗಿ ಶೂನ್ಯ ಮುದ್ರೆ. ಈ ಮುದ್ರೆ ಕಿವಿಗೆ ಸಂಬಂಧಿಸಿದೆ. ಈ ಮುದ್ರೆಯ ನಿರಂತರ ಅಭ್ಯಾಸದಿಂದ ಕಿವುಡುತನದಿಂದ ಮುಕ್ತಿ ಹೊಂದುವುದಲ್ಲದೆ, ಕೇಳುವ ಶಕ್ತಿ ವೃದ್ದಿಸುತ್ತದೆ.

ಏಳನೆಯದಾಗಿ ಪ್ರಾಣ ಮುದ್ರೆ. ಈ ಮುದ್ರೆಯು ಮನುಷ್ಯನ ಜೀವಕ್ಕೆ ಸಂಬಂಧಿಸಿದೆ. ಈ ಮುದ್ರೆಯ ನಿರಂತರ ಅಭ್ಯಾಸದಿಂದ ದೇಹದ ದಣಿವು ನಿಗಿಸಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ಹಾಗೆಯೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ‌. ಆರೋಗ್ಯವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಎಂಟನೆಯದಾಗಿ ಅಪನು ವಾಯು ಮುದ್ರೆ. ಹೃದಯಕ್ಕೆ ಸಂಬಂಧಿಸಿದ ಮುದ್ರೆ ಇದಾಗಿದೆ. ಈ ಮುದ್ರೆಯ ಸಹಾಯದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಹಾಯ ಮಾಡುತ್ತದೆ. ಹಾಗೆಯೆ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಹೃದಯ ಸದೃಢವಾಗುವಂತೆ ಮಾಡುತ್ತದೆ.

ಈ ಕೆಲವು ಮುದ್ರೆಗಳು ನಮ್ಮ ಆರೋಗ್ಯ ಕಾಪಾಡುವಲ್ಲಿ ಸಹಾಯಮಾಡುತ್ತವೆ. ಇಂತಹ ಮುದ್ರೆಗಳ ಹಾಗೂ ಯೋಗಗಳ ಅಭ್ಯಾಸ ಇತ್ತೀಚೆಗೆ ಅವಶ್ಯಕತೆ ಇದೆ.

Leave A Reply

Your email address will not be published.